ನನ್ನ ಮೌನ ಸಾವಿರಾರು ಶಬ್ಧಗಳನ್ನು ಹೇಳುತ್ತಿದೆ...
ಆದರೆ ...
ಅದಕ್ಕೆ ಗೊತ್ತಿಲ್ಲ...
ನಿನ್ನ ಹೃದಯಕ್ಕೆ ಕಿವಿಯಿಲ್ಲವೆಂದು...-
ಗಾಯತ್ರೀ ರಾಘವೇಂದ್ರ
527 Followers · 160 Following
Joined 26 April 2017
8 AUG 2022 AT 10:34
28 NOV 2020 AT 20:23
ಜೀವನವೇ ಒಂದು
ಸಂಬಾರದ ಬಟ್ಟಲು
ಸರಿಯಾದ ಮಸಾಲೆ ಹಾಕಬೇಕು
ಬಾಳು ರುಚಿಗಟ್ಟಲು-
11 NOV 2020 AT 17:26
ದೇವರು ಅಡ್ಮಿನ್ ಆಗಿ ಸೃಷ್ಟಿ ಮಾಡಿರೋ
ಜೀವನ ಅನ್ನೋ ಗ್ರೂಪ್ ನಲ್ಲಿ
ನಾವೆಲ್ಲಾ ಸಾಮಾನ್ಯ ಸದಸ್ಯರು..
ಬೇಸರ ಬಂತು ಅಂತ ನಾವೇ ಲೆಫ್ಟ್ ಆಗೋಕಾಗಲ್ಲ
ಅವನ ಸೆಟ್ಟಿಂಗೇ ಅಂಥದ್ದು...
ಅವನೇ ರಿಮೂವ್ ಮಾಡಿದಾಗ ಮಾತ್ರ
ನಮಗೆ ಮುಕ್ತಿ
-
9 NOV 2020 AT 18:50
ನಿನ್ನೆಗಳ ನಿಟ್ಟುಸಿರಲ್ಲಿ ಬಚ್ಚಿಟ್ಟಿದ್ದೆ ಆ ಬೆಂಕಿಯ
ಈ ಕಾಲವಾದರೋ ಕೆದಕೆದಕಿ ಗಾಳಿಹಾಕುತ್ತಿದೆ-
8 NOV 2020 AT 19:35
ಕಾಲ ಬದಲಾಗುತ್ತಾ ಸಾಗಿತು...
ಬದುಕು ಕೂಡ ಬಣ್ಣಗಳ ಬದಲಿಸುತ್ತ ನಡೆಯಿತು....-
20 SEP 2020 AT 9:34
ಮನುಷ್ಯ ಅದೆಷ್ಟು ವಿಚಿತ್ರ....
ಆತ್ಮೀಯರನ್ನು ದೂರ ಮಾಡಿಕೊಳ್ಳುತ್ತೇವೆ
ಮತ್ತು
ಅವರಿತ್ತ ವಸ್ತು, ನೆನಪುಗಳನ್ನು ಕಾಪಿಡುತ್ತೇವೆ...-
26 JUL 2020 AT 19:42
ಕೃಷ್ಣಾ...
ನಿನಗಾಗಿ ತಂದೆ ಈ ಜಾಜಿ ಮೊಗ್ಗು
ಮೊಗ್ಗಿನೆದೆಯೊಳಗೋ ಅತಿ ಪುಳಕ ಹಿಗ್ಗು-