QUOTES ON #ಸಮಯದ

#ಸಮಯದ quotes

Trending | Latest

ಸಮಯ ಎಲ್ಲರನ್ನೂ ಓಡಿಸುತ್ತದೆ
ಆದರೆ ಸಮಯ ತಾನೆಂದು ವೇಗವಾಗಿ ಓಡುವುದಿಲ್ಲ.
ಸಮಯ ಎಲ್ಲರನ್ನೂ ನಿಲ್ಲಿಸುತ್ತದೆ
ಆದರೆ ಸಮಯ ತಾನೆಂದು ನಿಲ್ಲುವುದಿಲ್ಲ...

-


22 JUL 2020 AT 21:35

ಸಮಯವನ್ನು ಗಡಿಯಾರದ " ಮುಳ್ಳು"ಗಳೇ ಏಕೆ ತೋರಿಸಬೇಕು??
ಎಂದು ಹೀಗೊಂದು ಪ್ರಶ್ನೆ ಕಾಡುತಿತ್ತು...
ಅದಕುತ್ತರ ಇಂದು ಕಂಡುಕೊಂಡೆ ,
ಗುಲಾಬಿ ಗಿಡದ ಹೂವನ್ನು ನಾವು ಕೀಳ ಹೊರಟಾಗ
ಅದರಲ್ಲಿರುವ ಮುಳ್ಳುಗಳು ನಮ್ಮನ್ನು ಎಚ್ಚರಿಸುತ್ತವೆ,
ಹಾಗೆಯೇ,,
ಓಡುವ ಸಮಯವನ್ನು ಕೂಡಾ ವ್ಯರ್ಥಮಾಡದೆ
ಸದುಪಯೋಗ ಪಡಿಸಿಕೊಳ್ಳಿ ಎಂದು
ಗಡಿಯಾರದ "ಮುಳ್ಳು"ಗಳು ಎಚ್ಚರಿಸುವುದು.....



-


28 NOV 2020 AT 17:49

ಆಸೆ ಆಕಾಂಕ್ಷೆಗಳ ಚಿಕ್ಕದಾಗಿಯಾದರೂ ಸರಿ ಪೂರ್ಣಗೊಳಿಸಿರಿ

ಅವನಿಯಲಿ ನಮ್ಮ ಸರದಿಯ ಸಮಯ ಯಾವಾಗಂತ ಗೊತ್ತಿಲ್ಲ

-


26 JUL 2020 AT 0:49

ಬದುಕೇ ಒಂದು ವಿಸ್ಮಯ,
ಇರಲಿ ಸಮಯದ ಸಮನ್ವಯ..
ಜೀವನವು ಬೊಗಸೆಯಲ್ಲಿ
ಶೇಖರಿಸಿಟ್ಟ ನೀರಿನಂತೆ,
ಅದು ಎಷ್ಟೇ ಹತ್ತಿಟ್ಟರು
ಸಮಯ ಸರಿದಂತೆ
ಅದು ಬಸಿದು ಹೋಗುವುದು
ಆದ್ದರಿಂದ ಪೋಲಾಗುವ
ಮುನ್ನ ಬಳಸಬೇಕು ಪ್ರತಿಕ್ಷಣ,
ವ್ಯರ್ಥವಾಗದಂತೆ......
✍️ತಿಮ್ಮಣ್ಣ ಕೊರಡ್ಡಿ





-


16 SEP 2019 AT 13:32

ಜೀವನದಲ್ಲಿ ಆಗುವ ಕೆಲವಂದು ಬದಲಾವಣೆಗಳು
ಬದುಕಿಗೆ ಒಂದು ಹೊಸ ಅರ್ಥ ಕೋಡುತ್ತದೆ...

-



ಜಾರಿ ಹೋಗುವ ಮುನ್ನ ಕಾಲ..
ಬಾಚಿ ತಬ್ಬಿಕೋ ಈ ಮನವನ್ನ...

ಕಾಲ ಕಳೆದ ಮೇಲೆ
ಒಬ್ಬರ ಮೆಲೊಬ್ಬರು ದೂರಿದರೇನು
ಪ್ರಯೋಜನ...?

ಮನವರಿತು ಕಾಲದ ಜೊತೆ ಸಾಗೋಣ...

-


5 SEP 2019 AT 17:19

ಸಮಯ ಪ್ರಜ್ಞೆ ಇಲ್ಲದವನು
ಜೀವನದಲ್ಲಿ ಏನು ಸಾದಿಸಿಯಾನು....
ಮಂಕು ಬುದ್ದಿ ಹಿಡಿದವ
ಯಾರ ಬುದ್ಧಿವಾದ ಕೇಳಿಯಾನು
ಜೀವನದಲ್ಲಿ ಜಡತ್ವ ಹೊಂದಿದವ
ಹೇಗೆತಾನೇ ದೇಶದ ಯಶಸ್ವಿಗೆ ಕೈಜೋಡಿಸಿಯಾನು....

-


3 MAY 2019 AT 11:27

ಸಮಯ ನಗಿಸುವುದು ಸಹಜ ಅಳಿಸುವುದು ಸಹಜ
ಸಮಯವೂ ಬಹಳಷ್ಟು ಕಲಿಸುವುದು ಸಹಜ
ಸಮಯದ ಮಹತ್ವ ತಿಳಿದವನು ಗುರಿ ಮುಟ್ಟುವುದು ಸಹಜ
ಸಮಯವನ್ನು ಕಳೆದುಕೊಂಡವನು ಕೊರಗುವುದು ಸಹಜ
ಕಳೆದುಹೋದ ಸಮಯ ಮರಿಳಿಬರುವಿದಿಲ್ಲವೆನ್ನುವುದು ಸಹಜ.

-


22 MAY 2021 AT 20:03



ಸಮಯದ ಬೊಂಬೆಗಳು ನಾವು,
ಒಮ್ಮೆ ಅಳುತ್ತಾ, ಒಮ್ಮೆ ನಗುತ್ತಾ,
ಒಮ್ಮೆ ಬೀಳುತ್ತಾ, ಮತ್ತೊಮ್ಮೆ ಏಳುತ್ತಾ,
ಕಾಲ ಚಕ್ರದ ಅಡಿಯಲ್ಲಿ ಕತ್ತರಿಸಿ ಹೋಗುವ ಮೊದಲು
ಕಾಲಹರಣ ಮಾಡದೆ ಕಂಡ ಕನಸ ನ್ನೆಲ್ಲಾ ನನಸು ಮಾಡುವತ್ತ ಸಾಗಬೇಕಾಗಿದೆ....

-


17 SEP 2020 AT 21:18

ಇ ಸಮಯ ಕಳೆದು ಹೋಗುತ್ತದೆ...
ನೆನಪುಗಳಲ್ಲ....

-