Kill your sorrows with
Beautiful smile-
ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸುವ ಭಾವುಕ ಜೀವಿ
Music🎶Books📚 Movies📽️
Music and lyrics l... read more
ಅಣ್ಣಾ
ಅದು ಯಾವ ಗಳಿಗೆಯಲ್ಲಿ
ಬೆಸೆಯಿತೋ ಈ ಬಂಧ
ಬಿಟ್ಟಿರಲಾರದಷ್ಟು
ಆಳವಾಗಿಹುದು ಸಂಬಂಧ
ಬೇಸರವಾದಾಗ ನಗಿಸುವ
ಗೆಳೆಯನೂ ನೀನೇ
ನನ್ನ ನಿಂದಿಸುವಂತೆ ಮಾತಾಡಿ
ಅಳಿಸೋ ಶತ್ರುವೂ ನೀನೇ
ನನ್ನ ಉಪದೇಶ ಅವಗಣಿಸುವುದೇ
ನಿನ್ನ ಕೆಟ್ಟ ಚಾಳಿ
ಅದನ್ನಿಡಿದು ಗದರುವುದೇ
ನನ್ನ ಹೊಸ ಖಯಾಲಿ
ಸದಾ ಇತರರ ಖುಷಿಯಲಿರಿಸೋ
ನೀ ಸ್ಫೂರ್ತಿ ಯ ಚಿಲುಮೆ
ಹೀಗೆ ಚಿರಕಾಲವಿರಲಿ
ನಿನಗೆ ನನ್ನ ಮೇಲಿನೊಲುಮೆ-
ಕಾಲವೇ,
ನಿನ್ನಲ್ಲೊಂದು ಪುಟ್ಟ (?) ಕೋರಿಕೆ
ಮುಂದಕ್ಕೆ ಬಹಳ ವೇಗವಾಗಿ
ನನ್ನ ಕರೆದೊಯ್ಯುವ ನೀನು
ಹಿಂದಕ್ಕೆ ಒಮ್ಮೆ ಎನ್ನ ಕರೆಯ ಬಾರದೇ
ಮತ್ತೆ ಪುಟ್ಟ ಹುಡುಗಿ ಯಾಗಿ
ಮನೆ ತುಂಬಾ ಓಡಾಡುತ್ತಾ
ಬಾಯ್ ತುಂಬಾ ಮಾತಾಡುತ್ತಾ
ಚಿಂತೆ ಇಲ್ಲದೆ ಮಲಗುವ ಆಸೆ
ದೊಡ್ಡವಳಾದರೆ ಸಾಕೆಂದು
ಪ್ರಾರ್ಥಿಸುತ್ತಿದ್ದಾಗ ಅರಿತಿಲ್ಲ
ಪ್ರಾಯ ಸಂದಂತೆ ಜವಾಬ್ದಾರಿ
ಹೆಚ್ಚುತ್ತ ಹೋಗುವುದೆಂದು
ಇಂದೇಕೋ ಮತ್ತೆ ಮರಳಬೇಕು
ಅನಿಸುತ್ತಿದೆ ಬಾಲ್ಯದತ್ತ
ಮತ್ತೆ ಎಲ್ಲರ ನಿಷ್ಕಲ್ಮಶ
ಸ್ನೇಹ ಪಡೆಯಬೇಕು
ಪಯಣಿಸಬೇಕು ಮತ್ತೆ ಬಾಲ್ಯದೂರಿಗೆ
ಕಾಲವೇ ಎಲ್ಲಿರುವೆ ನೀನು
ಎನ್ನ ಕೋರಿಕೆ ಮನ್ನಿಸಿ ಕರೆದೊಯ್ಯ ಬಾರದೇ
ಆ ಹಳೆಯ ದಿನಗಳ ಕಡೆಗೆ-