QUOTES ON #ದೀಪಾವಳಿ_ದೀಪದಿಂದ_ಬಂದ_ಮಾತು

#ದೀಪಾವಳಿ_ದೀಪದಿಂದ_ಬಂದ_ಮಾತು quotes

Trending | Latest
27 OCT 2019 AT 22:28

ಒಂದಿದ್ದ ದೀಪ ಹಲವು ದೀಪಗಳ ಬೆಳಗುತಲಿ...,
ಪಸರಿಸುವ ಪ್ರಭೆಯಿಂದ ಬಂದ ಈ ಮಾತು :

ಒಮ್ಮೆ ಮೊಗದೊಳು ನಗುವಿಡು ಸಾಕು...,
ತಿಳಿಯುವೆ ನಿನ್ನಿಂದ ನಗುವ ಅದೆಷ್ಟೋ ಹೃದಯಗಳಿವೆಯೆಂದು...

ಒಮ್ಮೆ 'ಪ್ರಕೃತಿ'ಯ ನಿನ್ನ ಮನೆಯೆಂದು ನೋಡು...,
ಮತ್ತೆಂದೂ ಎಸೆಯಲಾರೆ ಕಸವನ್ನ ತಂದು!...

ಒಮ್ಮೆ ನಿಜವನ್ನ ಒಪ್ಪಿಬಿಡು ನೀನು...,
ಎಂದೂ ಸುಳ್ಳಾಡಲಾರೆ ನಿಜದ ಗೆಲುವಿದೆಯೆಂದು...

ಒಮ್ಮೆ ದಾನಿಯಾಗಿ ಬಿಡು ನೀನು...,
ಜಿಪುಣ ಬರಲಾರ ನಿನ್ನ ಮುಂದೆ-ಹಿಂದೆ ಎಂದೆಂದೂ...

ಒಮ್ಮೆ ಕಣ್ ಮುಚ್ಚಿ ಈ ವಿಶಾಲ ವಿಶ್ವವ ಅನುಭವಿಸಿಬಿಡು ನೀನು...,
ಅರಿವಾಗುವುದು ಎಲ್ಲದಕ್ಕೂ ಮೀರಿದ ಒಂದು ಶಕ್ತಿ ಈ ಜಗದೊಳಿರುವುದೆಂದು...

~ಸುವರ್ಣಾ ಗೌಡ

-


3 NOV 2021 AT 11:40

ದೀಪಂ ಜ್ಯೋತಿ ಪರಬ್ರಹ್ಮ/
ದೀಪಂ ಸರ್ವ ತಮೋಪಹಂ/
ದೀಪೇನ ಸಾಧ್ಯತೆ ಸರ್ವಂ/
ಮಮ ಶತ್ರು ವಿನಾಶಾಯ//
ಜ್ಞಾನದ ಬೆಳಕು ಮನಸ್ಸನ್ನು
ಬೆಳಗಲಿ,ಹಣತೆಯ ಬೆಳಕು
ಮನೆಯನ್ನು ಬೆಳಗಲಿ.
ದೀಪಾವಳಿ ಹಬ್ಬದ ಶುಭಾಶಯಗಳು..!

-


16 NOV 2020 AT 10:14

ನಿಮ್ಮ ನಗುವಿಗೊಂದು ದೀಪ
ದುಖ ಆರಿಸಲೊಂದು ದೀಪ
ಸುಖದ ಬೆಳಕಿಗೊಂದು ದೀಪ
ಸಾಧನೆಯ ಸವಿಗೊಂದು ದೀಪ
ಭವಿಷ್ಯದ ಭರವಸೆಗೊಂದು ದೀಪ
ನಿಮ್ಮ ನಂಬಿದವರಿಗೊಂದು ದೀಪ
ನಿಮ್ಮ ಕೈ ಹಿಡಿದವರಿಗೊಂದು ದೀಪ
ಭರವಸೆಯ ಎಣ್ಣೆಯಲ್ಲಿ ಬದುಕಿನ
ಕತ್ತಲೆಯು ಕರಗಿಹೋಗಲಿ
ನಗುವು ನಿಮ್ಮೆದೆ ತುಂಬಲಿ
ನಿಮ್ಮ ಬಾಳಿನಲ್ಲಿ ನೂರು ದಾಟಿ
ಸಾವಿರ ದೀಪಾವಳಿಗಳಾಗಲಿ
ದೀಪಗಳೇ ನಿಮ್ಮ ಬದುಕಾಗಲಿ
ದೀಪಗಳಿಂದಲೇ ಬದುಕು ಹಸನಾಗಲಿ..!!

-



ಕುಲದ ಕಲೆಯಿಲ್ಲದ
ಜ್ಯೋತಿಯ ಕಿರಣಗಳಲ್ಲಿ,

ಮನುಜನ ಕುಲವೂ!
ಬೇದಬಾವವಿಲ್ಲದೆ ಬಾಳಲಿ..!

-


15 NOV 2020 AT 13:10

ಎಲ್ಲ YQ ಬಳಗಕ್ಕೆ ತಾಯಿ ಮಹಾಲಕ್ಷ್ಮಿ ದೇವಿಯು ಆಯು ಆರೋಗ್ಯ,ಸಂಪತ್ತು,ಸಮೃದ್ಧಿ, ನೆಮ್ಮದಿ,
ಸುಖ ಶಾಂತಿಯನ್ನು ಕರುಣಿಸಿ ಎಲ್ಲರ ಬಾಳಿನಲ್ಲಿ
ಬೆಳಕು ಚೆಲ್ಲಲೆಂದು ಆಶಿಸುತ್ತಾ ಎಲ್ಲರಿಗೂ
ದೀಪಾವಳಿ ಹಬ್ಬದ ಶುಭಾಶಯಗಳು...

-


14 NOV 2020 AT 7:14

ಪ್ರತಿ ರಾತ್ರಿಗಳ ಕತ್ತಲೆಗೆ ನಾಳೆ ಎಂಬ ಬೆಳಕಿರಲಿ ಆ ಬೆಳಕಿನಲ್ಲಿ ಎಲ್ಲರ ಬಾಳು ನಗುತ ಸದಾ ಬೆಳಗುತ್ತಿರಲಿ.
ಶುಭೋದಯ🤗

-


28 OCT 2019 AT 21:01

ಕತ್ತಲನ್ನ ಅಳಿಸಿ ಬೆಳಕಿನಡೆಗೆ
ಕಷ್ಟಗಳನ್ನ ಮರೆತು ಸಂತಸದೆಡೆಗೆ
ದ್ವೇಷ ಬಿಟ್ಟು ಸ್ನೇಹ-ಸಂಬಂಧಗಳೆಡೆಗೆ
ದೀಪದ ಬೆಳಕಿನ ಆಶಾಕಿರಣಗಳನ್ನ ಎಲ್ಲಡೆ ಬಿತ್ತರಿಸುತ್ತ
ಸೈನಿಕರಿಗೋಸ್ಕರ ಹೃದಯ ಪೂರ್ವಕವಾಗಿ ಪ್ರಾರ್ಥಿಸುತ್ತ
ಒಂದೊಳ್ಳೆಯ ಸಂಕಲ್ಪ ಮಾಡುತ್ತಾ ಅನುಸರಿಸುತ್ತ ಸಾಗೋಣ.

-


4 NOV 2021 AT 11:25

ಒಳ್ಳೆಯ ಗುಣಗಳ ಹಣತೆಯ ತಂದು
ಸ್ನೇಹದ ಬಂಧದ ಬತ್ತಿಯ ಬೆಸೆದು
ಪ್ರೇಮದ ಭಾವದ ಎಣ್ಣೆಯ ತುಂಬಿ
ಪ್ರೀತಿಯ ಬೆಳಕನು ಎಲ್ಲೆಡೆ ಚೆಲ್ಲುವಾ... 💫

-