ಸಣ್ಣಕತೆ
ಆರಡಿ ಎತ್ತರ, ಅದಕ್ಕೆ ತಕ್ಕ ಕಟ್ಟುಮಸ್ತಾದ ಮೈಕಟ್ಟಿನ ಅಜಾನುಬಾಹು ವ್ಯಕ್ತಿ ನಿರುಮ್ಮಳನಾಗಿ ಮಲಗಿದ್ದ ಶವಪೆಟ್ಟಿಗೆಯಲ್ಲಿ.
ಸ್ಮಶಾನಕ್ಕೆ ಹೊತ್ತು ಕೊಂಡು ಹೋಗಲು ನಾಲ್ಕು ಜನರು ಸಾಕಾಗಲಿಲ್ಲ. ಮತ್ತಷ್ಟೂ ಕೈಗಳು ಕೈ ಜೋಡಿಸಿದವು. ಪಾದ್ರಿಗಳು ಹೇಳಿದರು ಅವನ ಹೆಂಡತಿಯತ್ತ ಕೈತೋರಿಸಿ "ಆಕೆಯ ದುಖಃದ ಬಾರದಷ್ಟಿಲ್ಲ ಬಿಡಿ ಕಾಫಿನ್"!-
ಇರುವುದು ಸಾಕು ಅಂದುಕೊಂಡರೆ
ಉಳಿಯುವುದು ಸುಖ,
ಇಲ್ಲ ಸಲ್ಲದ್ದೆಲ್ಲಾ ಬೇಕು ಅಂದುಕೊಂಡರೆ
ಸಿಗುವುದು ದುಃಖ.-
ಅವರು ಮನುಷ್ಯರಂತೆ
ಅದ್ಕೇ ಅವರ ಮನದೊಳಗೆ
ತುಂಬಾನೇ ನೋವು
ದುಃಖ ದುಮ್ಮಾನಗಳು ಇವೆಯಂತೆ
ಹಾಗಾದ್ರೇ ನಾವೇನು ಕಲ್ಲು
ಬಂಡೆಗಳಾ.!?-
ಜೀವನದಲ್ಲಿ ನಿರೀಕ್ಷೆಗಳು ಕೊಡುವಷ್ಟು ನೋವು, ದುಃಖಗಳನ್ನು ಬೇರೆ ಯಾವ ವಿಷಯಗಳು ಕೊಡಲಾರವು ಆದ ಕಾರಣ ಜೀವನದಲ್ಲಿ ಯಾವುದೇ ವ್ಯಕ್ತಿ ಅಥವಾ ವಸ್ತುವಿನ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೆ ಇರುವುದೇ ನೆಮ್ಮದಿಯ ಜೀವನ ನಡೆಸಲು ಸರಿಯಾದ ಮಾರ್ಗ
-
ಮನದಿ ಹೆಪ್ಪುಗಟ್ಟಿದ ದುಃಖ
ಕಣ್ಣೀರ ಹನಿಹನಿಯಾಗಿ
ಹರಿಯೇ ಹಗುರವಾಗುವುದೀ ಮನ.-
ನಂಬಿಕೆ ಕಳೆದುಕೊಂಡ ಮೇಲೆ
ನಗುವಿಗಾಗಲಿ ಅಳುವಿಗಾಗಲಿ
ಬೆಲೆ ಸಿಗಲ್ಲ ಸಿಕ್ಕರೂ ಅದು
ಮೊದಲಿನಂತೆ ಇರಲ್ಲ.-
ಉಸಿರು ಗಟ್ಟಿಸುವ ವಾತಾವರಣದ ಸೃಷ್ಟಿಗೆ
ನಾವೇ ಕಾರಣರಾದರೆ ಅದರ ಫಲಿತಾಂಶದ ಕಹಿಯನ್ನ ನಾವೊಬ್ಬರೇ ಸ್ವೀಕಾರ ಮಾಡಬೇಕಾಗುತ್ತದೆ.
ನಮ್ಮ ಆಸೆ ಕನಸುಗಳು ಇನ್ನೊಬ್ಬರಿಂದ ಈಡೇರಿಸಿಕೊಳ್ಳಲು ಬಯಸುವುದೇ "ದುಃಖ"
ನಮ್ಮ ಆಸೆ ಕನಸುಗಳು ನಮ್ಮಲ್ಲಿ ನಾವಾಗಿಯೇ ಕಂಡುಕೊಳ್ಳುವುದೇ "ಸುಖ"
ಕೈ ತುತ್ತನ್ನ ಬಾಯಿಗಿಡುವವರು ತುಂಬ ಜನ ಸಿಗ್ತಾರೆ
ಅದನು ನುಂಗುವ ಪ್ರಯತ್ನ ನಮ್ಮದಾಗಿರದ್ದರೆ
ನಷ್ಟ ನಮಗೆ ಹೊರತು ಬೇರೆಯವರಿಗಲ್ಲ...-
ದುಖಃ ದುಮ್ಮಾನಗಳು
ನಮ್ಮನ್ನು ಆಪೋಶನ
ತೆಗೆದುಕೊಂಡಾಗ
ಮಿದುಳು ಹೊಸದೊಂದು
ದಾರಿಯಲ್ಲಿ ನಡೆಸುವುದು
ಆ ದಾರಿ ರಹದಾರಿ
ಆಗಿರದೇ ಸುಗಮ
ಸಂಚಾರದ್ದಾಗಿರಲಿ..!-