ಸಂತು 💕 ಕರುನಾಡ ಪೊಲೀಸ್   (ಸಂತೋಷ ಪಿ ಕೆ.)
957 Followers · 696 Following

read more
Joined 15 May 2020


read more
Joined 15 May 2020

ಹೆಣ್ಣು ಮಕ್ಕಳಿಗೆ ಗಂಡನೇ ದೇವರು.
ಆದರೆ, ದೇವಸ್ಥಾನ ಯಾವತ್ತಿದ್ರು
ಹೆತ್ತ ತವರು ಮನೆಯೇ ಆಗಿರುತ್ತದೆ...

-



ಕಾಳಜಿ ಮಾಡಿದರೂ, ಮಾಡದಂತಿರು.
ಇಲ್ಲಿ ನಿನ್ನ ಕಾಳಜಿಯನ್ನು
ಕಿರಿ-ಕಿರಿ ಅಂತ ಅಂದುಕೊಳ್ಳುವವರೇ ಜಾಸ್ತಿ...

-



ಗಲ್ಲವನ್ನು ಸೋಕಿದ್ದು ತಂಗಾಳಿ ಮಾತ್ರ.
ಆದರೆ, ಮನಸ್ಸು ಯಾಮಾರಿದ್ದು
ಇದು ಅಮ್ಮನ ಸ್ಪರ್ಶವೇ ಎಂದು...

-



ನಮ್ಮ ಮನೆಗೆ ನಾವೇ ಕಿಡಕಿ, ಬಾಗಿಲು ಇರಿಸಿದ್ದು.
ಯಾರಿಗೋ ನಮ್ಮ ವಿಷಯ ಗೊತ್ತಾಯ್ತು
ಅನ್ನೋಕಿಂತ ಮೊದಲು,
ನಾವೇ ಕಿಡಕಿ, ಬಾಗಿಲು ಭದ್ರವಾಗಿ ಹಾಕಿಕೊಳ್ಳಬೇಕು.

-



ಪ್ರವಾಹ ಬಂದಾಗ ನಾನು ಅಲ್ಲೇ ಇದ್ದೆ.
ಅವಳು ಪ್ರೀತಿಸಿ ಬಿಟ್ಟುಹೋದ
ನೆನಪುಗಳ ತೊಳೆಯಲು,
ಕಣ್ಣೀರು ಸುರಿಸುತ್ತಿದ್ದೆ ಅಷ್ಟೆ.

-



ಮುಗ್ದ ಜನರೆಲ್ಲರೂ ಮೂರ್ಖರಲ್ಲ.
ಅವರು,
ಎಲ್ಲರೂ ಒಳ್ಳೆ ಹೃದಯವನ್ನೇ
ಹೊಂದಿರುತ್ತಾರೆಂದು ನಂಬಿರುತ್ತಾರೆ.

-



ಕಾಡಿನಲ್ಲಿ ಕ್ರೂರ ಪ್ರಾಣಿಗಳು
ಇವೆ ಅಂತಾ ಬೋರ್ಡ್ ಇರುತ್ತೆ,
ಆದರೆ ನಾಡಿನಲ್ಲಿ ಯಾಕೆ ಹಾಕಿರಲ್ಲ...?

-



ಭೂ ತಾಯಿಯ
ಹಿರಿಯ ಮಕ್ಕಳು
'ರೈತ ಮತ್ತು ಸೈನಿಕ'.

-



ಒಬ್ಬ ಒಳ್ಳೆಯ ಹೆಂಡತಿ ಜೊತೆಗಿದ್ದರೆ ಸಾಕು
ಅತ್ಯಂತ ಬಡ ಗಂಡನೂ ಕೂಡ ರಾಜನಾಗಬಹುದು..!

-



Social Media ದಿಂದ
Time waste ಅನ್ನೋವಾಗ,
ಒಂಟಿ ಜೀವಿಗಳಿಗೆ, ನೊಂದ ಮನಸುಗಳಿಗೆ
ನಗಿಸಿ ತಣಿಸಿ ಅದೆಷ್ಟೋ ನೆಮ್ಮದಿ ಬದುಕು ನೀಡಿದೆ...

-


Fetching ಸಂತು 💕 ಕರುನಾಡ ಪೊಲೀಸ್ Quotes