QUOTES ON #ವ್ಯಾಪಾರ

#ವ್ಯಾಪಾರ quotes

Trending | Latest
29 MAY 2019 AT 21:11

ನಾನು ಇರುವುದೇ ಹೀಗೆ
ಯಾರು ಇದ್ದರು
ಇಲ್ಲದಿದ್ದರು!
ಇಲ್ಲಿ
ನೀನು
ಗೆಳೆಯನೋ
ಇನಿಯನೋ
ಇಲ್ಲ
ಸಂಬಂಧಿಕನೋ
ನೀನೆ
ಆಯ್ಕೆಮಾಡು!

-



ನೆಮ್ಮದಿಯ ಬದುಕು ನಿನ್ನದಾಗಬೇಕೆಂದರೆ ಹಂಚಿದ ಪ್ರೀತಿ-ವಾತ್ಸಲ್ಯವನ್ನು ಮರಳಿ ಬಯಸಬೇಡ ಗೆಳೆಯ....

-



ನಾವು 'ನಮ್ಮವರು' ಅಂದುಕೊಂಡವರು
ನಮಗೆ 'ತಮ್ಮವರು' ಅಂದುಕೊಳ್ಳಬೇಕು
ಅಂತೇನೂ ಇಲ್ಲ ಈ ಜಗದೊಳಗೆ...!!
(ಸಂಬಂಧಗಳು ಸರಕಲ್ಲ, ಕೊಡು-ಕೊಳ್ಳುವಿಕೆ ಮಾಡಲು)

-


2 JUN 2020 AT 21:01

ಸುಖ ದುಃಖ ಅಥವಾ ಸಿಹಿ ಕಹಿ ನೆನಪುಗಳ ಕೊಡು ಕೊಳ್ಳುವಿಕೆಯ ವ್ಯಾಪಾರ ಮಾಡಲು ಬದುಕು ಬರಿಯ ಭಾವನೆಗಳ ಗೂಡಂಗಡಿಯಲ್ಲ, ಅರ್ಥಾತ್ ಬದುಕು ಲೇವಾದೇವಿ ವ್ಯವಹಾರವಲ್ಲ.

-


19 APR 2020 AT 23:36

ಉದ್ಯೋಗ ಪ್ರಥಮ ಲಕ್ಷಣ
ವ್ಯಾಪಾರ ಉತ್ತಮ ಲಕ್ಷಣ*

-


23 JUN AT 17:33

ಸುಖ ದುಃಖಗಳ ಸಮನಾಗಿ ಅಪ್ಪಿ ನಡೆವುದು ಕಲಿಯೋಣ
ಗಳಿಸಿದ್ದನೆ ಸಂತೃಪ್ತಿಯಿಂದ ಒಪ್ಪಿ ಧರಿಸುವ ನಗುವೆಂಬ ಆಭರಣ

-



ವಚನ
******
ವಿದ್ಯೆ ಅಂಕಗಳ ಮೊತ್ತ ಅಲ್ಲ
ವಿದ್ಯೆ ಹಣದ ತಿಜೋರಿಯಲ್ಲ
ವಿದ್ಯೆ ನೌಕರಿಯ ಸಾಧನವಲ್ಲ
ವಿದ್ಯೆ ಶೋಷಣೆಯ ಮಂತ್ರವಲ್ಲ
ವಿದ್ಯೆ ಶೋಕೇಸ್ ಗೊಂಬೆಯಲ್ಲ
ವಿದ್ಯೆ ಯೋಚಿಸಲು ಹಚ್ಚುವ ನಮ್ಮ
ಮೆದುಳಿನ ಬೀಗದ ಕೈ ಎಂದ
ಸೂರ್ಯದೇವ

-



ವ್ಯಾಪಾರ ಮುಗಿಯಿತು

👇👇👇👇👇👇👇👇

-


1 OCT 2019 AT 15:21

ರಸ್ತೆ ಬದಿ ಸಂತೆಯಲಿ
ಸದಾ ಕಿವಿಗಡಚಿಕ್ಕುವ
ದನಿಗಳಲಿ ನಡೆಯುವ
ಅಬ್ಬಬ್ಬರದ ವ್ಯಾಪಾರಗಳು
ಒಮ್ಮೆಯಾದರೆ....!!
ಕೊಳ್ಳುವವರಿಲ್ಲದೆ ಬಣಗುಡುವ
ನೀರಸ ವ್ಯಾಪಾರಗಳು
ಅಪರೂಪಕೆ ಒಮ್ಮೊಮ್ಮೆ!!
ಏನಾಗಲಿ ವಹಿವಾಟು
ಮುನ್ನಡೆಯಬೇಕು...!!
ಜೀವನದೀ ಸಂತೆಯಲಿ
ಬರುವ ಲಾಭ ನಷ್ಟಗಳೆಷ್ಟೊ
ಅರಿತವರಾರಿಲ್ಲ ಆದರೂ
ಬಿಮ್ಮನೆ ನೋಡು ನೋಡುತ್ತ
ಸುಮ್ಮನೆ ಸಂತೆಯೊಳು
ನಡೆಯುವಂತೆ ನಡೆಯುತ್ತಿರಬೇಕು
ಮುಂದಿನ ಸಂತೆಯಲಿ ಲಾಭ
ಇರುವುದೆಂಬ ಕಿಂಚಿತ್ ಭರವಸೆಯಲ್ಲೆ!!

-


20 MAR 2019 AT 8:10

ಭಾವನೆಗಳ ಸಂತೆಯಲ್ಲಿ ಪ್ರೀತಿ ಅಂಗಡಿ ತೆರೆದ ವ್ಯಾಪಾರಿ, ಹೆಜ್ಜೆಹೆಜ್ಜೆಗೂ ಅಳೆದು ತೂಗಿ ನೋಡಿ ಬೇಡೆನ್ನುವ ದುರುಪಯೋಗಿ ಗ್ರಾಹಕರದೇ ಸಂದಣಿ, ನಷ್ಟ ಪರಿಹಾರಾರ್ಥ ದ್ವೇಷಕ್ಕೆ ಮಾರುಹೋದ ವ್ಯಾಪಾರಿ, ದ್ವೇಷದ ಹೆಸರಲ್ಲಿ ಅಹಂನ ಬೊಕ್ಕಸ ತುಂಬಿ ತುಳುಕಾಡಿತ್ತು.. ಆದರೆ ಮನದ ಉಗ್ರಾಣದಲ್ಲಿ ನೆಮ್ಮದಿ ಸೋತು ಸೊರಗುತಿತ್ತು..

-