ನಿನ್ನ ನಗು
ಮನಸ್ಸನ್ನು ಮೃದುವಾಗಿ ತಾಕಿತ್ತು
ಕನಸಲ್ಲಿಯು ಕಾಡಿತ್ತು
ನಿನ್ನ ನೋಡಿ ಮಂದಹಾಸ ಮೂಡಿತ್ತು
ನನ್ನ ಚಲುವೆಯು ನಿನಗೆ
ಮರುಳಾಗಿ ನನ್ನ
ಹೃದಯದರಮನೆಗೆ ಕಾಲಿಟ್ಟಳು
ಹೇ ಹೂವೆ ನೀ ನನಗೆ ಸ್ಪೂರ್ತಿ
ಸಿಹಿಯಾದ ಸಂತೋಷ-
ನನ್ನವಳದು..
ಅವಳ ನಗುವಿಗೆ
ನವಿಲೇ ನಾಚುವುದು..
ಗುಲಾಬಿ ಹೂವಿಗೆ
ಮುಳ್ಳು ಕಾವಲಿರುವಂತೆ.,
ನಾನವಳಿಗೆ ಕಾವಲು....-
ನೋವುಗಳ ಕೊಲೆಮಾಡಿದಾಕಿ
ನಲಿವುಗಳಿಗೆ ಜನ್ಮದಾತೆ,
ದ್ವೇಷಕ್ಕೆ ಮೋಸಮಾಡಿದಾಕಿ
ಪ್ರೀತಿಗೆ ಜನುಮದಾತೆ,
ಮುಳ್ಳುಗಳ ದಳ್ಳುರಿಗೆ ಹಾಕಿದಾಕಿ
ಹೂವಾಡಗಿತ್ತಿ ನನ್ನ ಒಡತಿ,
ಮರಭೂಮಿಗೆ ಕಂಟಕವಾದಾಕಿ
ಹಸಿರುಡುಗೆಯ ಗೌಡತಿ.
ಕುರುಪತನಕ್ಕೆ ವೈರುದ್ಯವಾದಾಕಿ
ಗುಲಾಬಿ ಹೂವಿಂದ ಕಟ್ಟಿದಳು ವಸತಿ.-
ಹೂವಂತ ಪದಗಳನು
ಮಾಲೆಯಂತೆ ಜೋಡಿಸಿ
ಸಂತಸವನು ಮುಡಿವಳವಳು
ಮಲ್ಲಿಗೆಯಂತ ಮೊಗದವಳು
ಸುಗಂಧದಂತೆ ಪ್ರೀತಿಯ
ಸುರಿಸಿ ನೋವನು ಮರೆಸಿ
ನಗುವನು ಹರಡುವಳವಳು
ಸಂಪಿಗೆಯಂತ ಗುಣದವಳು
ಮುಟ್ಟಿದರೆ ಮುನಿ'ಯಂತ
ಮುಂಗೊಪವನು ಮೂಗಿನ
ತುದಿಯಲಿ ಇರಿಸಿಕೊಂಡವಳವಳು
ತಟ್ಟನೆ ನಕ್ಕು ನಗಿಸುವವಳು-
ನಿನ್ನ ಕುಡಿನೋಟದ
ಕಣ್ಣ ನಡಿಗೆಯ
ತೋಟದಲ್ಲಿ ಹುವಾಗಿ
ಅರಳುವ ಬಯಕೆ
ನೀ ಪೋಣಿಸಿದ ಆ ಹೂವದ
ದಾರವಾಗಿ ಹಾರವಾಗಿ
ನಿನ್ನ ಸೇರುವ ಬಯಕೆ-
ಕರುಣೆಯೇ ಆಧಾರ..
ಮಮತೆಯ ಆಗರ..
ಪ್ರೀತಿಯ ಸಾಗರ..
ಇದೇ ಅಲ್ಲವೇ ಹೂವಿನಂತಹ ಮನಸ್ಸಿನ ಆಚಾರ ವಿಚಾರ..!! ❤️-
ಸೂರ್ಯನಂತೆ ತೇಜಸ್ಸು
ಚಂದ್ರನಂತೆ ಓಜಸ್ಸು...
ಸಿಗಲಿ ಎಲ್ಲರಿಗೂ
ಉತ್ತಮವರ್ಚಸ್ಸು
ದೂರವಾಗಲಿ ತಮಸ್ಸು
-
ತಿರು ತಿರುಗಿ ನೋಡಬೇಕೆನ್ನಿಸುವಂಥ
ರೂಪ ಖಂಡಿತ ಅವನದಲ್ಲ
ಕಣ್ಣಲ್ಲೇ ಕೆಣಕಿ ಇಣು ಇಣುಕಿ ಕಾಡೊ
ನೋಟ ಕೂಡ ಅವನದಲ್ಲ
ಅವನೆದುರು ಬಂದಾಗಲೇ ಈ ಹೃದಯ
ಕಳೆದು ಹೋಗಿದೆ ಮೆಲ್ಲ
ಹಲವು ಕಲ್ಪನೆಗಳು ಹುಚ್ಚು ಹುಚ್ಚಾಗಿ
ಕನಸಾಗಿ ಕಾಡುತ್ತಿವೆಯಲ್ಲ
ಅವನತ್ತ ವಾಲುತ್ತಿದೆ ಈ ಮನಸೀಗ ನನ್ನದಲ್ಲ
ಅದಕೆ ಕಾರಣ ನಿನ್ನಂದವಲ್ಲ ಮರುಳೆ
ನಿದಿರೆ ಬಾರದೆ ಕಂಗೆಡಿಸುತಿದೆ ನಿನ್ನಲ್ಲಿರುವ
ಹೂವಿನಂಥ_ಮನಸ್ಸು ಹಗಲಿರುಳೆ.
-
ನಿನ್ನ ಮುಖಕ್ಕೆ ಸರಿ ಕಾಣುತ್ತಿಲ್ಲ ಮುನಿಸು
ನೆಟ್ಟನ ಮೂಗಿಗೆ ಗಟ್ಟಿ ಬಂಗಾರದ ನತ್ತು
ಆ ನತ್ತಿನ ಸುತ್ತ ಮುತ್ತಿನಂತೆ ಕಾವಲಿರುವೆ
ಬಟ್ಟಲಗಣ್ಣಿಗೆ ತೀಡಿ ತೀಡಿ ಕಾಡಿಗೆ ಹಚ್ಚುವೆ
ಕಾಡಿಗೆ ಅಂದ ಕಂಡು ನನ್ನ ನಾಡಿ ಹಾಡಿದೆ
ನಿನ್ನ ಕೋಮಲ ಕಾಲ್ಗಳಿಗೆ ಬೆಳ್ಳಿ ಗೆಜ್ಜೆ ಹಾಕುವೆ
ಆ ಹೆಜ್ಜೆ ಗೆಜ್ಜೆಯಾ ಸದ್ದು ಕಿವಿಯಲಿ ರಿಂಗಣವಾಗಿದೆ-
ಇರುವಾಗ ಅರಿಯದೇ
ತೊರೆದಾಗ ಕಾಡುತ್ತಿದೆ
ನೆನಪುಗಳ ಸರಮಾಲೆ
ಹೂ ಮನ ನಿನ್ನದು
ಕಲ್ಲುಮನಸು ನನ್ನದು-