ಅಪರೂಪಕ್ಕೆ ಗೀಚಲು ಹೋದ ನನಗೆ ಬೇರಾವ ವಿಷಯವು ಹೊಳೆಯುತಿಲ್ಲ
ಬರೆಯುವ ವಿಷಯಗಳ ನೆನಪಿನ ಸಾಲಿನಲ್ಲಿ ಮೊದಲಿಗ ನೀನೇ ಆದರೆ ಹೇಗೆ
-
ಆಲೋಚನೆಗೆ ತಕ್ಕ ಪದಗಳ ಜೋಡಣೆಗೆ ಈ ವೇದಿಕೆ ಸಾಕ್ಷಿಯಾಗಿದೆ... ನನ್ನ ಕತೆ ಜೊತೆಗೆ ಸುಂದರ ಜೀವನದೊ... read more
ನೀವು ದಡ್ಡರೆಂದುಕೊಂಡಿರುವವರೆಲ್ಲ
ನಿಮಗೂ ಮೀರಿದ ಜಾಣ್ಮೆ ಹೊಂದಿರುತ್ತಾರೆ
ನೀವು ಮುಗ್ಧರೆಂದುಕೊಂಡಿರುವವರೆಲ್ಲ
ನಿಮ್ಮಲ್ಲಿರುವ ನಿಸ್ವಾರ್ಥವನ್ನು ದುರುಪಯೋಗ
ಪಡಿಸಿಕೊಂಡಿರುತ್ತಾರೆ
ಎಚ್ಚರ,
ಇದು ಕಲಿಯುಗ
-
ಹೇ ಗೆಳತಿ
ದೂರದ ಕಡಲ ತೀರದಿ ಜೊತೆ ಕುಳಿತು ಸಾಕೆನಿಸುವಷ್ಟು ಹರಟೆ ಹೊಡೆಯುವ
ಬೆಳದಿಂಗಳ ರಾತ್ರಿಯಲಿ ಚಂದಿರನ ಕರೆದು ನಮ್ಮದೇ ಅದ ಮುದ್ದಾದ ಕಥೆಯೊಂದನ್ನು ಹೇಳುವ
-
ಅವನ ಕೈ ಹಿಡಿದು ನಾ ಸಾಗುತಿರಲು ನನ್ನ ಹೆಜ್ಜೆಯ ಹಿಂಬಾಲಿಸುತಾನೆ
ತುಸು ನಿದ್ದೆಗೆ ನಾ ಜಾರುತಿರಲು ತನ್ನ ಹೆಗಲ ಚಾಚುತಾನೆ
ಹುಸಿ ಕೋಪವ ನಾ ತೋರಿಸಲು ತನ್ನದಲ್ಲದ ತಪ್ಪಿಗೆ ಹೊಣೆಯಾಗುತಾನೆ
ದೂರದಿಂದಲೇ ಮುದ್ದು ನಗೆ ಬೀರಿ ನನ್ನ ಮುಗುಳ್ನಗೆಗೆ ಕಾರಣವಾಗುತಾನೆ
-
ನೆಮ್ಮದಿಯೇ ಇಲ್ಲವೆಂದು ಯೋಚಿಸುತ್ತಾ ಕೂತಿರುವ ನೀವು
ಇರುವ ನೆಮ್ಮದಿಯನ್ನೇ ಹಾಳುಮಾಡಿಕೊತ್ತಿದ್ದೀರಿ
ಮನೆ ಇಂದ ಆಚೆ ಕೂತು ಹುಡುಕುವ ನೆಮ್ಮದಿಯು
ನಿಮ್ಮ ಮನದ ಮನೆಯಲ್ಲೇ ಮರೆಯಾಗಿ ಹೋಗುತಿದೆ
-
ನೀನಿಲ್ಲದೆ ನಾ ಸಾಯ್ತಿನಿ ಅನ್ನೋ ಮುಂಚೆ
ಪುನರ್ಜನ್ಮವನ್ನೆತ್ತಿ ನಿಮ್ಮನ್ನು ಹಡೆದವಳನ್ನೊಮ್ಮೆ ನೆನಪಿಸಿಕೊಳ್ಳಿ...
ಆಕರ್ಷಣೆಗೆ ಮಾರುಹೋಗಿ
ಜೀವ ಕೊಟ್ಟವಳ ಮರೆಯಬೇಡಿ...
-
ಸದಾ ನಗ್ತಾ ಇರಿ...
ಒಣಗಿ ಹೋಗಿರೋ ಗಿಡಕ್ಕೂ ಕೂಡ ನಿಮ್ಮ ನಗು ನೋಡಿ ಚಿಗುರುವ ಆಸೆ ಬರ್ಬೋದು...
ಹಾಳಾಗ್ತಿರೋ ಆರೋಗ್ಯಕ್ಕೂ ಕೂಡ ಒಂದು ಸರಿ ಹೋಗೋ ದಾರಿ ಸಿಗಬಹುದು...-
ಬಡವನೆದೆಯ ಬಾಗಿಲನು ತಟ್ಟಿ
ಮನದ ಮನೆಯೊಳು ಬಂದು ದೀಪ ಬೆಳಗಿ
ಇರುವಷ್ಟರಲ್ಲಿಯೇ ಸಾಕಷ್ಟು ಖುಷಿಯನ್ನು ಉಂಡು
ನನ್ನ ಗೆಳತಿ ಆಗಿ, ಮನೆಯ ಒಡತಿ ಆಗಿ
ಚಿಕ್ಕದಾಗಿ ಚೊಕ್ಕ ಸಂಸಾರದ ಹೊಣೆಯನ್ನು ಹೊತ್ತು
ನನ್ನ ಸ್ನೇಹಿತೆಯಾಗಿ, ಮಡದಿಯಾಗಿ,ತಾಯಿಯಾಗಿ, ಜೊತೆ ಇರುವಳು
ಅತ್ಯಂತ ಶ್ರೀಮಂತಿಕೆ ಸಿಗುವ ನೆಮ್ಮದಿಯ ಬದುಕನ್ನು ನೀಡಿದಳು
-
ಮುರಿದು ಹೋಗುತ್ತಿರುವ ಸಂಬಂಧಗಳಲ್ಲಿ
ಮನುಷ್ಯನ ಮೌಲ್ಯಗಳೇ ಮರೆ ಆಗಿದೆ
ನಾನು ನಾನು ಅನ್ನುವ ಸ್ವಾರ್ಥವೇ ನಮ್ಮನ್ನು
ಕೊಲ್ಲುವ ವೈರಿಯಾಗಿದೆ
ಆಸೆಯ ಬೆನ್ನಟ್ಟಿ ಹೋಗುತ್ತಿರುವ ನಮಗೆ
ಇರುವಷ್ಟರಲ್ಲೆ ನೆಮ್ಮದಿ ನಾಶವಾಗಿದೆ-
ಒಬ್ಬಳೇ ಹೊರಟ ದಾರಿಯಲಿ ನಾನಿದ್ದೇನೆ ಎಂದು ಕೈ ಹಿಡಿದವನು ನೀನು
ಒಬ್ಬಳೇ ಅಳುತ್ತಾ ಕುಳಿತಾಗ ನನ್ನ ಮುಖದಲ್ಲಿ ನಗು ಬರೆಸಿದವನು ನೀನು
ಪ್ರತೀ ಸರೀ ನಾನು ಸೋಲೋದನ್ನ ಕಲ್ತಿದ್ದೀನಿ ಅಂದಾಗ
ಅದನ್ನ ನನಗೆ ಕಲಿಸಿದವನೇ ನೀನು-