ನಾವು ಎಷ್ಟೇ ಒಳ್ಳೆಯವರಾಗಿದ್ದರು
ಜನ ಮಾತ್ರ ನಾವು ಸತ್ತ ಮೇಲೆ ನಮ್ಮನ್ನು ಹೊಗೊಳೋದು..-
ಈ ಜಗತ್ತಿನಲ್ಲಿ ಸಹಿಸಿಕೊಳ್ಳಲಾಗದಂತಹ ಸತ್ಯ ಎಂದರೆ 'ಸಾವು'. ಅರಗಿಸಿಕೊಳ್ಳಲಾಗದ ಮತ್ತೆರಡು ಸತ್ಯಗಳೆ೦ದರೆ, ಸಾವಿನಲ್ಲಿಯೂ ನಮಗೆ ಎರಡು ಆಯ್ಕೆಗಳು.
ಮೊದಲನೆಯದು: ಕೆಲವು ಸಲ ಖುದ್ದು ನಮ್ಮ ತಂದೆ ತಾಯಿಗಳೇ ಮೊದಲು ನಮ್ಮ ಸಾವು ನೋಡಬಹುದು.
ಎರಡನೆಯದು: ನಮ್ಮ ತಂದೆ ತಾಯಿಗಳ ಸಾವು ನಾವು ನೋಡಲೇಬೇಕಾಗುವುದು.
ಹಾಗ್ ನೋಡಿದ್ರೆ ಈ ಎರಡು ಆಯ್ಕೆಗಳು ಕೂಡ ನಮ್ಮ ಕೈಯಲ್ಲಿಲ್ಲ. ಇವುಗಳಲ್ಲಿ ಯಾವುದಾದರೊಂದು
ಜರುಗಲೇ ಬೇಕು....
ಹಾಗಾದರೆ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ ??? ಪರಿಹಾರ ಇದೆ ಅದೇ 'ಮರೆವು' ಎಲ್ಲವೂ ಮರೆಯಬೇಕು ಜೀವನದ ಬಂಡಿ ಸಾಗುತ್ತಿರಬೇಕು.
ಇದೆ ಅಲ್ವಾ ಜೀವನ ಅಂದರೆ...-
ಆ ನಿರ್ದಯ ಕ್ಷಣ ಪದೇ ಪದೇ ಎರಡು
ರೆಪ್ಪೆಗಳ ಜೊತೆಗೂಡುತ್ತಿದ್ದವು,
ನಿನ್ನ ನಿಶ್ಯಬ್ದ ನೀರವ ಮೌನವು ಭ್ರಮೆಯೋ,
ಊಹೆಯೋ ಇರಬಹುದೆಂದು
ಆಲೋಚನೆಗಳಿಗೆ ತಿಳಿಹೇಳಲು.
-
ಸಾವಾಗಿಯಾದರು
ತುಸು
ಸಮೀಪಿಸು ಒಲವೇ,
ಸಮಾಧಿಯಾಗುವ ವೇಳೆಗೆ
ನಿನ್ನ ಸಾನಿಧ್ಯವಾದರು
ದೊರಕಿತು...
-
ಕಣ್ರೆಪ್ಪೆಯ ಉಸಿರಿರುವ ತನಕ
ಲೆಕ್ಕವಿಹುದು ಆಯಸ್ಸು..
ಬ್ರಹ್ಮನ ಆಟಕ್ಕೆ ಅಪರಿಚಿತ
ಗೆರೆಗಳು ಸೋತು ಸತ್ತವೂ..
ವಯಸ್ಸಿನ ಪಟ ಕಾರ್ಮೋಡದಲ್ಲಿ
ಚುಕ್ಕಿಯಾಗಿ ಅರೆಕ್ಷಣಗಳು
ಅಲುಗಾಡಿಸುತ್ತದೆ
ದೈತ್ಯ ದೇಹವ..ಎಣೆಯಿಲ್ಲದ
ದೀಪದಂತೆ,ಚುಕ್ಕಿಯಿಲ್ಲದ
ಮುಗಿಲಿನಂತೆ,ಉಸಿರಿಲ್ಲದ
ದೇಹವ ನೆನೆನೆನೆದು ಬಿಕ್ಕಿಬಿಕ್ಕಿ
ಅತ್ತರು ಶವದ ಮುಂದೆ,,-
ಗೆಲುವು ಮರೀಚಿಕೆಯಲ್ಲ
ಅದಕ್ಕಾಗಿ ಕುಗ್ಗಬೇಕಿಲ್ಲ!
ಪ್ರಯತ್ನಿಸ ಬೇಕಷ್ಟೆ
ಕೈಕಟ್ಟಿ ಕುಳಿತರೆ ಆಗದು
ಆತ್ಮವಿಶ್ವಾಸ ಆತ್ಮಬಲದಿ
ಮುನ್ನುಗ್ಗುತಿದ್ದರೆ
ಸನಿಹ ಅದೇ ಬರುವುದು
ನಮ್ಮನರಸುತಾ!-
ಧಿಮಾಕಿನ ಕೆತ್ತನೆಯ ವ್ಯಕ್ತಿಯ ವರ್ತನೆಗೆ
ಕಾಲೂರಿ ಕಿರಿಚಿಕೊಳ್ಳುವ ಕನಸುಗಳ
ಒಲ್ಲೆನೆಂದರಾಗುವುದೆ..
ಪರಚಿ ಗಾಯಗೊಳಿಸುವ ನೆನಪುಗಳಿಗೆ
ಕಂಬನಿಯ ಪರದೆಯ ಎಳೆದರೆ
ಮರೆಯಾಗುವುದೇ..
ಕೈಯಲ್ಲಿರುವ ಗೆರೆಗಳ ಅಳಿಸಿದರೆ
ಪಣೆಯ ಜೀವಮರಣ ಸರಿಯುವುದೇ..
ದಯೆ, ಸಹಾನುಭೂತಿ ಇದ್ರೆ ಸ್ವರ್ಗ
ಪ್ರಾಪ್ತಿ ಲಭಿಸುವುದೆ..
ನಾಪತ್ತೆಯಾದ ಜೀವ ಕಳಶವ
ಮರಳಿ ಪಡೆಯಲು ಸಾಧ್ಯವೇ..
ಕಾರಿರುಳು ಕವಿಯುವುದು ಪ್ರತಿ
ಮನುಷ್ಯನ ಗಡಿಯಾರದುಯ್ಯಾಲೆಯ
ಉಸಿರು ಯಮನಿಗೆ ಶರಣಾಗತಿಯಾದಾಗ,,,-
ಒಳ್ಳೆದ್ ಮಾಡಿ ಬದುಕಿದ್ರೆ ಮೆಚ್ಚತಾರಯ್ಯ
ಸತ್ಮೇಲೆ ಹುಟ್ಟ್ ಬಟ್ಟೆನು ಬಿಚ್ಚತಾರಯ್ಯ ||ಪಲ್ಲವಿ||
ಮೋಸ-ಗೀಸ ಬ್ಯಾಡಿ.. ದ್ವೇಷ-ಗೀಸ ದೂಡಿ..
ಪ್ರೀತಿ-ಗೀತಿ ಹಂಚಿ ಇದ್ದರಾತಯ್ಯ.
ಕೆಟ್ಟದ್ ಮಾಡಿ ಸಾದ್ಸೋದು ಏನಾತರಯ್ಯ.
ಒಳ್ಳೆದ್ ಮಾಡಿ ಬದುಕಿದ್ರೆ ಮೆಚ್ಚತಾರಯ್ಯ
ಸತ್ಮೇಲೆ ಹುಟ್ಟ್ ಬಟ್ಟೆನು ಬಿಚ್ಚತಾರಯ್ಯ ||ಪಲ್ಲವಿ||
-ಕವನಯೋಗಿ
-