ಪ್ರೀತಿಯ ಅರಮನೆಯ ದಾರಿಗೆ
ಅಣ್ಣ ನೆಂಬ ಸೇತುವೆಗೆ,
ಈ ಸುದಿನ ಬರಹದ ಶಿಲೆಯನಿಡುತಿರುವ
ಮನೆಯ ಚಿಕ್ಕ ಅಳಿಲು ನಾನು..
"ಮಾತಿನಲಿ ಬಲು ಮಿತವಾಗಿ,
ಎಲ್ಲರೊಡನೆ ಕಾಣುವನು ಅತಿ ವಿರಳವಾಗಿ,
ಮನೆಯ ನಿಲುವಿನಲೊಂದು ಆಧಾರಸ್ತಂಭವಾಗಿ,
ಕಷ್ಟಕ್ಕೆ ಹೆಗಲಾಗಿ,
ಖುಷಿಯಲ್ಲಿ ನಗುವಾಗಿ...
ಇರುವನು ಸದಾ ನನ್ನ ಪ್ರೀತಿಯ ಅಣ್ಣನಾಗಿ...
ಇರಲಿ ನಿನ್ನ ಪ್ರೀತಿ ನಮ್ಮ ಕುಟುಂಬದ ಮೇಲೆ ಚಿರವಾಗಿ
ನಿನ್ನ ಬಾಳಿರಲಿ ಹಸನಾಗಿ,
ಇರು ಎಂದಿಗೂ ಆರೋಗ್ಯವಾಗಿ, & ಹಸನ್ಮುಖಿಯಾಗಿ...
ಹುಟ್ಟು ಹಬ್ಬದ ಶುಭಾಶಯಗಳು ಪ್ರೀತಿಯ ಚನ್ನು ಅಣ್ಣ"-
ಮನ ತುಂಬಿಕೊಳ್ಳುವ
ಭಾವನೆಯ ಗೊಂಬೆ ನಾನು..
ನನ್ನ ಪ್ರಕಾರ ಬರಹವೆಂಬುದು
"ಭಾವಗಳ ಕ... read more
ನೀನೆಂದರೆ ಅದೆಂತಹುದೋ ಹೊನಲು,
ನೀ ಇಲ್ಲವೆಂಬುದು ನೆನೆದರೆ ಅದೇನೋ ದಿಗಿಲು.
ದೇವರಲಿ ಸದಾ ಮೀಸಲಿದೆ ನನ್ನದೊಂದು ಅಳಲು,
ನೀ ಎಂದಿಗೂ ಇರಬೇಕೆಂದು ನನ್ನ ಸುತ್ತಲು.....
ಆದರೂ "ಮಮ್ಮಿ",
ನೀನೆಂದರೆ ಎಲ್ಲರಿಗೂ ಮೊದಲು...
ನೀನೇ ಎಲ್ಲದಕ್ಕೂ ಮಿಗಿಲು....
ನನ್ನಲಿ ಶಾಶ್ವತ ನಿನ್ನ ನೆನಪ ಘಮಲು.....-
ಮಗುವೇ ನೀ ನಗಲು,
ಬೆಳಗುವುದು ಮನೆ ಮನ...
ತಪ್ಪು ಹೆಜ್ಜೆಯನೀಡುತಿರೆ,
ನಡೆದೆಲ್ಲೆಡೆ ಅದೇನೋ ಸವಿ ಕಂಪನ...
ನಿನ್ನ ತೊದಲು ನುಡಿಗಳು
ಅಮೃತ ಸಿಂಚನ...
ಮಾಡಲು ನೀ ತುಂಟಾಟ,
ಎಲ್ಲರೂ ಹರಿಸುವರು ನಿನ್ನತ್ತ ಗಮನ...
ನಮ್ಮೆಲ್ಲರ ಬಾಳಲಿ ನೀ ತಂದೆ ಪ್ರೀತಿಯ ಘಮ...
ಸದಾ ಬೆಳೆಯುತಿರಲಿ ನಿನ್ನ ಬಾಳೆಂಬ ಹೂಬನ...
ನಿನ್ನೆ ಮೊನ್ನೆಯಷ್ಟೇ ನಿನ್ನ ಮೊದಲ ಬಾರಿ ಕೈಗೆತ್ತಿಕೊಂಡಂತೆ ಭಾವ..
ಆಯಿತಾಗಲೇ ಒಂದು ವರುಷ ತುಂಬಿತೆಂಬ ಸಡಗರ...
"ಹುಟ್ಟು ಹಬ್ಬದ ಶುಭಾಶಯಗಳು ಮುದ್ದು ಅಭಿ ಗುಂಡ"-
ಸೋತಿರುವ ಈ ಕಂಗಳಿಗೆ,
ನಿನ್ನ ಮಡಿಲ ನೀಡಿ
ತಲೆಯ ನೇವರಿಸಬಾರದೇ....
ದಣಿದ ಈ ಮನಕೆ,
ನಿನ್ನ ಮಾತಿನ ಮೂಲಕ
ಸಾಂತ್ವನ ನೀಡಬಾರದೇ....
ಒಂಟಿಯಾದ ಈ ಪಯಣದಿ,
ನೀ ಜೊತೆಯಿರುವೆ ಎಂಬ
ಸಿಹಿ ಸುಳ್ಳಾದರೂ ನುಡಿಯಬಾರದೇ...
ಹೇಳು ಮಮ್ಮಿ,,,,,
ನನ್ನ ಕನಸಲ್ಲಾದರೂ,
ಬಂದೊಮ್ಮೆ ಈ ಮಗಳ ಜೊತೆ
ಕೆಲ ಸಮಯ ಕಳೆಯಬಾರದೇ....-
ಓ ಒಲವೇ,
ನನ್ನ ತೊರೆಯುವ ಹಠದಿ
ನೀ ಗೆದ್ದೆ...
ಆದರೆ ಪ್ರತೀ ಸಾರಿಯಂತೆ
ನಿನ್ನ ಪಡೆಯವ ಪ್ರಯತ್ನದಿ
ನಾ ಸೋತು ಹೋದೆ..-
ನೀನು,
ಈ ಮನದೊಳಗಿದ್ದೂ
ನನ್ನವನಾಗಾದಷ್ಟು
ಕ್ರೂರಿ...
ನಾನು,
ನನ್ನಲ್ಲಿಯೇ ನನ್ನ
ಉಳಿಸಿಕೊಳ್ಳಲಾಗದ
ದ್ರೋಹಿ...-
ಓದಿನಲ್ಲಿ ಜಾಣೆಯಾದ ಇವಳು, ನೋಡಲೂ ಸುಂದರ...
ಎಲ್ಲರನ್ನೂ ಅರಿಯುವುದರಲ್ಲಿ ವಯಸ್ಸಿಗೂ ಮೀರಿದ ಮನ...
ಸದಾ ನಮ್ಮೆಲ್ಲರಿಗೂ ಮಿಡಿಯುವ ಚಿಕ್ಕ ಜೀವ...
ನಮ್ಮ ಮನೆಯ ಮೊದಲ "ಖುಷಿ" ಇವಳು...
ಸದಾ ಸಡಗರವ ತುಂಬುತ್ತಾ, ನೂರ್ಕಾಲ ಸುಖವಾಗಿ ಬಾಳು...
"ಹುಟ್ಟು ಹಬ್ಬದ ಶುಭಾಶಯಗಳು ಖುಷಿ'ಮಾ....."-
ಅಣ್ಣನೆಂಬ ಅಕ್ಕರೆಯ ತವರು.....
ಅಮ್ಮಳ ಮಮತೆಯ ಜೊತೆ ಕಾಳಜಿಯ ಮಿಳಿತಗೊಂಡು.
ಅಪ್ಪನ ಶಿಸ್ತು ಹಾಗೂ ಸಿಟ್ಟನ್ನೂ ತನ್ನಲಿ ಅಡಕವಾಗಿಸಿಕೊಂಡ,,
ಪ್ರೀತಿಯನ್ನು ಅಳತೆ ಮೀರಿ ನೀಡುವ ಹೃದಯದೊಡೆಯ ನನ್ನಣ್ಣ...
ಈ ನನ್ನ 'ತವರ ಸಿರಿ'ಗೆ "ಹುಟ್ಟು ಹಬ್ಬದ ಶುಭಾಶಯಗಳು" ನೂರು ಕಾಲ ಸುಖವಾಗಿ, ಸಂತೋಷದಿಂದ, ಆರೋಗ್ಯದಿ ಇರಲೆಂದು ಆ ದೇವರಲ್ಲಿ ಪ್ರಾರ್ಥಿಸುವೆ...-
"೭೮ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು"
ದೇಶದಲ್ಲಿ ಸ್ವತಂತ್ರವಾಗಿ ಜೀವಿಸುವ ನಮ್ಮ ಸಾಮಾನ್ಯ ಹಕ್ಕು ಸಹ ಕಷ್ಟದಾಯಕವಾಗಿದೆ...
ನೂರಾರು ರೀತಿಯ ಅಹಿತಕರ ಕೃತ್ಯಗಳು ಪ್ರತೀ ದಿನ ಸಂಭವಿಸುತ್ತಿವೆ...
ನಿಜವಾದ ಸ್ವಾತಂತ್ಯ್ರವು ನಮಗೆ ಸಿಗುವುದು,
ಇಂತಹ ಕ್ರೂರತೆಗಳಿಗೆ ಕಠಿಣ ಕ್ರಮ ಕೈಗೊಂಡಾಗ ಮಾತ್ರ...
ನಿಜವಾದ ಸ್ವಾತಂತ್ರ್ಯ ದಿನಾಚರಣೆಯನ್ನು ನಾವೆಲ್ಲರೂ ಆಚರಿಸುವ ದಿನ ಆದಷ್ಟು ಬೇಗ ಬರಲಿ...-
ಪಿಳಿ ಪಿಳಿ ಕಂಗಳು,
ತೊದಲು ನುಡಿಗಳು..
ಆಗಾಗ ಬೀಳುವ ಹೆಜ್ಜೆಗಳನಿಡುತ್ತಾ,,
ಬೆಣ್ಣೆ ಕದಿಯುವ ಕೃಷ್ಣನಂತೆ
ಎಲ್ಲರ ಮನವ ದೋಚಿರುವನು
ನಮ್ಮ ಮುದ್ದು ಕಂದ....
ಹೀಗೇ ತುಂಟ ಮಾತ್ರನಾಗದೆ
ಎಲ್ಲರ ಮೊಗದ ನಗುವಾಗು,
ಹೆತ್ತವರ ಮನದ ನೆಮ್ಮದಿಯಾಗು,
ಜಗವ ಗೆಲ್ಲುವ ಸರದಾರನಾಗೆಂದೆನುತ...
ಶುಭ ಕೋರುತಿವೆ,,,,
ಹುಟ್ಟು ಹಬ್ಬದ ಶುಭಾಶಯಗಳು ಅಕ್ಷು ಗುಂಡ😘..-