ಓಯ್ ಇವಳೇ,
ಬಣ್ಣ ಬಣ್ಣದ ಮಾತಿನ ಅರಮನೆಯನ್ನು ಕಟ್ಟಿ,
ಆ ಅರಮನೆಯ ಹೆಬ್ಬಾಗಿಲ ಮುಂದೆ ನಿನ್ನ ಗುಂಡಿ ತೊಡುವವರಿದ್ದಾರೆ ನೆನಪಿರಲಿ...-
ಈ ಮೋಸ ಮಾಡೋರು
ಒಂಥರಾ ಕೆರೆಯಲ್ಲಿ ಇರೋ
ನೀರಿನ ಸುಳಿ ತರ.
ದೂರ ನಿಂತು ನೀರಿನ
ಸುಳಿಗೆ ಕಲ್ಲು ಎಸೆದಾಗ
ಮೂಡುವ ಚಿತ್ತಾರದ ತರ
ಮೊದ ಮೊದಲು
ಚನ್ನಾಗೆ ಕಾಣಸ್ತಾರೆ ಹಾಗೆ
ಚನ್ನಾಗೂ ಇರ್ತಾರೆ
ಮನಸ್ಸಿಗೂ ಹತ್ತಿರ ಆಗ್ತಾರೆ.
ಆದರೆ ಚನ್ನಾಗಿದೆ ಇದೆ ಅಂತಾ
ನಾವು ಮುಂದೆ ಹೋಗಿ
ನೋಡಿದಾಗಲೇ ಅಥವಾ
ಅದರಲ್ಲಿ ಈಜಲು ಹೋದಾಗಲೇ
ಗೊತ್ತಾಗೋದು ಅದೊಂದು
ಮೃತ್ಯು ಕೂಪ ಅಂತ
-ಅಂಕಿತಾ ಕೋಪರ್ಡೆ
-
ಬಿಟ್ಟು ಬಿಡು ಬಿಟ್ಟು ಬಿಡು ಎಂದು ನೀ ಬಾರಿ ಬಾರಿ ಬಾಯ್ಬಿಟ್ಟು ಹೇಳಿದರೂ ಮತ್ತೆ ಮತ್ತೆ ನಿನ್ನ ಬಯಸಿ ನಿನ್ನ ಬಳಿ ಬರುತ್ತಿರುವೆನಲ್ಲಾ ತಪ್ಪು ನಿಂದಲ್ಲಾ ಗೆಳತಿ ನನ್ನದು
ನನ್ನ ಅತಿ ಪ್ರೀತಿಯ ನಂಬಿಕೆಯದು....!-
ಮೋಸ ಮಾಡುವ
ಮಾತು ಆಡಬೇಡ
ಹುಚ್ಚಿ. ಇಲ್ಲಿ ಕೋರಿಕೆ
ಈಡೇರದಿದ್ದರೆ ಜನ
ಜನರನಷ್ಟೇ ಅಲ್ಲ
ದೇವರನ್ನು ಕೂಡ
ಬದಲಾಯಿಸುತ್ತಾರೆ.
ನೀನೇನು ಮಹಾ..!-
ಬುದ್ಧಿ, ಕಣ್ಣಿನಂತೆ..
ಮುಂದಿರುವುದ ಮಾತ್ರ ನೋಡುವುದು.
ಕಾಲಿಲ್ಲದ ವಿಕಲಚೇತನನಂತೆ.
ಮನಸ್ಸಿನ ಕಾಲನುಪಯೋಗಿಸೆ...
ಗತಿಶಕ್ತಿಯದಕೆ. ಓಡಾಟದ ಬಲ.
ನಮ್ಮ ಕಣ್ಣು, ಕಿವಿ, ಮನಸಿಗೆ
ನಿಲುಕುವಷ್ಟು ಮಾತ್ರ.
ಬುದ್ಧಿ ಬಿಟ್ಟ ಮನಸು
ಪುನಃ ಕುರುಡು.-
ಬದುಕ ಬಂಡಿಯಲ್ಲಿ
ಸಾಗುತಿರ್ಪ ಕನಸುಗಳ ಸರಕು
ಹಳಿತಪ್ಪಿ ಬಿದ್ದಿತ್ತು
ಬಿರಿಬಿಟ್ಟ ಬದುಕ ಚಕ್ರದೊಳು..!
ತುರಗಾತಿವೇಗದಿ ಸಾರ್ದು
ಸೊಳ್ಳೆಗಳಂತೆ ಕಿರಿಕಿರಿ ವೇಷಮಾಡಿ
ಸಂಬಂಧಗಳು ರಕ್ತಹೀರಿತ್ತು
ಬಿರಿಬಿಟ್ಟ ಬದುಕ ಚಕ್ರದೊಳು..!
ಒಯ್ಯನೆ ತೀಡಿದತ್ತು ಅಷ್ಟರಲ್ಲಿ
ಆ ಹರನ ಮಾಯಾಚಳಕ.
ನಳಿನದಳದ ಮನ ಮುಗುಳ್ನಕ್ಕಿತು
ಬಿರಿಬಿಟ್ಟ ಬದುಕ ಚಕ್ರದೊಳು..!-
ನನಗೆ ನೀನು ಮೋಸ
ಮಾಡಿದ್ದು ನಿನ್ನ ತಪ್ಪಲ್ಲ.
ನಾನು ನಿನಗೆ ಅವಕಾಶ
ಕೊಟ್ಟೆನಲ್ಲ ಅದು ನನ್ನ ತಪ್ಪು.-
ಬದುಕಿರುವಾಗಲೇ
ಸಾವಿನೊಂದಿಗೆ
ಮುಖಾಮುಖಿ
ಆಗಬೇಕಾದರೆ
ವಂಚಕನೊಂದಿಗೆ
ಪ್ರೇಮಿಸಿ ನೋಡಿರಿ.-
ನಿನ್ನ ಖುಷಿಯೇ ನನ್ನ ಖುಷಿಯೆಂದಾಗ
ಮನವು ಸೋತಿತ್ತು,
ನನ್ನ ಮರೆತು ಬಿಡು ಎಂದು ನುಡಿದಾಗ
ಮನವು ಅಸುನೀಗಿತ್ತು.!
-