ಸಾಗುವ ದಾರಿಯಲಿ ಅಂತೆ-ಕಂತೆಗಳ ಜೊತೆ
ಮೂರ್ಖರ ಸಂತೆಯು ಇರುವುದು
"ಮುಕ್ಕಾಲು" ಕೊಟ್ಟು ಮಂದರಾಗದಿರಿ
"ಕಾಲು" ಕಿತ್ತು ಬಿಡಿ-
ಕಲ್ಲು ಹೃದಯವನ್ನು ಕೆತ್ತುವಷ್ಟು ಮೂರ್ಖನಾಗಬೇಡ,
ಉಳಿ ಪೆಟ್ಟು ನಿನ್ನದೇ ಹೃದಯವನ್ನು ಇರಿದು ಕೊಲ್ಲುವುದು...— % &-
ಬಿದ್ದವನಿಗೆ ಕೈ ಕೊಟ್ಟು ಸ್ನೇಹ
ಪಡೆದುಕೊಳ್ಳಬಹುದು
ಬೀಳಿಸಿದವನು ನೀನೆ ಎಂದು ತಿಳಿದರೆ
ಯೋಚಿಸು ಏನಾಗಬಹುದು?-
ಒಬ್ಬ ವ್ಯಕ್ತಿಯ ಇಂದು ಮೂರ್ಖರನ್ನಾಗಿಸಲು ಹೋಗಿ ಜೀವನಪರ್ಯಂತ ನೀವೇ ಮೂರ್ಖರಾಗದಿರಿ!
-
ಕಲ್ಲು ಹೃದಯವನ್ನು ಕೆತ್ತುವಷ್ಟು ಮೂರ್ಖನಾಗಬೇಡ,
ಉಳಿ ಪೆಟ್ಟು ನಿನ್ನದೇ ಹೃದಯವನ್ನು ಇರಿದು ಕೊಲ್ಲುವುದು...-
ಮೂರ್ಖರ ದಿನವಂತೆ ಇಂದು
ಮೂರ್ಖರಾದವರು ಅಳುವರಂತೆ ಎಂದೂ
ಮೂರ್ಖಳಾದರು ನಗುತ್ತಿರುವೆ ನಾನೆಂದೂ
ತಪ್ಪೇನಿಸುತಿಲ್ಲ ನಿನ್ನಿಂದ ನಾ ಮೂರ್ಖಳಗಿದ್ದು
ತಪ್ಪು ನಿಂದ್ದಲ್ಲ ನಿನ್ನ ಮೇಲಿನ ಹುಚ್ಚು ವ್ಯಾಮೋಹದು
ಮೂರ್ಖತನದಲ್ಲು ಸುಖವಿದೆಯೆಂದರಿತಿರುವೆಯಿಂದು
ಉಸಿರಿರೋವರೆಗು ನಿನ್ನ ಸಂತಸಕ್ಕಾಗಿ ಮೂರ್ಖಳಾಗಳು ಸಿದ್ದ ನಾನೆಂದೆಂದೂ.-
ಮುಗ್ಧತೆಯನ್ನು ಮುಟ್ಟಾಳತನವೆಂದು
ಮೂದಲಿಸುವ ಕಾಲಘಟ್ಟದಲ್ಲಿ
ನಾವಿಂದು ಕಾಲ ನೂಕುತಿದ್ದೇವೆ.-
ಅಂತರಾತ್ಮದೊಳಗಿಹನು ಪರಮಾತ್ಮನು
ಅರಿಯದೇ ಅಲೆದಲೆದ ಮಹಾಮೂರ್ಖನು
ಅಹಂ ಧರಿಸಿ ನೀನಾಗಿರುವೆ ಪ್ರೇತಾತ್ಮನು
ದಹಿಸು ನಿನ್ನೊಳಗಿನ ಮೌಢ್ಯವ
ದೂಡು ಮಸ್ತಕದೊಳಗಿನ ದುರ್ಬುದ್ಧಿಯ
ದಣಿಸು ದೇಹವ ಸತ್ಕರ್ಮಗಳಲಿ
ಮಸಣದ ಅತಿಥಿಯೆಂಬುದ ಮರೆಯದಿರು
ಮಂಡಳದೊಳಗ್ಯಾರು ಮಡಿಯದೆ ಉಳಿದಿಲ್ಲ
ಮುನ್ನುಡಿಗೂ ಮುಂದಿದೆ ಹಿನ್ನುಡಿಯ ಬರಹ..-
ಸ್ಟೇಜ್ ಮೇಲೆ
ನಿಂತು ಹೇಳುವ ಹೇಳಿಕೆಗಳಿಂದ
ಸಾವಿರ ಜನ ನಾವು
ನಿಮ್ಮವರೆಂದು ಚಪ್ಪಾಳೆ ತಟ್ಟಬಹುದು,
ಸರ್ವೆ ಪ್ರಕಾರ
ಆಡಿದವ ಮಾಡುವ ಕಾರ್ಯ
ತಿಳಿದ ಮೇಲೆ ಮೂಸೋಕು
ಮೂವರು ಇರೊದಿಲ್ಲ ತಿಳಿಬೇಕು ನಾಳೆ;-
ಮುಂಜಾನೆ ಮಾತು;)
🌺🌺🌺🌺🌺🌺🌺
ಅಲ್ಲೊಬ್ಬ,,
ಮೂರ್ಖನಿಗೆ ಬುದ್ದಿ ಹೇಳುತ್ತಿದ್ದಾನೆ ಎಂದರೆ
ಅರಿತುಕೋ,,;
ಅಲ್ಲಿ ಮೂರ್ಖ ಒಬ್ಬನಲ್ಲ, ಇಬ್ಬರಿದ್ದಾರೆ ಎಂದು!!...-