"ಕಾಯಕದಲ್ಲಿ ಕೈಲಾಸಕಂಡ
ವಿಶ್ವಗುರು"
"ಜಾತಿಯನ್ನ ಹೋಗಿಸಲು
ಪಣತೊಟ್ಟ ಪರಮಾತ್ಮ"
"ಕರ್ನಾಟಕದ ಕೀರ್ತಿದೀಪ"
"ಬಸವ ಜಯಂತಿಯ
ಹಾರ್ದಿಕ ಶುಭಾಶಯಗಳು"-
ಮನದೊಳಗೆ ಕೊಳಕಿದ್ದರೂ
ಮೈ ಕೊಳೆಯ ತಿಕ್ಕಿ ತೊಳೆದು,
ಪೂಜಿಸಿದರೇನು ಫಲ!
ನಿನ್ನ ಅಂತರಂಗವನ್ನು
ಶುದ್ಧಿಗೊಳಿಸಿ ನೋಡು,
ಆತ್ಮದೊಳಗೆ ದೈವವೇ
ಪ್ರತಿಷ್ಠಾಪನೆಯಾಗುವುದು!-
"ಬಸವಣ್ಣನವರ ಪರಿವರ್ತನಾತ್ಮಕ ಮನೋಧರ್ಮ: ಅಂದು-ಇಂದು-ಮುಂದು."
ಅಧ್ಯಾಯ ೫-
ಕಾಯಕ ಮತ್ತು
ದಾಸೋಹ
(ಕ್ಯಾಪ್ಷನಲ್ಲಿ ಓದಿ)-
ಅಂದು ಜಗಕೆ
ಬಂದ ಬಸವ
ನೊಂದ ಜನಕೆ
ತಂದ ಕಸುವ
ಕಟ್ಟಿದನವ
ಶರಣ ಸಂಸತ್ತು
ನೀಡಿದನವ
ವಚನ ಸಂಪತ್ತು
ಜನಮನಕೆ
ಅನುಭಾವದನುಭೂತಿ,
ಸಂಸ್ಕಾರಧಾರೆ
ಎರೆದು ಹೋದ ಜ್ಯೋತಿ
*ಬಸವ ಜಯಂತಿಯ ಶುಭಾಶಯ ಸರ್ವರಿಗೂ*-
ಬಸವಣ್ಣ ಓ ಬಸವಣ್ಣ
ಕರ್ನಾಟಕದ ಬುದ್ಧ ನೀನಣ್ಣ
ನೀ ಅಂದೇ ಎಲ್ಲರೂ ಸಮಾನರೆಂದೆ
ಲಿಂಗಭೇದ ಮಾಡಬೇಡಿರೆಂದೆ
ಆದರೆ ಅದಿನ್ನೂ ಚಾಲ್ತಿಯಲ್ಲಿದೆ ತಂದೆ
ಒಂದು ವರ್ಗ ನಿಮ್ಮನ್ನು ನಮ್ಮವರೆಂದು ನುಂಗಿತು
ನೀವು ಎಲ್ಲರ ಸ್ವತ್ತೆಂಬ ಮಾತು ಭರವಸೆ ಇಂಗಿತು-
ನಮ್ಮಲ್ಲಿ ಎಷ್ಟು ಜನ ನಮ್ಮ ಒಡಹುಟ್ಟಿದವರಾಗಲಿ,
ನಮ್ಮ ಸಂಬಂಧಿಕರಗಾಲಿ,
ಬೇರೆ ಕುಲದವರನ್ನು ಪ್ರೀತಿಸಿದರೆ..!
ಮದುವೆಯಾದರೆ..!
ಸುಮ್ಮನಾಗುತ್ತೇವೆ
& ಸುಮ್ಮನಿರುವಿರಿ...?
ಜಾತಿ - ವರ್ಣ- ವರ್ಗ - ಲಿಂಗ ಬೇಡವೆಂದವರು ಬಸವ
ಕೆಲವರಿಗೆ ಬಸವಣ್ಣ ಸಿಕ್ಕರೆ.
ಇನ್ನು ಹಲವರು ಬಸವಣ್ಣನನ್ನು ಹುಡುಕುತ್ತಿದ್ದಾರೆ..
ನಮ್ಮ ಅಂತರಂಗ ಮತ್ತು ಬಹಿರಂಗ ಶುದ್ದಿಯಾದರೆ
ಬಸವ ನಮ್ಮಲ್ಲಿಯೇ ನೆಲೆಸಿರಬಹುದು...🙏-