ಹದಿಹರೆಯ.
ಹರೆಯದ ವಯಸ್ಸಿನಲ್ಲಿ,
ದುಡುಕುವುದು
ಪ್ರಾಯ.
ಅರಿಯದೆ ಮೈಮನ ಒಡ್ಡಿ;
ಆಯಾ ತಪ್ಪಿ, ಆಯಿತು
ಗಾಯ.-
ಉದುರೆಲೆಯ ಕಂಡು
ಹದಿಹರೆಯದೆಲೆ ನಕ್ಕು
ಕೇಳಿತು, ಯಾಕೆ ಬಿದ್ದೆ?..
ಉದುರೆಲೆ ಹೇಳಿತು
ಹಿಂದೆ ನಾನೂ ನಕ್ಕಿದ್ದೆ!!!-
ಕನಸುಗಳ ಕಾವಲಿ ಗೆ
ಕಲ್ಪನೆಗಳೇ ಬೆಂಗಾವಲು
ಪುಳಕನ್ನೀಯುವ ಕಣ್ಣುಗಳಿಗೆ
ನಿನ್ನ ಮುಂಗುರುಳೇ ಕಾವಲು..!
ತುಟಿಯಲ್ಲಿ ತುಂಬಿರುವ
ಮಧುವನ್ನೀರುವ ಸಮಯದಿ
ಸುಖದ ಸ್ಪರ್ಶವೇ ಕಣ್ಗಾವಲು
ಬಳಕುವ ನಡುವು
ನೀಡುತಿದೆ ಗಡುವು
ಬಿಚ್ಚಿಟ್ಟ ಗೆಜ್ಜೆ ಮುಚ್ಚಿಟ್ಟ ಲಜ್ಜೆ
ಮಾಡುತಿರೆ ಸಣ್ಣಗೆ ಸಜ್ಜೆ ಮೇಲೆ ಸಜ್ಜೆ
ಇಟ್ಟಾದ ಬಳಿಕ ಹೆಜ್ಜೆ ಮೇಲೆ ಹೆಜ್ಜೆ
ಆಸೆಗಳ ಬದಿಯ
ಬಯಕೆಗಳ ತುದಿಯ
ಹದಿಹರೆಯದ ಬೆದಿಯ
ಬೀದಿಯಲ್ಲಿಡದೇ
ಕೋಣೆಯ ಬಾಗಿಲ
ಒಳಗಡಿಯಲ್ಲಿಡು..!
__✍🏻ದೇವಕಿ ಕಂದ ಗುರು ಡಿ.
-
"ಹದಿಹರೆಯ"
ಹ:- ಹದಿನೆಂಟರ ಪ್ರಾಯ
ದಿ:-ದಿಕ್ಕುತಪ್ಪುವ ಲಯ
ಹ:-ಹರಕು ಕನಸುಗಳ ಛಾಯ
ರೆ:- ರೇಸು ಕುದುರೆಯ ಮಾಯ
ಯ:- ಯಮರಾಜನಿಗೂ ಭಯ..!😜-
'ಗರ್ಭಧಾರಣೆ'
ಹೆಣ್ಣಿಗೆ ತಾಯ್ತನವನ್ನು
ನೀಡುವ ಅನುಪಮ ಘಟ್ಟ..
ಆದರೆ ಕೆಲ ಹದಿಹರೆಯದ,
ಅಪ್ರಬುದ್ಧ ಪ್ರೇಮಿಗಳಿಂದ
'ಭ್ರೂಣಹತ್ಯೆ' ಗೆ ದಾರಿ
ಮಾಡಿಕೊಡೈತ್ತಿದೆ...!!-
ಹದಿ ಹರೆಯದ ವಯಸ್ಸದು
ಯಾರೆಷ್ಟೇ ತಿಳಿ ಹೇಳಿದರು
ಅರಿವೇ ಇಲ್ಲದಂತೆ ವರ್ತಿಸೊ
ಸ್ವಭಾವದ ವಯಸ್ಸದು
ಅರಿವಾಗದು ತಪ್ಪು ಹಾದಿಯ
ಹೆಜ್ಜೆ,,
ಜೀವನವು ಹಾಗೆ ಅನುಭವದ
ನುಡಿಗಳೆಲ್ಲವು ಸರಿಹೆಜ್ಜೆಯ
ಮಾತುಗಳೆ ಆದರು ಅರಿವಾಗದು
ಹದಿ ಹರೆಯದ ವಯಸ್ಸಿನ
ಹುಮ್ಮಸ್ಸಲ್ಲಿ,,,-
ಎತ್ತಲೋ ಸಾಗಿದೆ
ನನ್ನೀ ಬದುಕಿನ್ಹಾದಿ
ನೋವನ್ನೆಲ್ಲವ ಅಡಗಿಸಿ
ಒಮ್ಮಮೆಯಾದರು
ನಗುವಾಸೆ ಮನಬಿಚ್ಚಿ
ನಗೆಯಲ್ಲೊಂದು ನೋವು
ತಡೆದಂತಿದೆ ನನ್ನೆಲ್ಲಾ
ನಗೆಯನು,,-
ಹದಿಹರೆಯದಲೆಗೆ ಚಿಗುರು ಬಂದರೂ
ಮುಪ್ಪು ಬಂದಾಗ ಉದಿರಬೇಕು
ಯಾವುದೂ ಇಲ್ಲಿ ಶಾಶ್ವತವಲ್ಲ
-
ಹದಿಹರೆಯ
ಹದಿಹರೆಯದ ಮಕ್ಕಳ
ಮನಸ್ಸು ಚಂಚಲ
ಬೈದು ಬುದ್ಧಿ ಹೇಳಿದರೂ
ಕೇಳುವ ಕಿವಿ ದೂರ..
ಸ್ನೇಹಿತರ ಮಾತಿನಲ್ಲಿ
ವಿಶ್ವಾಸ ಅಪಾರ
ತಪ್ಪದಿರಿ ಎಚ್ಚರ
ಬೀಸುವರು
ಮೋಸದ ಜಾಲ..
•••-