ಎಂತ ಮನವನ್ನಾದರು ಒಂದು ಕ್ಷಣ
ಮೌನಗೊಳಿಸುವುದು-
ಸಮಸ್ಯೆಗಳನ್ನು ಎದ್ರಿಸೋನು ಗೆಲ್ತಾನೆ!
ಕರಗದ ಮೋಡ ಮರೆಯಾದ ರವಿಕಿರಣ
ಸೂರುಸಂದಿನಲಿ ಹನಿನೀರ ಸಂಚಲನ
ನಡಗುವ ಶರೀರ ಬೆಂಕಿಯ ಕಾವು ಹೊಟ್ಟೆಯಲಿ
ಬಂದ ಮಳೆಗೆ ನೆಂದ ಬೇಳೆ ಕುಸಿದು ಬಿದ್ದಿದೆ
ಮೊಗದ ಕಳೆ
-
ಕಾಣೆಯಾದ ಸೂರ್ಯನ ಕಿರಣಗಳು ಭುವಿತಾಗುವ
ತವಕದಲ್ಲಿ ನಿಂತಿರಲು ಮೋಡಗಳ ತಡೆಗೋಡೆಯ ಮುರಿದು ರವಿ ಬರುವನೋ ಇಲ್ಲ ಮರೆಯಲ್ಲೇ ನಡೆಯುವನೋ..??
-
ಮನೆಯ ನೋಡಿ ಮದುವೆ ಮಾಡುವುದಕ್ಕಿಂತ
ಮನೆಯೊಳಗಿನ ಮನಸುಗಳ ನೋಡಿ ಮದುವೆ ಮಾಡಬೇಕು. ಏಕೆಂದರೆ ಮನೆಗಿಂತಲು ಮನಸ್ಸುಗಳು ಚನ್ನಾಗಿದ್ದಾಗ ಮಾತ್ರ ಹೆಣ್ಣು ಸುಖವಾಗಿ ನೆಮ್ಮದಿಯಾಗಿ ಬಾಳುವಳು ಸಾಧ್ಯ ಹಾಗೆ ಕುಟುಂಬವು ಸೌಖ್ಯವಾಗಿರುವುದು...-
ಇಂದು ಹಣ ಇದ್ದವರು ಅಧಿಕಾರ ಪಡಿತಾರೆ,
ಅಧಿಕಾರದಲ್ಲಿದ್ದವರು ಹಣ ಗಳಿಸ್ತಾರೆ
ಏನು ಇಲ್ಲದ ನಾವು ಈ ಎರಡನ್ನು
ಪಡಿಯೋದಿಕ್ಕೆ ಸೆಣಸಾಡಬೇಕು ಹೆಣವಾಗಬೇಕು..
-
ಕಥೆಯ ಕೋಟೆಯ ಕಟ್ಟಿ
ಕಣ್ಣೀರ ತರಿಸಲಿ ಹೇಗೆ?
ಕಾರಣವ ಅರಿಯದೆಲೆ ನಾ
ಕೈಯ ಬಿಡಲಿ ಹೇಗೆ?
ಮೌನದ ಮನದ ತುಂಬ ನಿನ್ನದೇ ದ್ಯಾನ
ಕನಸಿನ ಲೋಕಕ್ಕೆ ನನ್ನಯ ಪಯಣ...-
ಅವಸರದ ಚಡಪಡಿಕೆಯಲಿ ಹೊರಟನು ಬಾಸು
ಕಂಡು ಒಮ್ಮೆಲೇ ಹತ್ತಿದನು ಒಂದು ಬಸ್ಸು
ಪ್ರೀತಿ ಎಂಬುದೊಂದು ಮಾಯ ಮುಸುಕು
ಜಗದ ಎಲ್ಲೇ ಮೀರುವ ಹರೆಯದ ವಯಸ್ಸು
ಛಾಪು ಮೂಡಿಸಿತು ಕಾಲ್ಗೆಜ್ಜೆ ನೋಟವೇ ಬಲು ಸೊಗಸು
ಮೊಗಕಾಣದೆ ಕಾಲ್ಗೆಜ್ಜೆ ನಾದಕ್ಕೆ ಕೊಟ್ಟನು ಮನಸ್ಸು
ತಿಳಿದಿರಲಿಲ್ಲ ಮೊದಲು ಇರ್ವರದು ಒಂದೇ ಕ್ಲಾಸು
ಕಟ್ಟಿಕೊಂಡನು ಅವನವಳ ಬಗ್ಗೆ ದೊಡ್ಡ ಕನಸು
ಪ್ರೀತಿಯ ಪರಿಚಿಸದೆ ಬಿಟ್ಟನು ತಿಂಡಿತಿನಿಸು
ಯಾರಿಗೂ ಹೇಳಲಿಲ್ಲ ಅವನು ಪಟ್ಟ ತರಾಸು
ಮರಾಗುತ ತನಗೆ ತಾನೇ ಮಾಡಿಕೊಂಡನು ಮುನಿಸು
ಅವಳೇ ಕೇಳಿದಳು ಅರಿತು ಅವನ ಮನಸ್ಸು
ಕೊನೆಗೂ ಒಂದಾದರೂ ಇಬ್ಬರೂ ಸಲೀಸು
ದೇವ ಬೇರ್ಪಡಿಸದೆ ಅವರ ಪ್ರೀತಿಯ ಸಮ್ಮತಿಸು.-
ಸಿರಿತನದಲ್ಲಿರುವವರಿಗೆ ಸಹಾಯ ಮಾಡುವವನು ಕರುಣಾಮಹಿ ವ್ಯಕ್ತಿಯಲ್ಲ,
ಅಸಹಾಯಕರಿಗೆ ಸಹಾಯ ಮಾಡುವವನು ನಿಜವಾಗಿಯೂ ಕರುಣಾಮಹಿ..!!-
ನೋವು ಎಷ್ಟಿದ್ದರೇನು ನಗುವುದನು ಕಲಿಯಬೇಕು
ನಮಗಾಗಿ ನಮ್ಮವರಿಗಾಗಿ ಹೊಸತನಕ್ಕಾಗಿ
ಹೊಸದಿನಕ್ಕಾಗಿ ಬದುಕಿಗಾಗಿ ನಾಳೆಯ ಬೆಳಕಿಗಾಗಿ...
-