ಹಣ ಗಳಿಸಿದರೆ ಮಾತ್ರ ಸಂಪಾದನೆಯಲ್ಲ; ಗೌರವ ಹಾಗೂ ಪ್ರೀತಿ ಕೂಡ ಸಂಪಾದನೆಯ ಮತ್ತೊಂದು ರೂಪ....!
-
ಬದುಕಿನಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಹಂತ ಹಂತವಾಗಿ ಏರುವಾಗ ಸಹನೆ ಹಾಗೂ ಮೌನವೆಂಬ ಆಯುಧವನ್ನು ಉಪಯೋಗಿಸಿದರೆ ವೈಯಕ್ತಿಕ ಮಾತ್ರವಲ್ಲದೆ ಖಾಸಗಿ ಜೀವನದಲ್ಲೂ ಗೆಲುವು ನಮ್ಮದಾಗುತ್ತದೆ.
-
ತುಳಿಯುವವರ ಮೆಟ್ಟಿ ನಿಲ್ಲಬೇಕು
ಅಪಹಾಸ್ಯ ಮಾಡುವವರ ಸೊಕ್ಕು ಅಡಗಿಸಬೇಕು; ಅಹಂಕಾರದಿ ಮೆರೆದವರು ನೆಲಕಚ್ಚಬೇಕು.ನಿನ್ನೆ ಮತ್ಯಾರಿಗೋ ಮಾಡಿದ ಪಾಪ ಇಂದು ಕರ್ಮಫಲವಾಗಿ ನಿನ್ನನೇ ಕಬಳಿಸುವುದೆಂದು ತಿಳಿಸಬೇಕು.
ಬದಲಾಗಬೇಕು ಹೆಣ್ಣೇ ನೀನು ಬದಲಾಗಬೇಕು! ನಿನ್ನ ಕನಸನ್ನು ನೇರವೇರಿಸಲು ನೀನು ಬದಲಾಗಬೇಕು!-
ಯೋಗ್ಯತೆಯಿಲ್ಲದವರನ್ನು ನನ್ನವರು ಎಂದುಕೊಂಡದ್ದೇ ತಪ್ಪಾಯಿತು. ವ್ಯಕ್ತಿ ಆಯ್ಕೆಯಲ್ಲಿ ನಾನು ಅಯೋಗ್ಯ ಎಂದು ಅವರ ಯೋಗ್ಯತೆ ತೋರಿಸಿಕೊಟ್ಟಿತು!
-
೧. ಹೆಂಡತಿಯಾಗಲಿ, ತಾಯಿಯಾಗಲಿ
ನಿಮಗಾಗಿ ಒಂದು ಜೀವ ಕಾಯುತ್ತಿರುತ್ತೆ ಅನ್ನುವುದು ನೆನಪಿಡಿ.
೨. ಹೆಂಡತಿ ಮಕ್ಕಳ ಸಂತೋಷಕ್ಕಾಗಿ ಜೀವನವನ್ನು ಮುಡಿಪಾಗಿಡಬೇಡಿ. ನಿಮಗೂ ಇರುವುದು ಒಂದೇ ಬದುಕು, ಅದನ್ನು ಮನೆಯವರ ಜೊತೆಯಲ್ಲಿ ಅನುಭವಿಸಿ.
೩. ಮಕ್ಕಳ ಆಸೆಗಾಗಿ ಸಾಲಸೋಲ ಮಾಡಿ
ಅವರು ಕೇಳಿದ್ದನ್ನು ತಂದು ಕೊಡುವ ಬದಲು ಇದ್ದದ್ದರಲ್ಲಿ ಸಂತೋಷಪಡುವ ಗುಣವನ್ನು ಕಲಿಸಿ.
-
ಅಣ್ಣ ಎಂದರೆ ಗೌರವ
ಮನದಿ ಒಲವ
ತುಂಬಿದ ಭಾವ;
ನನ್ನೆಲ್ಲಾ ನೋವ
ಮರೆಸುವ ಜೀವ
ಅವನು...
Jyothi Baliga
-
ಕಿವುಡ ಮೂಗ ಕುರುಡರಾಗಿ ಸಂಬಂಧ ಉಳಿಸಿಕೊಳ್ಳುವಂತಾಗದಿರಲಿ
ದ್ವೇಷ ಸಾಧನೆಯೇ ಜೀವನದ ಗುರಿ
ಎಂಬುದನ್ನು ಮರೆಯುವಂತಾಗಲಿ
ಮಾನವ ಜನ್ಮ ಇರುವುದೊಂದೇ
ಸದಾ ನೆನಪಿನಲ್ಲಿರಲಿ
ನಗು ನಗುತಾ ಬದುಕುವ
ಬಾಳು ಬಂಗಾರವಾಗಲಿ
-
ಪ್ರೀತಿಸುವ ಮನಸ್ಸು
ಸಿಗದೇ ಬದುಕಬಹುದು
ಜೀವನವೆಂಬ ಪಯಣದಲಿ
ಸ್ನೇಹದಿಂದ ಕಾಣುವ ಕಣ್ಣುಗಳಿರದಿದ್ದರೆ
ಜೀವನ ಅಪೂರ್ಣ ನೆನಪಿರಲಿ
-