ದುಂಡು ಮಲ್ಲಿಗೆ,ಕೆಂಡ ಸಂಪಿಗೆ ತಂದು ಮುಡಿಗೆ ಮುಡಿಸಿಲ್ಲ, ತೊಂಡೆ ತುಟಿಯ ದಂತದ ಬೊಂಬೆ ನಿನಗೆ ಸಾಟಿ ಯಾರಿಲ್ಲ..
-
ಅಲಂಕಾರ ಪ್ರಿಯನಲ್ಲ.🤷🏼♂️
ಅಹಂಕಾರ ಇದೆ.. ಆದ್ರೂ ಪರವಾಗಿಲ್ಲ..🤫
ಯಾಕೆಂದರೆ ಅದು ಇಲ್... read more
ಸ್ವಾಭಿಮಾನದ ಸಾಧಾರಣ ಗುಣದವಳು,
ಮೃದು ಸ್ವಭಾವದವಳು.. ಸರಳ ಅವಳು,
ತನ್ನವರ ಕಷ್ಟಕೆ ಮಮ್ಮರ ಮರುಗುವವಳು..
ನನ್ನವ್ವ ನಿನಗೆ ತಾಯಂದಿರ ದಿನದ ಶುಭಾಶಯಗಳು..
-
ಬಿಸಿಲಿನ ಬೇಗೆಯಲಿ ಬೆಂದ ಬೆಂದಕಾಳೂರಿನಲ್ಲಿಂದು ಮತ್ತೊಮ್ಮೆ ಮಳೆಯಾಯ್ತು, ಮರಳಿ ಬಂದ ಮಳೆಗೆ ಮುಖವೊಡ್ಡಿ ಮನಸು ಹಗುರಾಯ್ತು..
-
ರಾಮನಂತೆ ಪ್ರೀತಿಸೋ ಗಂಡಿಲ್ಲ,
ಸೀತೆಯಂತೆ ಕಾಯುವ ಹೆಣ್ಣಿಲ್ಲ..
ಅದಕ್ಕೆ ಲೋಕದಲ್ಲಿ ಪ್ರೀತಿಗೆ ಗೆಲುವಿಲ್ಲ..!😆-
🌸
ಮಹಾ
ಮಹಿಮನು
ಪಂಚಮುಖನು
ಜಗದ ಅಧಿಪತಿ
ಲಿಂಗ ಸ್ವರೂಪಿ
ಸರಳ ಭೂಷಣ
ಸುತ್ತ ಭೂತ ಗಣ
ಭಕ್ತರ ಪೋಷಕ
🌸 ಮಹಾ ಸೇನಾ ಜನಕ 🌸
ತಮಸ್ಸೆಂಬ ಅಜ್ಞಾನವನ್ನು ಅಳಿಸಿ ಜ್ಞಾನ ದೇವಿಗೆಯ ಬೆಳಗಿಸೋ ಕರುಣಾಕರ ಜಟಾಯು
ಸರಳ ಸಜ್ಜನಿಕೆಯ ನೀಲಾಭರಣ ಸುಂದರ ಆದ್ಯೀತ ರಹಿತ ದೇವ ಮೃತ್ಯುಂಜಯ
ಭಕ್ತರ ಆರಾಧ್ಯದೈವ ಶಂಕರ ಡಮರುಗ ನಾದ ಸ್ವರ ಮಯಾಯ ಶಿವ ಪ್ರಿಯ ಉಗ್ರಾಯ
ನಿರಾಕಾರ ರೂಪಾಯ ತ್ರಿಮೂರ್ತಿ ಸ್ವರೂಪ ನಿರಾಭರಣ ರುದ್ರಾಯ
ಸತ್ಯದ ಅರಿವು ನಿತ್ಯ ನಿರಂತರವು ಶಿವ ಶಕ್ತಿ ಸ್ವರೂಪ ಅನಂತವು
ನಿಷ್ಕಲ್ಮಶ ಮನಸ್ಸ ಪ್ರತೀಕನು ಹಠ ಬಿಡದ ದ್ಯೂತಕನು
ಶಿವಲಿಂಗನು ಅಭಿಷೇಕ ಪ್ರಿಯನು
ಜಗದ ಒಳಿತಿಗೆ ವಿಷವ ಕುಡಿದವನು
ಶಕ್ತಿ ವಂತನು ಆಡಬಂರ ಮುಕ್ತನು
ನಂಬಿ ಬಂದ ಭಕ್ತರ ಕೈ ಹಿಡಿದು ಕಾಪಾಡುವ ಪರಶಿವನು
ಇಂದ್ರಿಯ ನಿಗ್ರಹಿಸಿ ಧ್ಯಾನಸ್ತರಿಗೊಲಿಯೋ ಪರಮೇಶ್ವರನು
ಭಸ್ಮವನು ಧರಿಸಿದ ನಿರಾಲಂಕಾರನು ಸೋಮವಾರ ಪ್ರಿಯ ಈಶ್ವರನು
ಅಹಂಕಾರ ಅಳಿಸುವ ದುಷ್ಟರ ಶಿಕ್ಷಕ ಶಿಷ್ಟರ ರಕ್ಷಕ ಅರಿವಿನ ಗಂಗೆಯೊತ್ತ ಜಗದ ನಾಯಕ
ಹಣೆಯಲ್ಲಿ ಜ್ಞಾನದ ತಿಲಕವಿರಿಸಿ ಶುದ್ಧ ಚಿತ್ತದ ರುದ್ರಾಕ್ಷಿ ಧರಿಸಿ ಕೈಯಲ್ಲಿ ಡಮರುಗ ಇರಿಸಿ
ಶಾಂತ ಚಿತ್ತನಾಗಿ ಬುದ್ಧಿ ನಿಯಂತ್ರಣದಲ್ಲಿರಿಸಿ ಅಹಂಕಾರ ನಾಶ ಗೊಳಿಸೊ ಮಹಾದೇವನು
ದೇವರುಗಳ ದೇವನು ಬಂಧ ರಹಿತ ಶಿವನು
-
ಆ ಮುಂಜಾನೆಯ ಮಂಜಿನ ಹನಿಗೆ,
ಮುಸಂಜೆಯ ಸೋನೆಯ ಹನಿಗೆ,
ನಡುಗದ ಈ ಹೃದಯವು..
ನಡುಗುತಿಹುದು ನಿನ್ನಾ ನೆನಪಾ ಸೋನೆಗೆ..😑-
ಎಲ್ಲರ ಮುಂದೆ ಬಂದ ಕಣ್ಣೀರು , ಸುಳ್ಳಾಗಿರಬಹುದೇನೋ ಗೊತ್ತಿಲ್ಲ..
ಆದರೆ.. ಒಂಟಿಯಾಗಿ ಇದ್ದಾಗ ಬಂದ ಕಣ್ಣೀರಲ್ಲಿ ಸಹಿಸಲಾಗದಷ್ಟು ದುಃಖ ಇರುತ್ತೆ..
ನೋವಿರುತ್ತೆ ಜೊತೆಗೆ ಮನಸ್ಸಿನ ಭಾರವೂ ಅಡಗಿರುತ್ತೆ .-
ಕಾಡುವ ಮುಗ್ಧ ಮಗುವ ನಗುವಿನ ಓ ಒಡೆಯ , ಸಹಿಸಲಾಗುವುದಿಲ್ಲ ಇಂದಿಗೂ ನೀ ಅಗಲಿದ ವಿಷಯ..😔
-
ಜೀವನದಲ್ಲಿ ಒಂಟಿಯಾಗಿ ಇರ್ಬೇಕು ...
ಯಾಕೆಂದ್ರೆ, ಬೆನ್ನಿಗೆ ಚೂರಿ ಹಾಕೋರು ಇರೋಲ್ಲ..-