*ಗಜಲ್.*
********
ತಂಗಾಳಿ ಪಿಸು ನುಡಿಯುತಿದೆ ಹೇಗೆ ಹೇಳಲಿ ನೀನಿಲ್ಲವೆಂದು.
ಬಿರುಗಾಳಿಯು ಎದೆ ನುಸುಳಿದೆ ಹೇಗೆ ತಿಳಿಸಲಿ ನೀನಿಲ್ಲವೆಂದು.
ಪಯಣವಿದು ಸಾಗುತಿದೆ ತನ್ನಷ್ಟಕೆ ತಾನು ಸಾಗಿಹೋಗುತಿದೆ.
ಕಣ್ಣೀರಿಡುವ ಆ ಮೋಡಗಳಿಗೆ ಹೇಗೆ ನೆನಪಿಸಲಿ ನೀನಿಲ್ಲವೆಂದು.
ಬರಿದಾಗಿ ಹೋಗಿದೆ ಈ ಹೃದಯವು ನಿನ್ನದೊಂದೂ ಸಪ್ಪಳ ಕೇಳದೆ.
ಕಿವಿ ಬಳಿ ನೀನುಲಿದ ಆ ಮಾತನು ಹೇಗೆ ಕೇಳಿಸಲಿ ನೀನಿಲ್ಲವೆಂದು.
ಬಿರುಕು ಬಿಟ್ಟ ಜೋಪಡಿಯಿಂದ ಬೆಳಕಿನ ಗೆರೆಗಳು ನುಸುಳುತಿವೆ
ಜೀವವಿಲ್ಲದ ಕನಸಿನ ಗೂಡನು ಹೇಗೆ ನೋಡಲಿ ನೀನಿಲ್ಲವೆಂದು.
ನಿರಾಸೆಯ ಅನುಭವ ಎದೆತುಂಬಾ ಸುತ್ತಿಕೊಂಡು ಉಸಿರುಗಟ್ಟಿದೆ
ರೆಕ್ಕೆ ಕಿತ್ತಿದ ಹಕ್ಕಿಯಂತೆ ನಾನೀಗ ,ಹೇಗೆ ಸಹಿಸಲಿ ನೀನಿಲ್ಲವೆಂದು.
ಆದರೂ ಉಸಿರಾಡಲು ಬಯಸುತ್ತಿರುವೆ ರವಿಯ ಬೆಳಕ ನಂಬಿ
ನೀರಲಿ ಕಂಡ ನಿನ್ನ ಬಿಂಬವ ಹೇಗೆ ಮರೆಯಲಿ ನೀನಿಲ್ಲವೆಂದು.
*ರವಿ.ವಿಠ್ಠಲ. ಆಲಬಾಳ.*
(ಕನ್ನಡಿಗ ರವಿ)-
ಕನ್ನಡಿಗ ರವಿ
(ಕನ್ನಡಿಗ ರವಿ .(ರವಿ.ವಿಠ್ಠಲ)
485 Followers · 37 Following
ನಮಸ್ಕಾರ . ಕನ್ನಡ ಓದುಗ ಬಳಗಕ್ಕೆ ಕನ್ನಡಿಗ ರವಿಯ ಶುಭ ನಮನಗಳು. ನನ್ನ ಹೆಸರು ರವಿ.ವಿಠ್ಠಲ.ಆಲಬಾಳ. ಊರು ಜಮಖ... read more
Joined 2 August 2017
8 DEC 2021 AT 19:46
31 JUL 2018 AT 8:06
ನಾನು ಕವಿತೆ ಬರೆಯುವುದು ಪುಸ್ತಕ ಪ್ರಕಟಿಸಲೆಂದಲ್ಲ, ನಾ ಸತ್ತ ಮೇಲೆ
ಒಬ್ಬರಾದರೂ ಓದಲೆಂದು.-
5 DEC 2017 AT 22:51
ಕರಗುತಿರುವೆ ನನ್ನೊಳಗೇ ಮೌನ ಜೀವದಂತೆ
ಕಾಂಕ್ರೀಟ್ ಸಮಾಧಿಗಳ ನಡುವೆ...
...ಇಳೆ ಅಲ್ಲ ನಾನು,ಕೊಳೆಯಾಗಿ ಉಸಿರಾಡುತಿರುವೆ.-
30 SEP 2017 AT 14:31
ಕಾಮ
ಮೋಹ
ಮದ
ಮತ್ಸರ
ಕ್ರೋಧ
ಲೋಭ
ಅಭವಮಾತ್ರ
ಅಹಂಕಾರ
ಸ್ವಾರ್ಥ
ಧುರ್ಮತಿ.
ಈ ದಶಮುಖಗಳ ಗೆದ್ದು ಬಂದವನೇ ವಿಜಯಶಾಲಿ.-