Naveenkumar Idiger   (#ನವೀನಯಾನ...✍️)
40 Followers · 17 Following

read more
Joined 14 March 2019


read more
Joined 14 March 2019
6 MAY AT 20:25

ಅವಳಿಗಾಗಿ ತನ್ನ ಅಮೂಲ್ಯ
ಸಮಯದ ಬುತ್ತಿಯನೇ ಎತ್ತಿಟ್ಟಿದ್ದನು,
ಆದರೆ ಅವನಿಗೆ ದೊರೆತಿದ್ದು ಮಾತ್ರ
ಬೆರಳೆಣಿಕೆಯ ಕ್ಷಣಗಳ ಅಂಕೆ...!!!

-


5 MAY AT 13:02

ಅವಳ ಪ್ರೀತಿಗೆ
ಭಾವನೆಗಳೆಂಬ ಸುಂಕವ
ಕಟ್ಟುತಿರುವ ತೆರಿಗೆದಾರ ನಾನು...!!

-


20 APR AT 7:54

ಮೌನದ ಜೊತೆ ಮಂದಹಾಸವ
ರಿಯಾಯಿತಿಯಾಗಿ ನೀಡಿದಳು
ಅವಳು..!!

-


20 APR AT 7:40

ವಿಮರ್ಶಿಸಲು ಸಾಧ್ಯವೇ ಇಲ್ಲದ ಕಾದಂಬರಿ
ಅವಳು..!!

-


20 APR AT 7:33

ಪ್ರತೀ ಮುಂಜಾವಿನಲೂ
ನನ್ನವಳ ಮುದ್ದು ಮೊಗವ
ಕಣ್ತುಂಬ ನೋಡುತ್ತ
ನವಿರಾದ ಕಣ್ ಗಳಿಗೆ ಚುಂಬಿಸಿ
ಪ್ರೀತಿಯ ಅಪ್ಪುಗೆಯನಿತ್ತು
ನನ್ನ ತೋಳ ತೆಕ್ಕೆಯಲ್ಲಿ ಬಚ್ಚಿಡಲು
ತುಟಿಯಂಚಿನ ಅವಳ ಮಂದಹಾಸವ
ಅನುಭಾವಿಸಲು ಕಾಯುತಿರುವೆ..!!!

-


14 APR AT 17:29

ಅವಳ ತುಟಿಗಳ ಅಂಚಿನ ನಗು
ನನ್ನ ಮನದ ಅದೆಷ್ಟೋ
ಭಾವನೆಗಳ ಸಾಗರ ರೂಪದಲಿ
ಭೋರ್ಗರೆಯುವುದು..!
ಅವಳು ನೀಡುವ ಅಲ್ಪ ಸಮಯವೂ
ಬದುಕಿನ ಅತ್ಯಮೂಲ್ಯ ಕ್ಷಣಗಳಂತೆ ಭಾಸ
ಊಹೆಗೂ ಸಿಗದ ಅಂದ ನಿನ್ನದು
ಪದಗಳಿಗೆ ನಿಲುಕದ ವ್ಯಕ್ತಿತ್ವ ನಿನ್ನದು..!!

-


12 APR AT 17:19

ನಮ್ಮವರಿಗಾಗಿ ಮೀಸಲಿಟ್ಟಿರುವ
ಸಮಯಕೆ ಎಂದಿಗೂ ಬದ್ಧರಾಗಿರಬೇಕು..!!

-


1 APR AT 18:41

Money Can Buy anything
But not
Love and respect..!!

-


30 MAR AT 7:24

ನವ ಸಂವತ್ಸರದಿ
ತೆರೆಯಲಿ ಸಂಭ್ರಮದ ಹಾದಿ
ನೀಡಲಿ ಧೃಢ ನಂಬಿಕೆಗಳ ಬುನಾದಿ
ಹೊಸ ವರುಷ ಹಳೆಯೆ ನೋವ ಮರೆಸಿ
ಆಗಲಿ ಹೊಸ ಆಶಯಗಳಿಗೆ ನಾಂದಿ
ವೈಮನಸುಗಳ ಸರಿಪಡಿಸಿ
ವೈಭವದ ಬದುಕಿನೊಟ್ಟಿಗೆ
ಕರುಣಿಸಲಿ ದೇವ ಎಲ್ಲರಿಗೂ ನೆಮ್ಮದಿ
ಎಲ್ಲರಿಗೂ ಶುಭ ತರಲಿ
ಚಾಂದ್ರಮಾನ ಯುಗಾದಿ
🌳 "ಯುಗಾದಿ ಹಬ್ಬದ ಶುಭಾಶಯಗಳು" 🌳

-


27 MAR AT 19:14

ಮುಂಜಾವಿನ ಇಬ್ಬನಿಯಂತೆ
ತಬ್ಬಿಕೊಂಡವಳು
ಮುಸ್ಸಂಜೆಯ ಸಂಪಾದ
ಗಾಳಿಯಂತೆ ಆವರಿಸಿಕೊಂಡವಳು
ಇರುಳ ಮುಗಿಲಲಿ ಕಾಣುವ
ಬೆಳ್ಳಿ ಚುಕ್ಕಿಯಾಗಿಹಳು..!!
*ಅವಳು*

-


Fetching Naveenkumar Idiger Quotes