ತಾನು ಪ್ರೀತಿಸುತ್ತಿದ್ದ ಪ್ರೇಯಸಿಗೆ
'ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ'
ಎಂದು ತನ್ನ ಮನಸ್ಸಿನ ಭಾವನೆಯನ್ನು
ತಾನು ಅಂದುಕೊಂಡ ಸಮಯದಲ್ಲಿ
ಅಂದುಕೊಂಡ ಹಾಗೆಯೇ ಧೈರ್ಯದಿಂದ
ಅಭಿವ್ಯಕ್ತಪಡಿಸಿ ಯಶಸ್ವಿಯಾದ ವ್ಯಕ್ತಿ
ಇತಿಹಾಸದಲ್ಲಿ ಸಿಗುವುದು ಕಷ್ಟಸಾಧ್ಯ.-
ಉಪನ್ಯಾಸಕರು
🌍🖋 ಬಹುಭಾಷಾ ಕವಿ / ಸಾಹಿತಿ / ಸಂಘಟಕ / ಚಿಂತಕ / ಅನುವಾದಕ / ನಿಮ್... read more
ಪ್ರೇಮ ಎಂಬುವುದು ಜಾತಿ-ಧರ್ಮ,
ಸಿರಿ-ಸಂಪತ್ತು ಎಲ್ಲದಕ್ಕೂ ಮಿಗಿಲಾದುದು.
ಅದನ್ನು ಅರ್ಥೈಸಿಕೊಂಡು ಅಭಿವ್ಯಕ್ತ
ಪಡಿಸುವುದು ಅಷ್ಟೊಂದು ಸರಳವಲ್ಲ.-
🎂 ಜನ್ಮದಿನದ ನಿಮಿತ್ಯ ವಿಶ್ವದ
ಜನತೆಗೆ ವಿಶೇಷ ಸಂದೇಶ 🎂
26 ಅಕ್ಟೋಬರ್-
#ಬದುಕಿನ_ಚಕ್ರ
₹ ಆಗರ್ಭ ಬಡವನ ಮೊಮ್ಮಗ ಕಷ್ಟಪಟ್ಟು ಮಧ್ಯಮ ವರ್ಗಕ್ಕೆ ಪರಿವರ್ತಿತಗೊಳ್ಳುತ್ತಾನೆ.
₹ ಮಧ್ಯಮ ವರ್ಗದವನ ಮೊಮ್ಮಗ ಮತ್ತಷ್ಟು ಕಷ್ಟಪಟ್ಟು ಶ್ರೀಮಂತನಾಗುತ್ತಾನೆ.
₹ ಶ್ರೀಮಂತನ ಮೊಮ್ಮಗ ಯಥಾಸ್ಥಿತಿಯಲ್ಲಿಯೇ ಆಗರ್ಭ ಶ್ರೀಮಂತನಾಗಿ ಮುಂದುವರೆಯುತ್ತಾನೆ.
₹ ಯಥಾಸ್ಥಿತಿಯಲ್ಲಿಯೇ ಮುಂದುವರೆದ ಆಗರ್ಭ ಶ್ರೀಮಂತನ ಮೊಮ್ಮಗ ಮರಳಿ ಮಧ್ಯಮ ವರ್ಗಕ್ಕೆ ಪರಿವರ್ತಿತಗೊಳ್ಳುತ್ತಾನೆ.
#ಪ್ರತಿ 360 ವರ್ಷಗಳಿಗೊಮ್ಮೆ ಬುಡಮೇಲು ಕಟ್ಟಿಟ್ಟ ಬುತ್ತಿ.-
'ಸಂಪಾದನೆ'ಗೆ ಬಳಸದ ಸಮಯ ವ್ಯರ್ಥ.
ನಂಬಿಕೆಯನ್ನು ಉಳಿಸುವ
ಜ್ಞಾನವನ್ನು ಬಳಸುವ
ಚಾರಿತ್ರ್ಯವನ್ನು ಗಳಿಸುವ
ಸಮಯವೇ ಅತ್ಯಮೂಲ್ಯ.-
ಆಚರಣೆಯ ಧರ್ಮ
ಅನುಕರಣೆಯ ಧರ್ಮ
ಅನುಸರಣೆಯ ಧರ್ಮಕ್ಕಿಂತ
ಅತ್ಯುನ್ನತ ಕರ್ಮಗಳ
ಧರ್ಮವೇ ಸರ್ವಶ್ರೇಷ್ಠ.-
"ಎದುರಾಳಿಯನ್ನು ಸೋಲಿಸುವವನು
ಬಲಿಷ್ಠನಲ್ಲ. ಕೋಪಗೊಂಡಾಗ ತನ್ನನ್ನು
ತಾನು ನಿಯಂತ್ರಿಸಿಕೊಳ್ಳುವವನು ಬಲಶಾಲಿ."
~ ಪ್ರವಾದಿ ಮುಹಮ್ಮದ್(ಸ)
ಅನುವಾದಕರು --
ಅಜ್ಞಾನಿಗಳ ಮುಂದೆ
ಜ್ಞಾನಿಯಂತೆ ವರ್ತಿಸುವವರು
ಸುಜ್ಞಾನಿಗಳಲ್ಲ. ಅಜ್ಞಾನಿಗಳನ್ನು
ಜ್ಞಾನಿಗಳಾಗಿ ಪರಿವರ್ತಿಸುವವರು
ನಿಜವಾದ ಸುಜ್ಞಾನಿಗಳು.-
ಒಳ್ಳೆಯ ನಡವಳಿಕೆಯುಳ್ಳವ
ಅಸಡ್ಡೆ ವರ್ತನೆ ತೋರದವ
ದ್ವೇಷವ ಸ್ನೇಹದಲ್ಲಿ ಬದಲಿಸುವ
ದೊಡ್ಡ ಧ್ವನಿಯಲ್ಲಿ ಮಾತನಾಡದವ
ಬಲಭಾಗದಲ್ಲಿದ್ದರು ಹೋರಾಡದವ
ತಮಾಷೆಗಾಗಿಯೂ ಸುಳ್ಳು ಆಡದವ
ಸರ್ವಕಾಲಕ್ಕೂ ಸುಖಿಯಾಗಿರುವನು.-
ಸ್ನೇಹದ ನೆಪ ಮಾಡಿ
ದ್ರೋಹ ಬಗೆಯುವ
ಸಹಾಯದ ನೆವ ಹೇಳಿ
ಸಂಹಾರ ಮಾಡುವ
ಜಾತಿಯ ಸೋಗು ಹಾಕಿ
ಭೀತಿ ಹುಟ್ಟಿಸುವವರು
ವಿನಾಶದ ಅಂಚಿನಲ್ಲಿದ್ದಾರೆ.-