ಜಡಪ್ರಂಪಚವಿದು ಹಸಿವೆಂಬ ಛೇದಬಿಂದು
ಭೋಗಭಿಲಾಷಿ,ದೀನಧನಿಕರಿಗೂ
ವಿಚಾರಯುತವಾದ ಸ್ವಾರ್ಥಿಗಳ
ಜೀವಾಮೃತದ ಪರಿಕಲ್ಪನಾ ಬದುಕಿಗೆ
ಅನಿವಾರ್ಯವಾದದ್ದು ಹಸಿವು..!!
ಜನನಕ್ಕೂ ಮುನ್ನವೇ ಜೀವನಕ್ಕೂ ಮುನ್ನವೇ
ಆಕೃತಿಗೊಂಡ ಆಲೋಚನೆಯದು ಕಾಪಿಡುವ
ಪ್ರತಿ ಘಳಿಗೆಯೂ ಸಾವಿಗಿಂತಲೂ ಹತ್ತಿರ,
ಗ್ರಹಿಸಲು ಅಸಾಧ್ಯವಿರುವ ಬದುಕನ್ನು
ವ್ಯಾಕುಲಗೊಳಿಸಿ..!!
ಹಣಕ್ಕಾಗಿ ಬಡಿದಾಡೋ ಯುಗದಲ್ಲಿ
ಕಂಬಳಿಸುವವ ಹೊಟ್ಟೆ ಹಸಿವನ್ನು ಎಂದು
ಬಂಧಿಸಲಾರರು,, ಇದೆ ಬದುಕಿನ
ಆಯಾವೆಂದು ಇಡೀ ಸುರಲೋಕಕ್ಕೆ
ತನ್ನ ಸ್ಥಾನವ ಪರಿಚಯಿಸಿದೇ..!!
-kavya-
ಅದೆಷ್ಟು ಚಂದ ನೀ 😉....!
(Read caption)✨💚💚✨
ಮಾತೊಂದ ಮರೆತರು ಆಸೆ ತೀರದ ಪಯಣ ಉಸಿರೆಂಬ ಕಂಬಳಿಯ ಹೊತ್ತು ಮುನ್ನುಗುತ್ತಿರುವೇ ,, ಎನ್ನ ಪಯಣದ ಹಾದಿ ಸಿಗುವವರೆಗೆ..!!-
ನಾ ಚಿತ್ರಿಸಿದ ಒಲವ ಹಸ್ತಾಕ್ಷರಕ್ಕೆ
ಒಲವ ಕೆಂಪು ಶಾಯಿಯಾದವ ನೀ
ಮನದ ಜೀವಂತಿಕೆಯ ಜೀವತಂತುಗಳಲ್ಲಿ..!!
ನೀ ಹಚ್ಚಿದ ಶಾಯಿಗೆ ನಿತ್ಯವೂ
ಪ್ರೇಮೊತ್ಸವವ ತುಂಬಿದವಳು ನಾ
ಹೃದಯ ಬಡಿತದ ಬಳುವಳಿಯಾಗಿ,,!!-
ಎನ್ನ ಬಿಸಿಯುಸಿರಿನ
ಮಿಡಿತ ನೀ ಹೆಚ್ಚೆಚ್ಚು
ಒಲವಿನಲೆಯನೆಬ್ಬಿಸಿದ
ಹೊಸದೊಂದು ಒಲವ
ಕಾಂತಿಯ ಹೇಳಲಾಗದ
ಮಧುರ ಪ್ರೇಮವ
ಮನದೊಳಗೆ ಬಿಂಬಿಸಿದ
ಎನ್ನ ಹೃದಯಂಗಡಿಯ
ಖಾಯಂ ಪ್ರೇಮಖೈದಿ ನೀ ,,,!!-
"ಏ"ಎನ್ನ ಒಲವಿನ್ಹುಡುಗ
ಕನಸಿನ ತುಂತುರು ಮಳಿಗೆಗೆ
ಪದೇ ಪದೇ ಬಾರದಿರು,
ಬಂದು ಕಾಡದಿರು,
ಮೇಲುಧ್ವನಿಯಲ್ಲಿ
ಸತಾಯಿಸಿ,ಕಿಚಾಯಿಸಿ ,
ಮನವ ಪೀಡಿಸದಿರು ಹುಡ್ಗ.!
ಕಳೆದು ಹೋಗುವೆ ನಿನ್ನ
ಮುದ್ದಾದ ಪ್ರೇಮಸಂಗಮದ
ಸ್ವಪ್ನದಲ್ಲಿ,,!!-
"ಹೇ ಗುಮ್ಮ" ನಿನ್ನೊಂದಿಗೆ
ಕಣ್ಣೋಟ ಬೆರಸದೆಯೇ
ಅಗಣಿತ ಪ್ರೇಮ ತಾರಾಗಣಗಳ
ನನ್ನೊಡಲಿನಲಿ ಬಿತ್ತಿದವ ನೀ
ಎನ್ನ ಮೌನದೊಳಗಿನ ಮಾತು ನೀ ,,
ನನ್ನೆದೆಗೂಡಿನಲ್ಲಿ ಭಾವಗಳ
ಬಾಂದವ್ಯದ ಶೃತಿಯಾಗಿ
ನೀ ಮೈತುಂಬಿ ಕೊಂಡಿರುವೆ
ಕಣೋ ಪೋಲಿ ..!!-
ಅವನೊಲವಿನೆಡೆಗೆ
ಪರವಶಳಾಗಿರುವೆ ಎನ್ನ
ಹೃದಯಾಂತರಾಳದಲ್ಲಿ
ಕಾಪಿಟ್ಟ ಎನ್ನ ಒಲವ
ರಾಜಬೀದಿಗೆ ಪ್ರೇಮಾಹ್ಲಾದದ
ಅಚ್ಚೊತ್ತಿರುವವನಿಗೆ
ನನ್ನಂತರಾತ್ಮದಲ್ಲಿ ಹೂ
ನಗೆಯಾಗಿ ಬಂದವನೆಡೆಗೆ...!!-
ಲೋ ಪೆದ್ದು ಗೂಬೆ 😌..
ನಿನ್ನೊಂದಿಗೆ ಎಷ್ಟೇ ಜಗಳವಾಡಿದರೂ
ಪಾದಕಂಟುವ ಮಣ್ಣಿನಂತೆ ನೀ
ಲೀನವಾಗಿರುವೇ ಆಂತರ್ಯದ
ನನ್ಹೃದಯದರಮನೆಯಲ್ಲಿ
ಹೃದಯದಿಂದಿಳಿದ ಕ್ಷಣಿಕ
ಮುನಿಸಿಗೆ, ನಿನ್ನೊಲವನ್ನೆ
ಕಳೆದುಕೊಳ್ಳುವ ಪ್ರೇಮಿ ನಾನಲ್ಲ,,!!-
ಬಣ್ಣದ ಬದುಕನ್ನು ಕಲರ್ಫುಲ್
ಆಗಿ ಮಾಡಿಕೊಳ್ಳುವುದು ನಮ್ಮ
ಕೈಯಲ್ಲಿ ಇರೊತ್ತೆ,,
ಅದೇ ಜೀವನದಲ್ಲಿ ಆಗಮಿಸುವವರ
ಸ್ವೀಕರಿಸುವುದು, ತಿರಸ್ಕರಿಸುವುದು
ಎಲ್ಲಾ ನಮ್ಮ ಭಾವನೆ,ನಮ್ಮ
ವ್ಯಕ್ತಿಗತವಾಗಿರುತ್ತವೆ,, ನಾವು
ನಂಬಿಕೆ ಇಟ್ಟ ಆ ವ್ಯಕ್ತಿಗಳ ಬಣ್ಣ
ಕಳಚುವಾಗ ,ಆ ಬಣ್ಣದ ಪೊರೆ
ಕಳಚಿ ಬಿದ್ದಾಗ ಮತ್ತೆ,,
ಪುನಃ ಬದುಕು ಕಟ್ಟಿಕೊಳೋದು
ಕಾಲರ್ಪುಲ್ ಆಗಿ ಇರಿಸಿಕೊಳೋದು
ಅವರ್ ಕೈಯಲ್ಲಿ ಇರೋತ್ತೆ,,, !!-