ಒಂಥರಾ ಗೋವಿನ ರೀತಿ..
ಅಂತರದಲ್ಲಿಟ್ಟರೆ ಕಾಮಧೇನು.....
ಸಲಿಗೆಯ ಕೊಟ್ಟರೆ ಮಹಿಷಾಸುರ.....!!!??-
ಶಾಲೆ ಸಂಸ್ಕಾರ
ಕಲಿಸುವ ರೂಪಕ..
ಗೋವು
ಸಂಸ್ಕೃತಿಯ ಪ್ರತೀಕ..
ಗೋಶಾಲೆ ಸಹಬಾಳ್ವೆ
ಕಲಿಯಲು ಪ್ರೇರಕ..
ಗೋ ಹತ್ಯೆ
ಮನು ಕುಲಕ್ಕೆ ಮಾರಕ..-
ಸುಟ್ರಾನಕ್ಕಿಯ ಕೂಗು
ಅಣುಕಿಸುವಂತಿದೆ ಕೂಗಿ ಹೇಳುವಂತಿದೆ
ಸಾವನ್ನು
ಕೊನೆಯುಸಿರೆಳೆದಿದೆ ,
ಬೀಳ್ಕೊಟ್ಟೆವು ಹಾಲು ಕರೆವ ಹಸುವನ್ನು
ಡ್ರಿಪ್ಪುಗಳನೇರಿಸಲು ಚುಚ್ಚಿದ ಸೂಜಿಗೆ
ಛಿಲ್ಲನೆ ಜಿನುಗಿದ ಕತ್ತಿನ ನೆತ್ತರು.
ನಾನು ಬೀಳಲಿಲ್ಲ ಮತ್ತೆ ತಲೆಸುತ್ತಿ ಈ ಸರತಿ
ನಾಲ್ಕು ಜನ ದನವ ಹಿಡಿದು
ನಿಲಿಸಿದ್ದು, ಕಾರಣ ನೋವಾದರೂ
ಸರಿ ನಾಳೆ ಆರಾಮವಾದೀತೆಂದು.
ಕೊನೆಗೆ,
ಅಸುನೀಗಿದೆ ಚಿಕಿತ್ಸೆ ಫಲಕಾರಿಯಾಗದೇ
ಅಡ್ಡ ಬಿದ್ದು ಒದ್ದಾಡಿ ಕಂಬಕೆ ಕಾಲುಗಳ ಬಡಿದು
ಮುಗಿಸಿದೆ ಗೋವು ಜೀವನ ಪಯಣ
ಇಲ್ಲಿಗೆ ಇಂದಿಗೆ ಹರಿಯಿತು ಹಸುವಿನ ಹಚ್ಚನೆ ಬಂಧನ
ಕಾಮಧೇನುವಿನೊಂದಿಗೆ ತೀರಿತು ನಮ್ಮ ಋಣ
ಕುತ್ತಿಗೆಯ ಕಣ್ಣಿ ಬರಿದಾಗಿದೆ ಕಳಚಿ
ಅಟ್ಟದ ಮೇಲಿನ ಬೈಹುಲ್ಲು ಕಂತೆ,
ಹಿಂಡಿಯ ಚೀಲ ಇನ್ನಾರಿಗೆ..?
ಮನೆಯ ಅವಿಭಾಜ್ಯ ಅಂಗ ಮುರಿದಂತೆ
'ಸಿರಿ'ಯೇ ಸೂರೆಯಾದಂತೆ
ಇಂದಿನ ಸಂಜೆ
ತಲೆ ಭಾರವಾಗಿದೆ
ಆಗುವುದು ಆಯಿತಲ್ಲ, ಇನ್ನೇನಿದೆ?-
ಮನಸ್ಸು ಭಾರವಾಯಿತು.
ಭಾವನೆಗಳು ಉಮ್ಮಳಿಸಿ ಬಂದ ಹಾಗೆ.
ಅದೊಂದು ಅಸಹಾಯಕ ಸ್ಥಿತಿ.
ಆಕೆ ತ್ಯಾಗಮಯಿ ಗೋವು,
ಆಕೆ ದೇವಿಸ್ವರೂಪಿ.
ಆದ್ರೆ
ಧರ್ಮದ ಹೆಸರಿನಲ್ಲೋ,ಅಥವಾ ಆಕೆಯ ಮಾಂಸದ ಆಸೆಗಾಗಿಯೋ ಅಲ್ಲೊಂದು ಮಾರಣಹೋಮವೇ ನಡೆದಿತ್ತು.ಇದನ್ನ ನೋಡಿದ ಕಣ್ಣುಗಳು ತೇವಭರಿತವಾಗಿತ್ತು.
-
ವಿಶೇಷವಾದ ಪ್ರಾಣಿ ಗೋವು. ಹಸುವಿನಿಂದ ಬರುವ ಹಾಲು, ಮೊಸರು, ಬೆಣ್ಣೆ, ಸಗಣಿ, ಮೂತ್ರಗಳನ್ನು ಪಂಚಗವ್ಯಗಳು, ಪಂಚಾಮೃತ ಎಂದು ಕರೆಯುತ್ತಾರೆ.
ಗೋಮೂತ್ರ ಮನುಷ್ಯನ ದೇಹದಲ್ಲಿನ ಕಾಯಿಲೆಗಳಿಗೆ ಕಾರಣವಾಗುವ ಮಲಿನಗಳನ್ನು ನಿರ್ಮೂಲನ ಮಾಡುತ್ತದೆ. ಸೌದೆಯನ್ನು ಅಗ್ನಿ ದಹಿಸಿದಂತೆ ಈ ಪಂಚಗವ್ಯಗಳು ಮಾನವ ದೇಹದಲ್ಲಿನ ವ್ಯಾಧಿಗಳನ್ನು ಸುಟ್ಟುಹಾಕುತ್ತವೆ
*ಗವ್ಯಮ್ ಪವಿತ್ರಮ್ ಚ ರಸಯನಮ್ ಕ ಪಥ್ಯಮ್ ಚ ಹೃದ್ಯಮ್ ಬಲಮ್ ಬುದ್ಧಿ ಸ್ಯತ ಆಯುಹ್ ಪ್ರದಮ್ ರಕ್ತ್ ವಿಕರ್ ಹರಿ ತ್ರಿದೋಶ್ ಹೃದ್ರೊಗ್ ವಿಶಪಹಮ್ ಸ್ಯತ*
ಈ ಶ್ಲೋಕದ ಮೂಲಕ ಗೋಮೂತ್ರದ ಪ್ರಾಮುಖ್ಯತೆಯ ಬಗ್ಗೆ ವೇದಗಳಲ್ಲಿ ತಿಳಿಸಲಾಗಿದೆ. ಇದರ ಅರ್ಥ ಹೀಗಿದೆ: ಗೋಮೂತ್ರ ಪಂಚಗವ್ಯ ಒಂದು ಉತ್ತಮ ಸಿದ್ಧರಸ, ಉತ್ತಮ ಆಹಾರ, ಹೃದಯಕ್ಕೆ ಉತ್ತಮವಾದ, ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವ, ಆಯಸ್ಸು ಹೆಚ್ಚಿಸುವ, ಪಿತ್ತವನ್ನು ಸಮತೋಲನದಲ್ಲಿರಿಸುವ, ಶ್ವಾಸ ಮತ್ತು ಮೂಗಿನೊಳಗಣ ಲೋಳೆಯನ್ನು ಉತ್ತಮವಾಗಿಸುವ, ಹೃದಯತೊಂದರೆಗಳನ್ನು ನಿವಾರಿಸುವ ಮತ್ತು ವಿಷದ ಪರಿಣಾಮವನ್ನು ಕಡಿಮೆಗೊಳಿಸುವ ಶಕ್ತಿಯುಳ್ಳದ್ದಾಗಿದೆ
ಗೋಮೂತ್ರವನ್ನು ಮೇಧ್ಯ ಮತ್ತು ಹೃದ್ಯ ಎಂದೂ ಕರೆಯಲಾಗುತ್ತದೆ. ಇದರ ಅರ್ಥ ಇದು ಮೆದುಳು ಹಾಗೂ ಹೃದಯ ಕ್ಕೆ ಬಲನೀಡುತ್ತದೆ-
ಗೆಳೆತನದ ಮಿಡಿತ
----------------------
ಜಾಗ ಬದಲಾದರೂ ಈ ಅನುಬಂಧ ಶಾಶ್ವತ
ಒಡೆಯನ ಲೆಕ್ಕಿಸದೆ ಶ್ವಾನ, ಗೋವಿನ ಸೆಳೆತ
ಕಂಬನಿ ಜಾರುವ ಘಳಿಗೆ ಗೆಳೆತನದ ಮಿಡಿತ
ಮಾನವನ ಕ್ರೌರ್ಯಕಿನ್ನು ಶೂನ್ಯತೆ ಸನ್ನಿಹಿತ.-
ಹಾಲು ಹಿಂಡುವವನಿಗೆ ಗೊತ್ತಿರಲಿಲ್ಲ,
ಹಿಂಡುತ್ತಿರುವುದು ಗೋವಿನ ದೇಹವನ್ನೆಂದು...
ಆದರು ಎಲ್ಲರೂ ಕಾಯವೆಂದು ಒಪ್ಪಿದ್ದರು.
ಗೋವು ವಾಚ ಮನಸ್ಸಾ ಒಪ್ಪಿರಲ್ಲಿಲ್ಲ...-