ವಾದಕ್ಕಿಳಿಯುವ ಹೆಣ್ಣು ವೇದ ಮರೆಯುವಳು
ಭೇದ ಮಾಡುವ ಗಂಡು ಕ್ರೋಧ ಎಸಗುವನು-
ಜಗತ್ತನ್ನೇ ಬೆಳಗುವ
ರವಿಗಿಲ್ಲ ಮೇಲು
ಕೀಳೆಂಬ ಭಾವ..
ನಾವು ಅವನಿಗಿಂತ
ದೊಡ್ಡವರೆನೂ ಅಲ್ಲ
ಆದರೂ ಏಕೆ ಈ
ಜಾತಿ ಭೇದ ಭಾವ..!!??
ಸಮಾನತೆಯಿಂದ ಬಾಳಿದರೆ
ಎಲ್ಲ ಮನುಜ ಕುಲವು
ನೆಮ್ಮದಿಯಿಂದ
ಒಂದು ಹೊತ್ತು
ಊಟ ಮಾಡಬಹುದು..
ಏತಕ್ಕೇ ಈ ಭೇದ ಭಾವ
ಒಂದು ಹೊತ್ತು
ಊಟಕ್ಕಾಗಿ ಅಲ್ಲವೇ..!!??
-
ಅರಮನೆಯೊಳಿದ್ದ ದೀಪವನ್ನ
ಗುಡಿಸಲೊಳು ತಂದಿಟ್ಟೆ
ಅದೇನು ಕುಗ್ಗಲಿಲ್ಲ
ಗುಡಿಸಲೊಳಿದ್ದ ದೀಪವನ್ನು
ಅರಮನೆಯೊಳಿಟ್ಟೆ
ಅದೇನು ಹಿಗ್ಗಲಿಲ್ಲ
ಭೇದವಿಲ್ಲದ ಬೆಳಕಿನೊಳು
ಭೇದ ಹುಡುಕತ್ತಿರುವ
ನನ್ನ ಮನವಷ್ಟೆ ಕಾಣುತ್ತಿದೆ
ನನ್ನ ಮನವಷ್ಟೆವಕಾಣುತ್ತಿದೆ....-
ಬಾಡಿಗೆ ಮನೆಯ ದೇಹ
ಬಾಡಿಗೆ ಕಟ್ಟೊ ಮಾನವ
ಬಂದಿರುವೆ ನಿನ್ನದಲ್ಲದೂರಿಗೆ
ಬಯಸಬೇಡ ಏನು ಸುಲಿಗೆ
ಬೋರ್ಗರೆದರು ಭೂಮಿ ತಾಯಿ
ಬಿಡಳು ನಿನ್ನ ತಬ್ಬಿಕೊಳ್ಳದೆ
ಬೇಡ ಬೇಕು ದಿನವು ನಾವು
ಬಂಗಾರದ ಗಿಳಿಗೂ ಇದೆ ಸಾವು
ಬೆಟ್ಟದ ಮೇಲೆ ಮಲಗಿದರು
ಬವಣೆ ಹೊಟ್ಟೆಗೆ ಗಂಜಿ ಬೇಕು
ಭೋಲೆನಾಥ ಯಾರಿಲ್ಲ
ಬಾ ಎಂದಾಗ ಹೋಗಬೇಕು
ಬದುಕು ಇರುವ ತನಕ ಇಲ್ಲಿ
ಬಂಧುಗಳಲ್ಲಿ ಒಬ್ಬನಾಗಿ ಖುಷಿಯಲಿ
ಭಾವನೆಗಳಿಗೆ ಕೈ ಜೋಡಿಸಿ
ಬೇದ-ಭಾವ ಅಳಿಸಿ ನೀನಾಗಿರು ಮಾನವ-
ಭೇದ
*****
ನನಗೂ ನಿನಗೂ ಇಹುದು
ಅದೆಷ್ಟು ಭಾವಗಳ ಭೇದ
ಆದರೂ ಬೆಸೆದಿಹುದು
ಬಾಳ ಸರಿಗಮ ನಾದ-
ಒಡಲಲ್ಲಿರುವಾಗ ಗರ್ಭಪಾತದ ಭೇದ,ಮಡಿಲಲ್ಲಿರುವಾಗ ಪಕ್ಷಪಾತವೆಂಬ ಭೇದ...ತಪ್ಪಿದಲ್ಲಿ ಹಿಡಿತ ,ನಿಸರ್ಗದ ಅನುಪಾತ ,ಕೆಡುವುದು ನಿಶ್ಚಿತ..ಇರುವ ಎರಡು ಪ್ರಭೇದಗಳಲಿ ಯಾಕೀ ಭೇದ?
-
ಜಾತಿ ಜಾತಿಗಳ ನಡುವೆ ಭೇದ
ಧರ್ಮಾಚರಣೆಗಳು ಭೇದ
ಭೇದಗಳುಂಟು ವಿಚಾರಗಳಲ್ಲಿ
ಕರಿಯನೋ ಬಿಳಿಯನೋ
ಎಲ್ಲರೂ ಮಾನವರೇ
ಶಕ್ತಿ ಯುಕ್ತಿಗಳಲ್ಲಿ ಭೇದ
ಕೆಂಪನೆಯ ರಕ್ತ ...ಇಲ್ಲ ಭೇದ
ಜೀವವೂ ಒಂದೇ..ಪ್ರಾಣ ಒಂದೇ
ಬೆವರು ಹರಿಯಲಿ
ರಕ್ತ ಹರಿಯದಿರಲಿ.-
ಭೇದವಿರುವುದು ಮನುಷ್ಯರಲ್ಲಿ
ಅಲ್ಲ ಅವರ ದೃಷ್ಟಿಯಲ್ಲಿ.
ಭೇದವಿರುವುದು ಸಂಸ್ಕೃತಿ,
ಸಂಪ್ರದಾಯಗಳಲ್ಲಿ
ಅಲ್ಲ ಅದನ್ನು ಪಾಲಿಸುತ್ತಿರುವ
ಸಂಕುಚಿತ ಮನಸುಗಳಲ್ಲಿ,
ಭೇದವೆನ್ನುವುದೇನೂ ಬಿಡಿಸಲಾಗದ
ಕಗ್ಗಂಟಲ್ಲ ಆದರೆ ಬಿಡಿಸಲು ಬಂದರೂ
ಬರದಂತೆ ಕಪಟವಾಡುವ ಜನರ
ಆಯುಧ...-
ಎಲ್ಲ ಸಮಯ ನಮ್ಮ ಬಯಕೆಗೆ ಪೂರಕವಾಗಿದ್ದು, ಅದು ಏರುಮುಖವಾಗಿರುವುದೂ ಜೀವನದ ಸತ್ಯಕ್ಕೆ ವಿರುದ್ಧ!.
ಸಮಯದ ಜೊತೆ ಇರುತ, ಅದು ಕೊಡುವ
ಸಿಹಿ-ಕಹಿಗಳ ಸಮಾನವಾಗಿ ಸ್ವೀಕರಿಸುತ್ತ ಇರುವ.
ಕಾಲಕ್ಕಿಲ್ಲ ಭೇದ, ಅದಕ್ಕೆ ಒಂದೇ ಎಲ್ಲ ಪ್ರಭೇದ!
ವರ್ತಮಾನದ ಸುತ್ತ ಅಲ್ಲಲ್ಲಿ ಕಣ್ಣಿಗೆ ಕಾಣದೇ ಹಾಗೇ ಹೋಗುತ್ತಿರುವ, ಆ ಕ್ಷಣಗಳ ಸುತ್ತ ಇರುವ ಸಂತಸವ ಅನುಭವಿಸುವ!...ಕಾಲಕ್ಕೂ ಅಚ್ಚರಿ ಪಡಿಸುವ!.-