ನಾಳೆ ಆಯುಧ ಪೂಜೆಗೆ mobileನ್ನು ಇಡಬೇಕಾ...
🙄😳😰😜😅-
ಬನ್ನಿ ಬಂಗಾರವಾಗಲಿ
ಸ್ನೇಹ ಚಿರವಾಗಲಿ
ದ್ವೇಷ ಮರೆಯಾಗಲಿ
ಬಾಳು ಹಸನಾಗಲಿ
ಪ್ರೀತಿ ಪಸರಿಸಲಿ
ಕಣ್ಣೀರು ಕೊನೆಯಾಗಲಿ
ಕನ್ನಡ ಅಮರವಾಗಲಿ
ಕರುನಾಡ ನಾಡ ಹಬ್ಬ
ದಸರಾ ಹಬ್ಬದ ಶುಭಾಶಯ
🌿🌿☘️☘️🌿🌿-
ತಾಯಿಯೇ ಮೊದಲ ದೇವತೆ
ಸಂಸಾರದ ಜವಾಬ್ದಾರಿಯನ್ನ ಹೊರುವ ವನಿತೆ
ಸದಾ ಪ್ರೀತಿ ತುಂಬಿರುವ ಮಮತೆ
ತನ್ನೊಡಲ ಸುಟ್ಟು ಬೆಳಕನ್ನು ನೀಡುವ ಹಣತೆ !!-
ಬೆಲೆಕಟ್ಟಲಾಗದ್ದಷ್ಟೇ ಅಲ್ಲ
ಅಳೆಯಲು ಸಹ ಸಾಧ್ಯವಿಲ್ಲ
ನಮ್ಮ ಹಡೆದವ್ವರ ಬಗ್ಗೆ ಬಿಡ
ನಾ ಜನಿಸಿದಂದಿನ್ನಿಂದ ಹೊತ್ತು
ಬ್ರಹ್ಮಾಂಡವನ್ನೆ ಸುತ್ತುತ್ತಿಹಳು
ನೋಡವಳ ಪ್ರೀತಿ ಮಮತೆಯ .
ಭೂದೇವಿಗಿಂತ ತಾಯಿ ಯಾರೊ
ನಾ ಕಾಣೆ ಇನ್ನೂ !-
ನಿಮ್ಮೆಲ್ಲಾ ಕಾರ್ಯಗಳಿಗೂ
ಕನಸುಗಳಿಗೂ ವಿಜಯವಿರಲಿ,
ಹಸಿರೆಲೆಯ ಬಂಗಾರದಂತೆ
ಹಸಿರಾಗಲಿ ನಿಮ್ಮ ಬಾಳು,
ನಿಮ್ಮ ಜೀವನದಲ್ಲಿ ಪ್ರತಿದಿನವೂ
ವಿಜಯದಶಮಿ ಆಗಲಿ..-
ಸದಾ ದುರ್ಗುಣವಿರದಂತೆ
ಎಚ್ಚರಿಸು ಮನದಿ
ಆಮಿಷ ಬೆರೆಯದಂತೆ
ಅವತರಿಸು ನಮ್ಮಲ್ಲಿ
ಧರ್ಮಪಾಲಕಿಯಂತೆ
ಮುನ್ನಡೆಸು ನಮ್ಮನು
ಸನ್ಮಾರ್ಗದಿ ನಡೆಯುವಂತೆ
-
ಇವತ್ತೆಂಥದೋ ಆಯುಧಪೂಜೆಯಂತೆ,
ನಿನ್ನ ನಗುವನ್ನು ಚೆನ್ನಾಗಿ ಪೂಜಿಸು,
ಆ ಒಂದು ನಿನ್ನ ನಗುವಿನ
ಆಯುಧದಿಂದ
ಪ್ರಾಣದೊಡನೇ ಸತ್ತವರಿನ್ನೆಷ್ಟೋ.
💔💔-
ಪ್ರೀತಿಯ ಒರತೆ
ಎಣಿಸಲಾಗದ ಕಾಳಜಿ ಕಂತೆ
ಬತ್ತದಿರುವ ಪ್ರೇಮದ ಹಣತೆ
ಶಾಶ್ವತ ಉಳಿವ ಸಂಪತ್ ಖಾತೆ
ಹೋಲಿಸಲಾಗದ ಪರಿಪೂರ್ಣತೆ
ಕರುಣಾಸಾಗರಿ ನೀ ಜಗನ್ಮಾತೆ
-
ಕೆಟ್ಟ ದೃಷ್ಟಿಯಿಂದ ನೋಡುವವರ ಕಣ್ಣಿನಿಂದ, ಸೋಗಿನ ಮುಖವಾಡ ಹಾಕಿಕೊಂಡು ನಾಟಕೀಯವಾಗಿ ಮಾತನಾಡುವ ನಾಲಗೆಯಿಂದ, ನಮ್ಮ ಹಿತವರು ಅಂತಿರುವ ಹಿತಶತ್ರುಗಳಿಂದ ರಕ್ಷಿಸು ನಮ್ಮನು.
-