ವಿಜಯಪ್ರಕಾಶ್ ಕಣಕ್ಕೂರು   (© ವಿಜಯ್💫)
427 Followers · 146 Following

read more
Joined 9 December 2020


read more
Joined 9 December 2020

ಗಝಲ್
ಮನಸು ಮುದುಡಿಸಿ ಮೌನವಾಗದಿರು ಜತನದಲಿ ರೂಪಿಸು ಬದುಕಿನ ವೇಸರ
ಅರಿಗಳಿಗೂ ಅಚ್ಚರಿಯಾಗಲಿ ನೋಡುತ ನೋವಿನ ನಡುವಣ ನಗುವಿನ ಬಿತ್ತರ

ಕೊರತೆಗಳಷ್ಟೇ ಕಾಣಿಸುವುದು ಜಗಕೆ ಬತ್ತದ ಜ್ಞಾನದ ಒರತೆಗಿಲ್ಲ ಮನ್ನಣೆಯು
ಆಡುವವರನು ಅವಗಣಿಸುತ ಮುಂದಡಿಯಿಡುವೆಡೆಗಿರಲಿ ಲಕ್ಷ್ಯವು ನಿರಂತರ

ಲಲಾಟ ಲಿಖಿತದಲೂ ಪಲ್ಲಟವಾಗುವುದು ಶ್ರಮಕೆ ಶ್ರದ್ಧೆಯು ಜೊತೆಯಾಗಲು
ಜೀಕುವ ಜೀವನಕೆ ಆಧರಣೆಯಾಗುವುದು ಯುಕ್ತ ಸಮಯದ ದೃಢ ನಿರ್ಧಾರ

ಕಾಲದ ಜರಡಿಯಲಿ ಹಸನಾಗುವುದು ಹೃದಯದಿ ಬೆಸೆದ ನಂಟಿನ ಪಾವಿತ್ರ್ಯತೆ
ಮನದ ಕಡಲಲಿ ಉಕ್ಕಿದ ನೇಹ ನಯನದಿ ಸೂಸಲು ಬಂಧುತ್ವವಾಗಲಿ ಮಧುರ

ಪರರ ಬಾಳಲಿ ಕಿರು ದೀಪವ ಬೆಳಗಿಸಿ ನೋಡು ಅದೇ ನಿನ್ನ ವಿಜಯಕೆ ಮೆರಗು
ಅಳುವ ಕಣ್ಗಳ ಒರೆಸಿ ನಗುವ ಅಂತರಂಗವದು ಬೆಳೆದು ಬಿಡುವುದು ಬಾನೆತ್ತರ

-



ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ದೊರೆಗಳ ಭದ್ರತೆಯ ಕಡೆಗಿತ್ತು ಆರಕ್ಷಕರ ಚಿತ್ತ;
ಅಭಿಮಾನದ ಅಮಲೇರಿಸಿದ್ದ ಅಮಾಯಕ ಕಾಲ್ತುಳಿತಕ್ಕೆ ಸಿಲುಕಿ ಸತ್ತ.

-



ನನ್ನೊಳಗೆ ಮಿಡಿಯುವ
ಹೃದಯದಲ್ಲೂ ನಿನ್ನ ಉಸಿರಿದೆಯಲ್ಲ.
ನಿನ್ನ ಕಣ್ಣೋಟದ ತಾಪಕೆ
ಬೆಣ್ಣೆಯಂತೆ ಕರಗಿಹೋಗಿರುವೆನಲ್ಲ.
ಇಂತಿರಲು
ನಿನ್ನ ಆರೋಪಕ್ಕೆ ಆಧಾರವೇ ಇಲ್ಲ.

-



ಬೆಟ್ಟದಷ್ಟು ಕನಸುಗಳ ನೇಯುವ
ಬಟ್ಟಲು ಕಂಗಳ ಚೆಲುವೆಯೇ....,
ಪುಟ್ಟ ಹೃದಯದರಮನೆಯಲೆನಗೆ
ಒಂದಿಷ್ಟು ಜಾಗ ನೀಡುವೆಯಾ?

-



ಪುಸ್ತಕ ಪರಿಚಯ

-



ಜುಲ್ ಕಾಫಿಯಾ ಗಝಲ್
ನುಡಿತದ ವಹಣಿಯಲಿ ಉಳಿದಿರಲಿ ಅನುಭಾವದ ಗುರುತು
ನಡೆದ ಸುಪಥಗಳಲಿ ಅಳಿಯದಿರಲಿ ಅಭಿಮಾನದ ಗುರುತು

ಕನಸುಗಳು ಚಿಗುರಿದಾಗ ಬದುಕಿನಲಿ ನವ ವಸಂತೋದಯ
ಛಲವ ಬಿಡದಿಹ ಯತ್ನಗಳಿಗೆ ಒಲಿದಿರಲಿ ಗೌರವದ ಗುರುತು

ನೀಡಿದ ಪದಕಗಳಿಗೆ ಬೆಲೆಯು ಅರ್ಹರಿಗೆ ಆಭರಣವಾಗಲು
ಒಲಿದಿಹ ಅರಿವಿಗೆ ವಾಟಿಸದಿರಲಿ ದುರಭಿಮಾನದ ಗುರುತು

ಹರಿವ ತೊರೆಯಂತೆ ಕಲಿಕೆಯು ನಿಲ್ಲದು ಕಾಲವಾಗುವ ತನಕ
ಕಾಲವು ಸರಿದಂತೆ ಮಸುಕಾಗದಿರಲಿ ಪರಮಾರ್ಥದ ಗುರುತು

ವ್ಯಯಿಸಿದ ಕ್ಷಣಗಳ ಸಾರ್ಥ್ಯಕ್ಯವು ವಿಜಯದ ನಗುವಲಿಹುದು
ವ್ಯಂಜಿಸಿದ ಋತದ ಹದನಕೆ ಮಣಿದಿರಲಿ ಅಳೀಕದ ಗುರುತು

-



ಕೇಳು ನೀನಿಂದು ಮಗುವೇ ಕೂಡಿಡು ನೀನಿದ
ಬಾಳ ಹಾದಿಯಲಿ ಸಿಕ್ಕ ಸವಿ ನುಡಿಗಳನೆಲ್ಲ
ದಾರಿದೀಪವದು ಲೋಕದಲಿ ರೂಢಿಯನರಿತು ಎಲ್ಲರೊಳು ಒಂದಾಗಲು
ತೋಳ್ಬಲದಲೇ ಗೆಲ್ಲಲಾಗದೆಲ್ಲವನಿಲ್ಲಿ
ತಾಳ್ಮೆಯಲಿ ಜಯಿಸು ನೀ ಸಜ್ಜನರ ಪ್ರೀತಿಯನು
ತಾರಕ ನುಡಿಗಳಿರಲಿ ಕೆಚ್ಚೆದೆಯ ನಡೆಯಿರಲಿ ಸತ್ಯಕೆ ಜಯವ ಕೊಡಿಸಲು

-



ಅಕ್ಕರೆಯಿಂದಲಿ ಆದರಿಸಿದನು ಅಧರದಿಂದ
ಅವಳಂತರಂಗದಿ ಅಲೆಯೆದ್ದಿತು ಅದರಿಂದ

-



ಗಝಲ್
ಅಕ್ಕರೆಯ ಅಕ್ಕರದಿಂದ ಅನಾಗತವನು ರೂಪಿಸಿದವಳು ಅವಳು
ಅರಿವಿನ ಅಮೃತದಿಂದ ಮರುಜನ್ಮವನು ನೀಡಿದವಳು ಅವಳು

ಬರೆದ ಮೊದಲಕ್ಷರದ ನಂಟು ನಡೆಸುತಿದೆ ಜ್ಞಾನದಾಗರದೆಡೆಗೆ
ಸ್ಫುರಿಸುವ ಭಾವಗಳಲಿ ಸೋಜಿಗವನು ತುಂಬಿದವಳು ಅವಳು

ಅಧಿಗಮವು ಉತ್ಕರ್ಷಿಸುತಿರೆ ಅಳಿಯಿತು ಅವಿದ್ಯೆಯ ತಮವು
ಹೊಳಪಿರದ ಕಪ್ಪುಬಿಳುಪಿನ ಬಾಳಿಗೆ ಬಣ್ಣ ಬಳಿದವಳು ಅವಳು

ವಿಹರಿಸೆ ಭಾವಗಳ ಪಯೋನಿಧಿಯಲಿ ಉಕ್ಕುವುದು ತೋಷವು
ಸ್ತುತಿಸೆ ತಾನೊಲಿದು ಮತಿಯನು ಹರಿತಗೊಳಿಸಿದವಳು ಅವಳು

ತೀರಿಸಲೆಂತು ವಿಜಯಪಥದಲಿ ಮೆರೆಸಿದ ಕನ್ನಡಮ್ಮನ ಋಣವ
ನಡೆ ನುಡಿಗಳನು ಕಲಿಸಿ ಉಸಿರಲಿ ಬೆರೆತುಹೋದವಳು ಅವಳು

-



ಕಥೆ: ಶಿಶಿರದಲ್ಲಿ ವಸಂತ - ಭಾಗ ೨

-


Fetching ವಿಜಯಪ್ರಕಾಶ್ ಕಣಕ್ಕೂರು Quotes