ಜ್ಞಾನದ ಬಿಡಾರ
-
ಪುಸ್ತಕದಲ್ಲಿ ಅಡಗಿದ
ಅದ್ಬುತವಾದ ನಿಧಿ,
ಅದನ್ನು ನೀ ಅರಗಿಸಿಕೊ
ನಿನ್ನಿಂದ ಯಾರು
ಕದಿಯಾಲಾರದ ನಿಧಿ ಸಂಗ್ರಹಿಸುವ
ಶಕ್ತಿ ಪರ್ವತವಾಗುವೆ.-
ಪ್ರತಿ ಪುಸ್ತಕದ ಮೊದಲ ಪುಟ ನಿನ್ನದೇ ಪರಿವಿಡಿ.
ಕಡೆಯ ಪುಟದ ಅಕ್ಷರಗಳು ನಾನಾದರೂ...
ಮಧ್ಯದ ಪುಟವೆಲ್ಲವೂ ಖಾಲಿ.
ಅಂತರವಿರಿಸಿಹ ಅಂತರಗಂಗೆ ನೀ.
ಗ್ರಂಥಾಲಯವೇ ನನ್ನ ಆಲಯ.
ಕೀಲಿಕೈ ಬೀಗದ ಕೈಯಲ್ಲಿಯೇ ಇದೆ.
ಹುಡುಕುವ ನೆಪ ಹೂಡದಿರು.
-
ನೀ ಮರೆಯಾದ ಕ್ಷಣದಿಂದ
ನಾ ಕೀಲಿ ಕೈ ಹುಡುಕುತಿರುವೆ
ನಿನ್ನ ಬಳಿಯೇ ಇರಬೇಕಲ್ಲವೇ?
ನೆನಪುಗಳ ಗ್ರಂಥಾಲಯ
ಬಾಗಿಲು ತೆರೆಯದು ನೀನಿಲ್ಲದೇ
ನೆನಪುಗಳ ಭಂಡಾರ ತೆರೆಯದು
ನೀ ಬಳಿಬಾರದೆ ನನ್ನೊಲವೇ!-
ಸರಿದ ಸವಿ ಬದುಕಿನ ಪುಸ್ತಕದ
ಹಿನ್ನುಡಿಗೆ ಮರುಗಿ ಕಣ್ಣೀರಾಗಿ,
ಮರಳಿ ಮತ್ತೊಂದನೆತ್ತಲತ್ತ ಸಾಗಿದರೆ,
ಗ್ರಂಥಾಲಯವೇ ಮುಚ್ಚಲಾಗಿತ್ತು
ಮತ್ತೆಂದೂ ತೆರೆಯದ ಹಾಗೆ.
ಮರೆಯಲಾಗದ ನೋವುಗಳೇ ಶಾಶ್ವತ.-
ಮೊನ್ನೆ ನನ್ನ ,
ಹೃದಯದ ಗ್ರಂಥಾಲಯದಲ್ಲಿ
ಕಳುವಾಯಿತು ಅವಳದೇ
ಪುಟ್ಟ ಪ್ರೇಮ ಕವನಗಳ ಸಂಕಲನ....-
ನಿನ್ನೊಲವೆಂಬ ಗ್ರಂಥ
ಕವನ ಕಥನಗಳು
ನನ್ನ ನಿನ್ನ ಆತ್ಮ ಚರಿತ್ರೆ
ನಮ್ಮೊಲವ ಮಹಾಕಾವ್ಯ
ಕಾದಂಬರಿಗಳೆಲ್ಲಾ
ಸ್ಥಬ್ಧ ನಿಶ್ಯಬ್ಧ ಗ್ರಂಥಾಲಯದೊಳು
ಮೌನವಾಗಿ ಕುಳಿತಿವೆ!
ಬೀಗದ ಕೈ ನಿನ್ನೊಡನೆ
ಕಳೆದು ಹೋಗಿದೆ!!!-
ಮೊನ್ನೆ ಕಾಣೆಯಾಗಿದ್ದ
ನಾ ಬರೆದ ಪುಟ್ಟ ಪ್ರೇಮ ಕವನಸಂಕಲನ
ನನ್ನ ಹೃದಯದ
ಗ್ರಂಥಾಲಯದಲೇ ಕಾಣದೆ
ಅವಿತುಕೊಂಡಿತ್ತು...-