ಮರಿಗಳ ಆಹಾರಕ್ಕಾಗಿ
ತನ್ನ ಬಲಹೀನ ರೆಕ್ಕೆಗಳ
ಬಡಿಯುತ್ತಾ ತನ್ನ
ಬಳಗವನ್ನು ಕರೆಯುತ್ತಿತ್ತು.
ಕಣ್ಣೀರಿಡುತ್ತಾ ತನ್ನ ಮರಿಗಳ
ದಾಹವನ್ನು ತಿರಿಸುತಿತ್ತು.
ಮರಿಗಳ ಹಾರುವ ದಿನಕ್ಕಾಗಿ ಕಾಯುತಿತ್ತು.
ಅವು ಹಾರಿದ ದಿನವೇ ಈ ಹಕ್ಕಿಯ
ಪ್ರಾಣಪಕ್ಷಿಯು ಹಾರಿಹೋಯಿತು....-
ಪಾಯ ಕಿ ಜಹಾನ್ ಸರ ಮೇರಿ ಋಹ್ ಮೇ ಬಸ್ ಗ್ಯಾ,
ಇರ್ ಲಬೋ ಪರ್ ಜಿನದಗಿ ಕೆ ದೋ ಪ್ಲ ಟೆಹ್ರಾ ಗ್ಯಾ-
ಹಕ್ಕಿಗಳ ತರಹ
ಪ್ರೀತಿಸಬೇಡಿ..
ನೀರು ಒಣಗಿದರೆ
ಹಾರಿ ಹೋಗುತ್ತವೆ,
ಪ್ರೀತಿಸಿದರೆ
ಮೀನಿನ ತರಹ
ಪ್ರೀತಿಸಬೇಕು
ನೀರು ಒಣಗಿದರೆ
ಸತ್ತು ಹೋಗುತ್ತವೆ.
-
ಮುದ್ದಿನ ಗಿಳಿ
************
ಓ ಗಿಳಿಯೆ ಮುದ್ದಿನ ಗಿಳಿಯೇ
ಎಲ್ಲರನ್ನು ಪ್ರೀತಿಯಿಂದ ಬರಸೆಳೆವೆ
ಮುದ್ದು ಮುದ್ದಾಗಿ ಚೆಂದ ಮಾತಾಡುವೆ
ಮನಸಿಗೆ ಮುದ ನೀಡಿ ಖುಷಿ ತರುವೆ
ಸುಂದರ ಪ್ರಕೃತಿಯ ಕುಳಿತು ವೀಕ್ಷಿಸುವೆ
ಹಲವು ಬಣ್ಣಗಳ ನಿನ್ನಲ್ಲಿ ಅಡಗಿಸಿರುವೆ
ಕಳುಹಿಸಿದ ಸಂದೇಶವ ಹೊತ್ತು ತರುವೆ
ಕೆಂಪು ಬಣ್ಣದ ತುಟಿಯ ಕೊಕ್ಕಲಿ
ಹಣ್ಣುಗಳ ಕುಕ್ಕಿ ಜೇನ ಸವಿಯುವೆ
ಮೈಬಣ್ಣದ ಬೆಡಗಿನಿಂದ ಚಿತ್ತಾಕರ್ಷಿಸುವೆ
ಮನುಷ್ಯನ ಧ್ವನಿಯ ಚೆನ್ನಾಗಿ ಅನುಕರಿಸುವೆ
ಬಲವಾದ ಶಕ್ತಿಯ ನೀ ಹೊಂದಿರುವೆ
ಪ್ರಾಚೀನ ಕಾಲದಿಂದ ಮನುಜನ ಸ್ನೇಹಿತನಾಗಿರುವೆ
ಹಲವು ನಾಮಗಳಿಂದ ಹೆಸರು ವಾಸಿಯಾಗಿರುವೆ
ಕವಿಯ ಬರಹಗಳಿಗೆ ಪ್ರೇರಣೆಯಾಗಿರುವೆ
ಮಾನವ ನಿರ್ಮಿತ ಪಂಜರದಲ್ಲೂ ಬಂಧಿಯಾಗಿರುವೆ
ಕೆಂಬಣ್ಣ ಕೊಕ್ಕಲ್ಲಿ ಚಿಕು ಚಿಕು ಎನ್ನುವೆ
ಭವಿಷ್ಯದ ಬಗ್ಗೆ ಸೂಚನೆ ನೀಡುವೆ
ಜನರ ಪ್ರೀತಿ ವಿಶ್ವಾಸ ಗಳಿಸಿರುವೆ
ಸರ್ವರ ಮೆಚ್ಚಿನ ಮುದ್ದಿನ ಗಿಳಿಯಾಗಿರುವೆ.
✍️ ಶೃತಿ ಶೈವ
-
ಅವುಗಳಂತೆ ಹಾರಾಡಲು ಆಸೆಯಾಗುತ್ತದೆ.
ಎತ್ತರೆತ್ತರೆಕ್ಕೇರಿ ಬಾನಂಗಳಕ್ಕೆ ಮುತ್ತನಿಟ್ಟು
ಸಿಕ್ಕ ಸಿಕ್ಕ ಹಣ್ಣುಗಳ ರುಚಿಯನ್ನು ಸವಿದು
ಹತ್ತಾರು ಮೈಲಿಗಳ ಆಯಾಸವಿಲ್ಲದೆ ಸುತ್ತಿ
ತನ್ನ ಬಳಗದೊಂದಿಗೆ ಗುಂಪಲ್ಲಿರುವ ಆಸೆ.-
ಬಾನೆತ್ತರದಲಿ ಸ್ವಚ್ಛಂದವಾಗಿ
ಸುಂದರ ಸುಮವಾಗುವಾಸೆ
ತೋಟದಿ ಕಂಪು ಸೂಸುತ್ತಾ
ನರ್ತಿಸುವ ನವಿಲಾಗುವಾಸೆ
ನೋಡುಗರ ಬೆರುಗು ಗೊಳಿಸುತ್ತಾ
ಹಾಡುವ ಕೋಗಿಲೆಯಾಗುವಾಸೆ
ಮಾಮರವ ಆಶ್ರಯಿಸುತ್ತಾ
ಈಜುವ ಮೀನಾಗುವಾಸೆ
ಗಂಗಾ ಮಾತೆಯ ಆರಾಧಿಸುತ್ತಾ
-
ಹಾರುವ ಹಕ್ಕಿಯನ್ನು ಕಂಡಾಗ
ಸಂತಸದಿ ಹಾರುವುದು ಮನವು
ಕುಣಿಯುವ ಹಕ್ಕಿಯನ್ನು ಕಂಡಾಗ
ತಕದಿಮಿ ಎನ್ನುವುದು ಎನ್ನ ತನುವು
ನಿನ್ನಂತೆ ಹಾಡುವ ಹಕ್ಕಿಯನ್ನು ಕಂಡಾಗ
ನೀನಿರದೆ ನರಳುವದಿ ಮನವು
ಸಂದೇಶ ಕಳಿಸುವ ಹಕ್ಕಿ ಕಂಡಾಗ
ನೀ ಸಿಗದೇ ತಲ್ಲನಿಸುವುದು ತನುವು-
ತನ್ನ ಅಸಹಾಯಕತೆಯ ಪರಿಚಯಿಸುತ್ತಿದೆ
ಬಿಸಿಲ ಬೇಗೆಯಲ್ಲಿ ಬಳಲಿ ಬಾಡಿದ ಗಿಡದಂತೆ
ನೀರೆರೆಯುವವರು ಇಲ್ಲದೆ ಸಾವೇ ಗತಿಯಂತೆ
ಮುಪ್ಪಾದಾಗ ಕಡೆಗಣಿಸಿ ಮಕ್ಕಳು ತೊರೆದಂತೆ
ಆರೈಕೆ,ಪ್ರೀತಿಯಿರದೆ ಬಾಳು ಬಹಳ ಕಷ್ಟವಂತೆ
-