ಹನಿಗವನ-ಶ್ರೀಮತಿ
-----------------------
ಸಪ್ತಪದಿ ತುಳಿದು ಪ್ರೀತಿ ಸುರಿದವಳು
ಅಕ್ಕರೆಯ ಬಾಳಿಗೆ ಸಿಹಿ ತುಂಬಿದವಳು
ಕಷ್ಟ ಸುಖಕ್ಕೆ ಸಾಂಗತ್ಯ ನೀಡಿದವಳು
ಸಂಸಾರ ಸಾಗರಕ್ಕೆ ಆಧಾರ ಸ್ತಂಭವಾದವಳು
ಬಾಳತೇರಿಗೆ ಅನುರಾಗದ ಪಲ್ಲವಿಯಾದವಳು
ನನ್ನೊಲವ ಶ್ರೀಮತಿಯಾಗಿ ಹೃದಯ ಗೆದ್ದವಳು-
ನೀ ಅಧಿಪತಿಯಾಗು
ನನ್ನ ಕೊರಳ ಸೇರುವ ಮಾಂಗಲ್ಯಸೂತ್ರಕ್ಕೆ😍
ನಾ ಶ್ರೀಮತಿಯಾಗುವೆ
ನಿನ್ನ ಮನೆಗೆ ಆ ಕಲ್ಮಶವಿರದ ಮಗುವಂತ ಮನಕ್ಕೆ💕-
ಹಲೋ, ಓ ನನ್ನ ಮುದ್ದಿನ ಶ್ರೀಮತಿ
ಇರಲಿ ಮಾತಿನಲ್ಲಿ ಸ್ವಲ್ಪ ಮಿತಿ
ಎಷ್ಟೇ ಆದರೂ ನಾ ನಿನ್ನ ಪತಿ
ಹಿಂಗೆ ಆಡ್ತಿದ್ರೆ ಕಾಣುಸ್ತೀನಿ ಒಂದು ಗತಿ..!!-
ಕಲ್ಪನೆಗಳ ಒಡತಿ
ಭಾವನೆಗಳ ಸುಮತಿ
ಇವಳನು ಕಂಡಾಗಲೆ
ಮಾಡಿಕೊಂಡೆ ನಾ
ನನ್ನ ಶ್ರೀಮತಿ....-
ಬುತ್ರೋಟ್ಟಿ ಹಂಚಾಕ ಬಂದಿದ್ಲು ಭಾರತಿ
ನನ್ಬಿಟ್ಟ ಆಕಿ ಕೂಟ ಜಾಸ್ತಿ ಮಾತಾಡ್ತಿ
ಸುರಕ್ಕಿ ಹೋಳ್ಗಿ ತಿನ್ನಾಕ ಸಿಡುಕ ಮಾಡ್ತಿ
ಯಾಕ ಮಾವಾ ನೀ ಹಂಗ್ಯಾಕ ಕಾಡ್ತಿ..!-
ನಂಗೂ ನಿನ್ಮ್ಯಾಲೆ ಐತಿ ಪಿರುತಿ
ನಮ್ಮಪ್ಪಗ ಹೇಳಾಕ ನೀನ್ಯಾಕ ಹೆದರ್ತಿ
ತಿಳ್ಕೊಂಡಿದ್ದ್ಯಾ ಏನಾರ ಐಡ್ಯಾ ಮಾಡ್ತಿ
ಹಿಂಗ ಆದ್ರ ಮುಂದೇಂಗ ಗತಿ
ಕನಸ್ನ್ಯಾಗ ಆದಂಗ ಸತಿ ಪತಿ..!-
ನೀ ನನ್ನವ ಎನ್ನುವ ಹೆಮ್ಮೆ ನನಗೈತಿ
ಮದುವೆ ಆಗೋಗೆ ಸಮಯ ಬೆಕಾಗತೈತಿ
ಯಾಕ ಇಷ್ಟೊಂದು ಅವಸರ ಮಾಡಾತಿ
ಚಿಂತಿ ಮಾಡಬೇಡ ನಾನೇ ಆಗುವೆ ನಿನಗೆ ಶ್ರಿಮತಿ
ನೀ ಕಂಡ ಕನಸು ನನಸಾಗುವ ಸಮಯ ಬಂದೈತಿ
ಇರಲಿ ಅಲ್ಲಿವರೆಗೂ ಕಡಿಮೆ ಆಗದೇ ನನ್ನ ಮೇಲಿನ ಪ್ರೀತಿ
-
ಯಾಕೆಂದರೆ
'ಶ್ರೀಮತಿ' ಗಳಲ್ಲಿ ಶ್ರೀ ಇದೆ
ಆದ್ರೆ 'ಶ್ರೀ' ಗಳಲ್ಲಿ ಶ್ರೀಮತಿ ಇಲ್ಲವೆ!-
ನಾ ಮಾತ್ರ ಕೈ ಬಿಡುಲ್ಲ ಏ ಆರತಿ
ಸಂಕ್ರಾಂತಿಯೊಳಗ ನಮ್ಮ ಮನಿ ನೀ ಸೇರತಿ
ಊರ ತುಂಬೆಲ್ಲ ಬುತರೊಟ್ಟಿ ನೀ ಬೀರತಿ
Cool ಆಗಿರು ಯಾಕಿಷ್ಟು ಸಿಟ್ಟ ಕಾರತಿ.-