ಪ್ರಥಮವು ಅವಳೇ
ಪ್ರಪಾತಕ್ಕೆ ಬಿದ್ದರು ಅವಳೇ,
ಅಜ್ಜಿಯಾಗಿ,
ತಾಯಿಯಾಗಿ,
ಸೋದರಿಯಾಗಿ,
ಸ್ನೇಹಿತೆಯಾಗಿ,
ಸಂಗಾತಿಯಾಗಿ,
ಮಗಳಾಗಿ,
ಸೊಸೆಯಾಗಿ,
ಮೊಮ್ಮಗಳಾಗಿ,
ಅಂಗಳದಿಂದ
ಅಂತರಿಕ್ಷದವರೆಗೆ,
ಕಠಿಣದಿಂದ
ಸುಲಭದವರೆಗೆ,
'ಆದಿ'ಯು ಅವಳೇ
'ಅಂತ್ಯ'ವು ಅವಳೇ..
ಮಹಿಳಾ ದಿನಾಚರಣೆಯ ಶುಭಾಶಯಗಳು.🙏-
ಅರೆಬೆಂದ ಸಾಹಿತಿ..☺️
ಟೈಮ್ ಸಿಕ್ಕಾಗ ಊರೂರು ಸುತ್ತೋದು ಮತ್ತು ಸ್ವಲ್ಪ ಓದೋ... read more
ಲೈಫು ಈ ಹಬ್ಬ ಇದ್ದಂಗ್...
ಜನಕ್ಕ ಎತ್ಕೊಂಡ್ ಮೆರೆಸುದು ಗೊತ್ತ,
ತಂಗೊಂಡ್ ಹೋಗಿ ಕೇರಿದಾಗ ಮೂಳಗಿಸೋದ ಗೊತ್ತ...
ಮನೆಗೆ ಬರುವ ಗಣಪ ಪ್ರೀತಿ, ವಾತ್ಸಲ್ಯ, ಕರುಣೆ,ದಯೆ,ಧರ್ಮ ಹೊತ್ತು ತರಲಿ..
ಜೈ ಗಣೇಶ.....🙏
-
ನವಮಾಸ ಹೊತ್ತು ಸಾಕಿ ಸಲಹುತ್ತಿರುವ ಅನ್ನಪೂರ್ಣಯೆಯಾದ ತಾಯಿಗೆ,
ನನಗೆ ತಂದ ಅಂಗಿಯನ್ನು ಮೊದಲು ಅವಳು ಹಾಕಿಕೊಂಡು ನಲಿದ ಸಹೋದರಿಗೆ,
ಅ ದಿಂದ ಜ್ಞ ವರೆಗೆ A ದಿಂದ Z ವರೆಗೆ ವಿದ್ಯೆ ನೀಡಿದ ವಿದ್ಯಾ ಮಾತೆಗೆ,
ಹರಟೆ ಹೊಡೆಯುತ್ತಾ ಬೈ-ಟು ಚಾ ಹೀರಿದ ಗೆಳತಿಗೆ,
ಬದುಕಿನ ಪಯಣದಲ್ಲಿ ಜೊತೆಯಾಗುವ ಮಾನಿನಿಗೆ,
ಭವಿಷ್ಯತ್ತಿನ ಪ್ರೀತಿಯ ಮನೆ ಮಗಳಿಗೆ...
ಎಲ್ಲರಿಗೂ ಮಹಿಳಾ ದಿನಾಚರಣೆಯ ಪಿರುತಿಯ ಶುಭಾಶಯಗಳು..❣️🙏☺️
ಅವಳ ಆಚರಣೆಗೆ ಈ ದಿನವಿರಲಿ,
ಅವಳಿಗೆ ನೀಡುವ ಗೌರವಕ್ಕಲ್ಲ....-
ತಂದೆ x ತಾಯಿ, ರಾಜ × ರಾಣಿ ಇವು ವಿರುದ್ಧ ಪದಗಳಲ್ಲ. ವಿರುದ್ಧಲಿಂಗ ಶಬ್ದಗಳು,
ಗಂಡ x ಹೆಂಡತಿ, ಅಪ್ಪ × ಅಮ್ಮ ವಿರುದ್ಧ ಪದಗಳಾಗಿಬಿಟ್ಟರೆ ಸಂಸಾರದ ಹಾಗೂ ಸಮಾಜದ ಗತಿಯೇನು?
ಹಾಗಾಗಿ ಕನ್ನಡವನ್ನು ಚೆನ್ನಾಗಿ ಬಳಸೋಣ, ಬೆಳಸೋಣ.
ದಿನಕ್ಕೆ ಒಂದಾದರೂ ಹೊಸ ಕನ್ನಡ ಶಬ್ದವನ್ನು ಕಲಿಯಲಾಗದಿದ್ದರು,
ವಾರಕ್ಕೆ ಒಂದಾದರೂ ಕಲಿಯೋಣ.
ಕನ್ನಡ💛❤️-
ಕನ್ನಡಿಗನಾಗಿ,
ಸರಳ ವ್ಯಕ್ತಿತ್ವದ ಆರಾಧಕನಾಗಿ,
ಮತ್ತೆ ಅದೇ ನಿಷ್ಕಲ್ಮಶ ನಗುವಿನ ರಾಯಭಾರಿಯಾಗಿ,
ಮತ್ತೆ ಅರಳಿ ಬೆಟ್ಟದ ಹೂವಾಗಿ,
ಕನ್ನಡಿಗರ ಪ್ರೀತಿಯ ಅಪ್ಪುಗೆ ಬಯಸುವ ಅಪ್ಪುವಾಗಿ.🙏🙏🙏💔
-
Is ಗೂ ಮತ್ತೆ was ಗೂ ಮಧ್ಯ ಇರುವುದು
ಉಸಿರು ಮಾತ್ರ..
ಅವರಿಂದ ನಾವು ಕಲಿಯಬೇಕಾದದ್ದು
ಸರಳತೆ ಮತ್ತು ನೇತ್ರದಾನ ...
ಯಾವಾಗಲೂ ನೀವು 'ನಮ್ಮ ಬಸವ'
ಮತ್ತೆ 'ವೀರ ಕನ್ನಡಿಗ'ನಾಗಿ ಮತ್ತೆ ಕನ್ನಡ ನೆಲದಲ್ಲಿ ಹುಟ್ಟಿಬನ್ನಿ 'ಪರಮಾತ್ಮ'.🙏-
ಈಗ ಎಲ್ಲರಲ್ಲೂ ಒಂದೇ ಶಬ್ದ ಗಣೇಶ ಬಂದಾ ಗಣೇಶ ಬಂದಾ. ಆದರೆ ಈ ಗಣೇಶ ಭೂಮಿಗೆ ಬರಬೇಕಾದರೆ ಗೌರಿ ಮೊದಲೇ ಬಂದಿರಬೇಕು ಎಂಬುವುದು ನಿಮಗೆ ತಿಳಿದಿರಲಿ.
ಭಾದ್ರಪದ ಶುಕ್ಲ-ತದಿಗೆಯಂದು ಗೌರಿಯು ಕೈಲಾಸದಿಂದ ಭೂಮಿಗೆ ಬರುತ್ತಾಳೆ.
ಭಾದ್ರಪದ ಶುಕ್ಲ-ಚೌತಿಯಂದು ಗಣೇಶ ಬರುತ್ತಾನೆ.
ಅವಳನ್ನು ಕರೆದು ತವರು ಮನೆಯ ಆತಿಥ್ಯ ಮಾಡಿ ವಾಪಸ್ಸು ಮಗನೊಂದಿಗೆ ಕಳುಹಿಸಿಕೊಡುವುದೇ ಈ ಹಬ್ಬದ ವಿಶೇಷ.
ಅಮ್ಮನನ್ನು ಮಾರನೆ ದಿನ ಮಗ ಗಣೇಶ ಬಂದು ಕೈಲಾಸಕ್ಕೆ ಕರೆದುಕೊಂಡು ಹೋಗುವುದು ಈ ಗೌರಿ ಗಣೇಶನ ಹಬ್ಬದ ವಿಶೇಷತೆ.
ಮತ್ತೆ ಗಣಪ ಪ್ರಥಮ ಪೂಜಿತ ಮತ್ತು
ಯೋಗದಲ್ಲಿ ಮೂಲಾಧಾರ ಚಕ್ರ ( Root chakra) ಗಣಪನಿಗೆ ಮೀಸಲು.
ಗಣಪ ಎಲ್ಲರಿಗೂ ಒಳ್ಳೆಯದು ಮಾಡಲಿ 😊🙏
-
ಸಾವಿರ ಸ್ನೇಹಿತರು ಇರುವುದಕ್ಕಿಂತ
'ಸಾವಿ'ರದ ಸ್ನೇಹಿತರು
ಇರುವುದು ಉತ್ತಮ..
ಯಾವಾಗಲೂ ನಿಮ್ಮ ಸ್ನೇ'ಹಿತ'ವಾಗಿರಲಿ.
😊🤝🏻-
ನಮ್ಮಲ್ಲಿ ಎಷ್ಟು ಜನ ನಮ್ಮ ಒಡಹುಟ್ಟಿದವರಾಗಲಿ,
ನಮ್ಮ ಸಂಬಂಧಿಕರಗಾಲಿ,
ಬೇರೆ ಕುಲದವರನ್ನು ಪ್ರೀತಿಸಿದರೆ..!
ಮದುವೆಯಾದರೆ..!
ಸುಮ್ಮನಾಗುತ್ತೇವೆ
& ಸುಮ್ಮನಿರುವಿರಿ...?
ಜಾತಿ - ವರ್ಣ- ವರ್ಗ - ಲಿಂಗ ಬೇಡವೆಂದವರು ಬಸವ
ಕೆಲವರಿಗೆ ಬಸವಣ್ಣ ಸಿಕ್ಕರೆ.
ಇನ್ನು ಹಲವರು ಬಸವಣ್ಣನನ್ನು ಹುಡುಕುತ್ತಿದ್ದಾರೆ..
ನಮ್ಮ ಅಂತರಂಗ ಮತ್ತು ಬಹಿರಂಗ ಶುದ್ದಿಯಾದರೆ
ಬಸವ ನಮ್ಮಲ್ಲಿಯೇ ನೆಲೆಸಿರಬಹುದು...🙏-
ಯುಗಾದಿ ಹಬ್ಬ ಸ್ವೀಟಾಗಿರ್ಲಿ,🤗
ನೆಟ್ಟಗಿಲ್ದಿರೋ ಲೈಫು ನೆಟ್ಟಗಾಗಲಿ,
ನಿಮ್ಮ ನೆಟ್ ಸ್ಪೀಡಾಗಿರ್ಲಿ,😀
ಬ್ಯಾಸಗ್ಯಾಗ ಮನೆ,ಮನಸ್ಸು ತಣ್ಣಗಿರ್ಲಿ,
ನಿಮ್ಮ ಬದುಕಲ್ಲಿ
ಕಹಿ ಕಮ್ಮಿಇರ್ಲಿ,😊
ಖುಷಿ ನುರ್ಮಡಿಯಾಗಲಿ.
ಹ್ಯಾಪಿ ಯುಗಾದಿ..😍
-