ಕಾಣದೆ ಕಾಡುವವಳು
ಅಲೆಗಳ ಮೋಡದ ಛಾಯೆ ಅವಳು
ಹುಡುಕುವ ಆಟದಲ್ಲಿ ಅಳಿಸುವವಳು
ತಿಳಿಸುವರಿಲ್ಲ ನನ್ನ ಅವಳಲ್ಲಿ ನನ್ನನ್ನು...-
ಕಿರು ಬೆರಳ ಗಂಟಲ್ಲಿ ನಡೆವಾಸೆ
ನಿನ್ನ ನಗೆಯ ಸದ್ದಲ್ಲಿ
ಸರಪಳಿಯ ಮಾತಲಿ
ಬಾ ಗೆಳತೀ ಹೋಗುವ ತಂಗಾಳಿ ಯೊಡನೆ
ಕೊನೆವರೆಗೂ ನೀ ಇರು ನನ್ನಲಿ ಉಸಿರಾಗಿ-
ಅರಿಯದ ಮನಸಿಗಾಗಿ
ಹರಕೆಯ ಹೊತ್ತು ಸಾಗುವ
ಬದುಕಿಗೆ ಪಲವಿಲ್ಲ
ಸಾಗಬೇಕು ಬದುಕಿನ ಕಾಲ ಚಕ್ರದಂದೇ
ಅವನ ನಂಬಿ.-
ಅಪರೂಪದ ಮಾತು,
ಪಯಣ ಒಂದೇ
ಸಮಯ ಒಂದೇ
ಆದರೂ ಮಾತು ಅಪರೂಪ
ಕಂಡರೂ ಕಾಣದಂತೆ
ಇದ್ದರು ಇಲ್ಲದಂತೆ
ಅಪರೂಪ ನಮ್ಮಿಬ್ಬರ ಮಾತು
ತುಟಿಗಳ ಬಿಗಿದು ಬೆರಳುಗಳ
ತಣಿಸಿ ನಡೆಯುವುದು ಇಬ್ಬರ
ಅಪರೂಪದ ಮಾತು.-
ಎಷ್ಟು ಚೆಂದ ನಿನ್ನಯ ಅಂದ
ಹೂಗಳೆಲ್ಲ ತುಂಬಿಸಿದೆ ನಿನ್ನಲ್ಲಿ ಮಕರಂದ
ಮರೆಯಾಗದಿರು ನನ್ನಿಂದ
ನೀ ಇದ್ದಾರೆ ನನ್ನ ಬದುಕೆಲ್ಲ ಸುಗಂಧ.-
ಕಣ್ಣೀರು
ಖುಷಿ ಆದ್ರೂ ಹೊರಗೆ ಬರತ್ತೆ
ದುಃಖ ಆದ್ರೂ ಹೊರಗೆ ಬರತ್ತೆ
ಯಾವತ್ತೂ ತನ್ನ ಬಣ್ಣ ಬದಲಾಯಿಸೋಲ್ಲ
ಆದ್ರೆ ಮನುಷ್ಯ?-
ಮನಸ್ಸು
ಬಯಸುಹುದು ಎಲ್ಲವನ್ನು.
ಬಯಕೆಯ ದಾರಿ ಅರಿಯದೆ
ಕನಸಿನ ಕಲ್ಪನೆ ತಿಳಿಯದೆ
ಸಿಗುವುದೋ ಇಲ್ಲವೋ ಅರಿವಿಲ್ಲದೆ
ಬಯಸುವುದು ಮನಸ್ಸು
ಸ್ಥಿರವಿಲ್ಲದ ಬದುಕಲ್ಲಿ ಎಲ್ಲವು ಬೇಕೆಂದು.-
ಸೂರ್ಯ ಹುಟ್ಟುವ ಮುನ್ನ
ಶುರುವಾಯಿತು ಮಾತು
ನೀವು ಅಲ್ಲಿ ನಾ ಇಲ್ಲಿ
ಹೊಸ ಪರಿಚಯ ಒಂಥರ
ಚೆಂದ ಗುಟ್ಟಾದ ಮಾತು
ನಿಮಗೆ ಗೊತ್ತು ನನಗೆ ರಟ್ಟು-
ಸಾಗಿದೆ ಬದುಕು
ನನ್ನ ಬದುಕಿನ ಹಾದಿಯ ತೊರೆದು,
ಸುಳಿವೇ ನೀಡದೆ
ಕರೆದೊಯುತಿದೆ ತನ್ನದೇ
ಹಾದಿಯಲಿ.-
ಒಮ್ಮೊಮ್ಮೆ ನೆನಪಾಗುತ್ತಾಳೆ
ಭ್ರಾಮಿ ಮೂಹೂರ್ತದ ಕತ್ತಲಲ್ಲಿ
ಮಾತಾಡುತ್ತಾಳೆ ಆಗಾಗ
ಹುಣ್ಣಿಮೆ ಅಮಾವಾಸೆಯಲಿ
ಅವಳಿಲ್ಲ ಜೊತೆಯಲ್ಲಿ
ಕಾಳಜಿ ತೋರುತ್ತಾಳೆ
ಹೂ ದುಂಬಿಯ ಮಕರಂದವಾಗಿ.-