QUOTES ON #ಕುಳಿತೆ

#ಕುಳಿತೆ quotes

Trending | Latest

ಮೂರು ಮನಸುಗಳು ಕುಳಿತೆ
ಬರೆದವು ನೂರು ಕವಿತೆ

-


21 APR 2020 AT 7:25

ನೂರು ಭಾವಗಳ ಮಿಳಿತ
ಹುಟ್ಟಿತಲ್ಲೊಂದು ಕವಿತ.

-


21 APR 2020 AT 15:17

ಖಾಲಿಗಳ ಮುಖಾಮುಖಿ
ಬೆನ್ನುಗಳೇ ಸಖಾಸಖಿ....

-


21 APR 2020 AT 9:38

ಮೂರು ಮನಸ್ಸು ಸೇರಿದವು
ದುಃಖ ದುಮ್ಮಾನ ದೂರಾಗಿದ್ದವು
ಮನಸ್ಸುಗಳು ಈಗ ದೂರಾಗಿದ್ದರು
ಮನದ ಭಾವನೆಗಳು ಒಂದೆ ಆಗಿವೆ
ನಾವು ಮೂವರು ಒಂದಾಗುವ
ಸಮಯವು ಬೇಗ ಬರಲೆಂದು ಆಶಿಸುವೆ💓💓💓.

-


21 APR 2020 AT 9:02

ಬರೆದ ನೂರಾರು ಕವಿತೆಗಳನ್ನು
ಓದಲು ಕಾಯುವ ಸಾವಿರಾರು ಕಣ್ಣುಗಳು

-


7 JUN 2020 AT 12:31

ನೀ ಪದಗಳಲಿ ಅವಿತು ಕುಳಿತೆ,

ನಿನ್ನ ಹುಡುಕುತ ನಾ ಬರೆವುದು ಕಲಿತೆ..

-


25 MAR 2020 AT 12:13

ಸಾಲುಗಳಲ್ಲಿ ಪದಗಳಾಗಿ ಕುಳಿತೆ,

ಕವಿತೆಯಲ್ಲಿ ಕಾವ್ಯಮಯವಾಗಿ ಬೆರೆತೆ ..

-


21 APR 2020 AT 8:01

ಆ ಮೂರು ,
ದೇಹ ಬೇರೆ ಆದರೂ ಮನಸ್ಸು ಒಂದೇ,
ಅದೇ ಕೊನೆಯಾಗದ ಸ್ನೇಹಾ,,😍!

-



ನಿನಗಾಗಿ ಕಾದು ಕುಳಿತೆ
ಆ ಶಬರಿಯಂತೆ
ನಿನ್ನ ಸ್ಪರ್ಶದಿ ಶಾಪ
ಕಳೆದುಕೊಳ್ಳುವೆ ಆ ಅಹಲ್ಯೆಯಂತೆ
ಈ ವಿರಹವ ಸಹಿಸಿರುವೆ
ಆ ಸೀತೆಯಂತೆ
ಎಲ್ಲಾ ಇದ್ದು ಏನೂ ಇಲ್ಲದಂತಿರುವೆ
ನಾ ದ್ರೌಪದಿಯಂತೆ
ನೀ ಬಂದೆನ್ನ ಸೇರು
ಕಾತರಿಸಿದೆ ನನ್ನುಸಿರು,,,,,,,, **ಅಮು**

-


2 JAN 2021 AT 15:31

ಮಲೆನಾಡ ಸೀಮೆಯ
ಮನದರಸಿ ಮಲ್ಲೆಯವಳು!!
ಮನದ ಮೈತ್ರಿಯ ಸರದಿಯ
ಮುಂಗಾಲಲಿ ಮೆಟ್ಟಿಹಳು!!
ಮೆಟ್ಟಿಲುಗಳ ಕಟ್ಟಲು ಅವಳ ಮನಕೆ
ನೆನಪೆಂಬ ಇಟ್ಟಿಗೆಯ ಹೊತ್ತಿಹೆನು!!
ನಸುನಗೆಯಲೆ‌ ಮನವ
ಕಟ್ಟಿಗೆ ಇಲ್ಲದೆ ಸುಟ್ಟಿಹಳು!!
ಮುಂಗಾರಿನ ಸ್ವಾತಿ ಮಳೆಯ ತುಂತುರಿನವಳು!!
ಜೀವನವ ಕುಟ್ಟಿ ಪುಡಿ ಮಾಡಿದರು ಸರೀ
ಅವಳಿಗೆಂದೆ ಮನವ ದಾಖಲು ಮಾಡಿಹೆನು!!
ಹೊಸವರ್ಷದ ಉತ್ಸವದಲ್ಲಿ ಕೊಡಗಿನ ಬೆಡಗಿಗೆ
ಬೆವೆತು ಹೊಗಿದೆ ಮನದ ಕಣದ ಅಣು ಅಣು!!!!!

-