ಲವಲವಿಕೆ ಕೂಡಿದ
ಲಾವಣ್ಯ ನೀನು,
ಮನವರಿಕೆ ತಿಳಿಯದೆ
ಹೋದ ಕಾರಣವೇನು ?
ಕನವರಿಕೆ ಕೊಂದು
ಇದೀಗ ಬದುಕಿರುವೆ ನಾನು,
ಹರಿಯುವಿಕೆ ಇಲ್ಲದ
ಕೆಸರಲ್ಲಿ ನಾನಾದೆ ಮೀನು..-
ಎಲ್ಲೆ ಮೀರಿದ ದೃಷ್ಟಿಕೋನಗಳು ಬದಲಾಗಿವೆ,
ಹೇರಳವಾಗಿದ್ದ ಹೇಳದೆ ಉಳಿದ ಭಾವ ನನ್ನಲಿದೆ,
ಕೆಲವೆನಲ್ಲ ಹಲವು ಭಾವನೆಗಳ ಲಗತ್ತುಗಳಿವೆ,
ಅವಳನ್ನೊ ಕಾವ್ಯೋತ್ಸವ ತಟಸ್ಥ ರೂಪ ಪಡೆದಿದೆ,
ಹೀಗೆ ಬರೆಯುವಾಗ ಅಸುನೀಗಲು ಲವಲವಿಕೆ,
ಮರಳಿ ಸಿಗುವೇ ನಾ ನೀ ಬರೆವ ಪದಗಳಲ್ಲಿ!
ಕಿಟಕಿಯ ಕಂಬಿಗಳೆಲ್ಲ ಹೊಸ ಬಣ್ಣ ತೊಟ್ಟಿವೆ,
ಒಂಟಿ ಮೌನವು ಜಂಟಿಯಾಗಿ ಗೀತೆಯ ಹಾಡಿದೆ,
ಮನಸುಗಳ ಸಾಂಗತ್ಯಕೆ ವಿಭಿನ್ನ ಟಿಸಿಲುಗಳಿವೆ,
ಕನಸ ನನಸಾಗಿಸೊ ವಿಧಾನವು ವಿಸ್ತೀರ್ಣವಾಗಿದೆ,
ಇನ್ನೂ ನನ್ನಲ್ಲಿವೆ ಬರೀ ಇಂಥವೇ ಗುನುಗುವಿಕೆ,
ಮರಳಿ ಸಿಗುವೇ ನಾ ನೀ ಬರೆವ ಪದಗಳಲ್ಲಿ!-
ಪೋಲಿ ಮನಸು
ಹಣೆಯ
ಬೆವರನ್ನು
ಇಣುಕಿ ನೋಡಲು
ಕೈಬೆರಳುಗಳು
ಲವಲವಿಕೆಯಿಂದ
ಬರೆದಿರುವ
ಬರಹಗಳಲ್ಲಿ
ಪ್ರೀತಿ
ಒಡಮೂಡಿದೆ ಜಾಣೆ
-
ಲವಲವಿಕೆ ನಿನ್ನಿಂದಲೇ ಚಿಗುರೊಡೆದಿದ್ದು ನಲ್ಲೆ
ಪಾಚು ಹಿಡಿಯುವ ಹಂತಕ್ಕೆ ಬಂದಿದೆ ನಾಚಿಕೆ
ಕಾಯುವ ಬರದಲ್ಲಿ ನೋವಿನ ಜ್ವರದ ಜನನ...-
ಹಳೆಯ ನೆನಪುನೊಂದಿಗೆ
ನವ ಕನಸಿನ ಪರದೆಯೊಳಗೆ
ಒಲವಿನ ವೇದಿಕೆ ಸೃಷ್ಠಿಗೊಂಡಿದೆ.
ಜಾರುವ ಕಂಬನಿಯೊಳಗೆ
ಬೆಳದಿಂಗಳ ಬಾಲೆಯ ಮೊಗದಲ್ಲಿ
ನವಉಲ್ಲಾಸ ನಗು ಮೂಡಿದೆ.
ಹೊಸದಾಗಿ ವಷ೯ವಿಡಿ ಹಷ೯
ಬಾಳಬೆಳಗುವ ಬದುಕಿನ ಆದಶ೯
ಪ್ರಪಂಚದೊಳಗೆ ಪ್ರಖ್ಯಾತಿ ಪಡೆಯಲಿ.
-Gayatri CD
-
ಓ ಗಾಳಿಯೇ ಮತ್ತೊಮ್ಮೆ
ಬೀಸು ಬಿರುಗಾಳಿಯ.
ದಟ್ಟ ರಾತ್ರಿಯಲಿ ಸಾಗುವ
ನೌಕೆಯ ದಡ ಸೇರಿಸು.
ಎಲ್ಲರ ಗುರಿ ತಲುಪಿಸಿದಂತೆ
ನನ್ನ ಹೃದಯದೊಳೂ
ಲವಲವಿಕೆ ಮೂಡಿಸು.
ನಿನ್ನ ಗಾಳಿಗೆ ಸಿಲುಕಿ
ನಿನ್ನಂತೆಯೇ ಬೀಸಬೇಕು ನಾನು
ಯುಗ ಯುಗದಲಿ
ಹರುಷದ ಮುಗುಳು ನಗೆಯಾಗಿ.-