ಹುಬ್ಬಿಣಲೇ ಹೊಂದಿರುವೆ ಕಾಮನಬಿಲನ
ಕಂಗಳ ಹೊಳಪಲೆ ಹೊಂದಿರುವೆ ಸಾವಿರ ನಕ್ಷತ್ರದ ಮಿನುಗುನ
ಆ ಮುದ್ದಾದ ನಗುವಲೆ ಹೊಂದಿರುವೆ ಚಂದದ ಹುವಗಳ
ಜೊತೆಯಲೇ ದಾಳಿಂಬೆ ಹಣ್ಣನ
ಕಾಣಲು ಸಾಧ್ಯವೇ ಮತ್ತೊಮೆ ಇಂಥ ಹೆಣ್ಣೊಂದ ನಾ??
-
ನನ್ನೆದೆಯ ಸಾಮ್ರಾಜ್ಯದಲ್ಲಿ ಪ್ರೀತಿಯೊಂದೆ ಕಾನೂನು
ಆ ಸಾಮ್ರಾಜ್ಯದ ಪ್ರತಿ ತೀರ್ಪು ನೀಡಬೇಕಾದವಳು ನೀನು
ಕೊಡುವ ಪ್ರತಿ ತೀರ್ಪುಗೂ ಬದ್ಧನಾದವನು ನಾನು
ಆಳು ಬಾ ಹುಡುಗಿ ನೀ ನನ್ನ ಹೃದಯವ ರಾಣಿಯಾಗಿ ಇಲ್ಲ ನನ್ನ ಒಡತಿಯಾಗಿ 😍
-
ಗುಲಾಬಿಗು ನಿನಗೂ ಏನೋ ಸಂಬಂಸವಿದೆ ಹುಡುಗಿ
ದುಂಬಿಯಂತ ನನ್ನೀ ಮನ ನಿನ್ನ ಹಿಂದಿಂದೇ ಬರುತಿದೆ ತಿರು ತಿರುಗಿ
ಆ ಗುಲಾಬಿಯಂತೆ ಮೃದು ಆ ನಿನ್ನ ಹೃದಯ
ಅದನ ಆಳೋ ಆಸೆ ತುಂಬಿದೆ ನನ್ನೆದೆಯ
ಹೂವು ನೀಡಿ ಹೇಳುವೆ ಚೆಲುವೆ
ಗುಲಾಬಿಯ ಸುತ್ತಲಿನ ಮುಳ್ಳಾಗಿ ನಿನ್ನ ಕಾಯುವೆ ಪ್ರತಿ ದಿನವೇ ♥️
-
If a Person is Smiling Even in His Hardest Times
Then that Signifies the Monster Inside Him is not Ready to Accept the Defeat That the Battleground is Offering
-
ಮಾದಕತೆ ಬರಿ ಮದ್ಯಪಾನದಲಿಲ್ಲ ನಿನ್ನ ಕಂಗಳ ಒಮ್ಮೆ ನೋಡು
ಅದರ ಪ್ರೇಮ ಪಾನದಲ್ಲಿ ಮಿಂದು ತೇಲಾಡದ ಹೃದಯವಿಲ್ಲ
-
ಜೀವನದಲ್ಲಿ ತುಂಬ ಪ್ರೀತಿಸಿದವರು ಬರಿ ನೆನಪಾಗಿ ಉಳಿಯುವುದು ಸಹಜ
ಆದರೇ ಪ್ರೀತಿ ನಿಜ ಆಗಿದ್ದಾಗ ಅವರ ಪ್ರತಿ ನೆನಪು ಕೂಡ ಮತ್ತೆ ಮತ್ತೆ ನೆನಪಾಗುವುದು ಕೂಡ ನಿಜ
-
ಸುಡುವ ಸೂರ್ಯನು ಬೆಳಕು ಸುರಿವನು
ಚುಚ್ಚುವ ಮುಳ್ಳು ಕೂಡ ಹೂವ ಕಾಯುವುದು
ಪ್ರತಿ ವ್ಯಕ್ತಿಯಲು ಒಳ್ಳೆತನ ಇರುವುದು
ಗುರುತಿಸಿ ನಡೆದರೆ ಗೆಳೆತನ ಬೆಳೆಯುವುದು
-
ಸಂಜೆ ಹೀಗೆ ಜಾರುತಿದೆ...
ನಿನ್ನ ಕಣ್ಣ ನೋಟ ಸಹಿಸೆದೆಲೆ
ನಿನ್ನ ಅಂದವ ಎದುರಿಸಲು ಆಗದೆಲೆ
ನಿನ್ನ ನಗುವ ಕಾಂತಿಗೆ ಅಸೂಯೆ ಪಡುತ್ತಲೇ
ನಿನ್ನ ಚೆಲುವ ಎದುರಿಸೋ ಧೈರ್ಯ ಇಲ್ಲದೆಲೆ
ಈ ಸಂಜೆ ಹೀಗೆ ಜಾರುತಿದೆ ತನ್ನ ಸೋಲನು ಒಪ್ಪಿಕೊಳ್ಳುತ್ತಲೆ ♥️
-
ಜಗವು ಏಕೋ ನಿಂತಿತಲ್ಲ
ನಿನ್ನ ನೆನಪು ಆಗುವಾಗಲೆಲ್ಲ
ಹೃದಯ ಮಿಡಿತ ಏರುಪೇರಾಯಿತಲ್ಲ
ನಿನ್ನ ನಗುವ ಮನವು ಎದುರಿಸುವಾಗಲೆಲ್ಲ...
-
ಪ್ರತಿದಿನವೂ ಮೈಮರೆತು ನಾ ನಿದ್ರೆಗೆ ಜಾರಲು...
ಅಂದದ ಕಾಂತಿಯೊಂದು ನನ್ನ ಕನಸಲಿ ಮಿನುಗುವುದು...
ಸುಂದರ ಚಂದವೊಂದು ನನ್ನ ನಿದ್ದೆಯಲು ಕಾಡುವುದು...
ನೊರೆಂಟು ಬಾರಿ ಯತ್ನಿಸಿದರು ಕಿರು ಪರಿಚಯವು ಸಿಗದಿಹುದು...
ಕನಸಲೇ ಮನಸನು ಮತ್ತೆ ಮತ್ತೆ ಕೊರಗಿಸುವುದು...
ಹವಣಿಸಿದೆ ಈ ಹೃದಯ ಆ ಮುಖಪುಟವ ಮನತುಂಬಿಕೊಳ್ಳಲು..
ನನಗಿಂದು ಸಿಗುವುದೇ ಈ ಅಪ್ಸರೆಯ ಮೊಗ ಕಾಣೋ ಸಿಹಿ ಅವಕಾಶವದು.. ♥️-