ಅಪ್ಪಾಜಿ ಎ ಮುಸ್ಟೂರು   (🌹ಅಪ್ಪಾಜಿ ಎ ಮುಸ್ಟೂರು 💞)
690 Followers · 2.2k Following

read more
Joined 5 August 2017


read more
Joined 5 August 2017

#ಒಲವಾ'ರತಿ'ಗೆ
***********
ಮುಸ್ಸಂಜೆಯ ಮಧುರ
ಕ್ಷಣದಲಿ ನಿನ್ನೊಂದಿಗೆ
ಹೆಜ್ಜೆ ಹಾಕಲು ಹಿತಕರ
ಪ್ರೀತಿಯ ಪ್ರತಿರೂಪ ನೀನು
ಚಂದ್ರನ ಬೆಳದಿಂಗಳಂತೆ
ನೈದಿಲೆಯಾಗಿ ನಾ ಅರಳಿ ನಿಂತೆ
ಉಕ್ಕುವ ಸಾಗರಕೆ
ತೀರವಾಗಿ ಕಾವಲಿರುವೆ
ಸರಿವ ಅಲೆಗಳ ಸವರಿ ಸುಖಿಸುವೆ
ತಂಗಾಳಿಗೆ ಮೈಯೊಡ್ಡಿ
ಹಾರುವ ಮುಂಗುರುಳ ಸವರಿ
ಸ್ವರ್ಗಕೆ ನಾ ಲಗ್ಗೆಯಿಕ್ಕುವೆ
ಮುಂಜಾನೆಯ ಮಂಜಿನ ಹಾಗೆ
ಮುತ್ತುಗಳ ಪೋಣಿಸಿ
ಪೂಜಿಸುವೆ ಒಲವಾ'ರತಿ'ಗೆ

೦೭೦೧ಪಿಎಂ೨೬೧೨೦೨೫
*ಅಪ್ಪಾಜಿ ಎ ಮುಸ್ಟೂರು*

-



ಸಂಗಾತಿಗೆ
ನಿನ್ನ ಪ್ರೀತಿಸಲು ಕಾರಣಗಳೇನು ಬೇಕಿಲ್ಲ
ನಿನ್ನೊಂದಿಗಿನ ಪಯಣವೇ ಸಾಕು
ಬದುಕಿನ ಏರಿಳಿತಗಳೇನೇ ಇರಲಿ
ನಿನ್ನ ನಗು ಒಂದು ಸ್ಪೂರ್ತಿ ನನಗೆ
ಬಿದ್ದರೆ ಎತ್ತುವ ನಿನ್ನ ಕೈಗಳಿವೆ
ಸೋಲುವ ಭಯವಿಲ್ಲ ನಿನ್ನ ಜೊತೆಯಿರೆ
ಗೆಲುವು ಕೂಡ ನಿರಾಳ
ನಿನ್ನೊಂದಿಗಿನ ಪ್ರತಿ ಯಾತ್ರೆಯು ಜಾತ್ರೆಯಂತೆ
ಸಂಭ್ರಮಿಸುತ್ತಲೇ ಸಾಗುವೆ ಜೀವನ ಪೂರ
ನಿನ್ನೊಲವು ಸಿಗುತ್ತಲಿರುವ ತನಕ ನಿರಂತರ
0528ಪಿಎಂ10092024
*ಅಮು ಭಾವಜೀವಿ ಮುಸ್ಟೂರು

-



ಬದುಕು ಬರೆದ ಪಾಡು
ಈ ನನ್ನ ಹಾಡು
ನೋವಿನಲ್ಲೇ ಬಂದು ನಿಂತ
ಬಡತನದ ಈ ಬೆಂಗಾಡು
ಮನದ ಆಸೆಗಳಿಗೆ
ಬಣ್ಣ ಹಚ್ಚಲಾಗದು
ಎದೆಯ ಭಾವಗಳಿಗೆ
ಬೆಚ್ಚನೆಯ ಸೂರು ನೀಡಲಾಗದು
ಪ್ರೀತಿ ಬಯಸಿ ಬಂದವರಿಗೆ
ತಂಪನೆಯ ನೆರಳು ನೀಡಲಾಗುತ್ತಿಲ್ಲ
ಮೃಷ್ಟಾನ ತಿನಿಸುವ ಬಯಕೆ ಇದ್ದರೂ
ಉಪ್ಪೆಸರಿನ ಅಂಬಲಿಗೂ ಗತಿಯಿಲ್ಲ
ಉಡಲು ಚಿಂದಿಯ ಬಟ್ಟೆ
ದಿನವು ಹಸಿದ ಖಾಲಿ ಹೊಟ್ಟೆ
ಇಷ್ಟೇ ಬಡತನ ನೀಡಿದ ಬಹುಮಾನ
ಅದಕ್ಕೆ ಎಲ್ಲಿ ಹೋದರು ಅವಮಾನ
ಏಕಾಗಿ ಸಿಕ್ಕಿತೋ ಈ ಜೀವನ
ಅಂದುಕೊಂಡಂತೆ ನಡೆಯಲಾಗದ ಪಯಣ
ನೋವುಗಳ ಇಲ್ಲಿ ಪಾಪಸುಕಳ್ಳಿ
ನಲಿವುಂಟು ಕನ್ನಡಿಯೊಳಗಿನ ಗಂಟಲಿ
ಅಂತ್ಯವಿಲ್ಲದ ಹೋರಾಟ
ಬಡತನದ ಈ ಮಹಾ ಸಂಪುಟ
ರಟ್ಟೆ ದಣಿದು ಚಟ್ಟ ಬಯಸಿದೆ ಬದುಕು
ಸಾವಿಗೂ ಬೇಡವಾಗುವಷ್ಟು ಬಡತನ ಕೆಡುಕು
0319 ಪಿಎಂ24082024

-



ಮೊಗ್ಗಿಗೆ ಹಿಗ್ಗು ಬರುವಾ ಮೊದಲೇ
ಬೇಕಾ ಅದಕೆ ಮದುವೆಯ ರಗಳೆ
ಬಲಿಯದ ಬಾಲ್ಯಕೆ ಬೇಲಿಯ ಹಾಕಿ
ಸಾಧಿಸುವಿರೇನನು ಪೋಷಕರೇ
ತಾಳಿಯ ಬದಲು ಪಾಠಿಯ ನೀಡಿ
ಅತ್ತೆ ಮನೆ ಬದಲು ಶಾಲೆಗೆ ಕಳಿಸಿ
ಅವಳ ಕಂಗಳ ಕನಸಿನ ಹಾಗೆ
ಬದುಕಲು ಬಿಡಿ ಬಲಿಪಶುವಾಗಿಸದೆ
ಕಲಿಯುವ ವಯಸ್ಸಲಿ
ಬೇಡ ಅವಳಿಗೆ ಸಂಸಾರ
ಬಳ್ಳಿಗೆ ಮರದಾಸರೆಯಾಗಿ
ಅವಳ ಬದುಕಿಗೆ ನೀಡಿ ಸಂಸ್ಕಾರ
ಗಂಡಿನ ವ್ಯಾಮೋಹವ ತ್ಯಜಿಸಿ
ಅವಳನೇ ಗಂಡಾಗಿ ಬೆಳೆಸಿ
ಅವಳೇ ಆಗುವಳು ಬಾಳ ನೆರಳು
ಹತ್ತಿಕ್ಕದಿರಿ ಅವಳ ಕೊರಳು
ಹೂವು ತಾನಾಗೇ ಅರಳಬೇಕು
ಅದರಾಸರೆಗೆ ಬೆರಳ ನೀಡಿ ಸಾಕು
ಆಗ ತಾನಾಗೆ ದುಂಬಿ ಬರುವುದರಸಿ
ಬಾಳುವಳಾಗ ತಾನೇ ಸಂಭ್ರಮಿಸಿ
0937ಪಿಎಂ090715
*ಅಪ್ಪಾಜಿ ಅಮು ಮುಸ್ಟೂರು*

-



#ಗಝಲ್

ನನ್ನೊಳಗಿನ ಆಸೆಗಳನ್ನು ಕೊಂದುಕೊಳ್ಳಲಿ ಹೇಗೆ ಸಖಿ
ನೋವಿನ ಅಗ್ನಿಕುಂಡದೊಳಗೆ ಬಿದ್ದು ಬೆಂದುಹೋಗಲಿ ಹೇಗೆ ಸಖಿ

ಅವಹೇಳನಗಳ ಸಮ್ಮೇಳನದಲ್ಲಿ ಸೊರಗಿರುವೆ
ಅವಸಾನದ ಅಂಚಿನಲ್ಲಿ ಸಂಚಿಗೆ ಬಲಿಯಾಗಲಿ ಹೇಗೆ ಸಖಿ

ಪ್ರೀತಿಯ ಮಧುಪಾನದ ಭ್ರಮೆಯಲ್ಲಿ ಬಂಧಿಯಾದೆ
ಮೋಸದ ಜಾಲದಲ್ಲಿ ಸಿಕ್ಕಿ ಹೊಸ ಭರವಸೆ ಹುಡುಕಲಿ ಹೇಗೆ ಸಖಿ

ಕೂನಿ ಮಾಡುವ ಕತ್ತಿಗೂ ಒಂಚೂರು ಕರುಣೆ ಇಲ್ಲ
ಪ್ರೇಮದ ಅಮಲಿನಲ್ಲಿ ಕತ್ತು ಹಿಚುಕಿದಾಗ ಬದುಕಲಿ ಹೇಗೆ ಸಖಿ

ಬೇಡದ ಬದುಕಿನಲ್ಲಿ ಅಮು ಅಸುನೀಗಿಹನು
ಕಣ್ಣಿಗೆ ಕತ್ತಲೆ ಕವಿದಿದೆ ದಾರಿ ಹುಡುಕಲಿ ಹೇಗೆ ಸಖಿ

೦೩೪೧ಪಿಎಂ೨೭೦೫೨೦೨೪
*ಅಮು ಭಾವಜೀವಿ ಮುಸ್ಟೂರು*

-



*ಅಮು ಹಾಯ್ಕು*

ಅಂತರಂಗದ
ಮಾತು; ಪ್ರೀತಿಯ ಬಿಂಬ
ಬಾಳ ನಡೆಗೆ

೦೨೧೨ಪಿಎಂ೨೭೦೫೨೦೨೪
*ಅಮು ಭಾವಜೀವಿ ಮುಸ್ಟೂರು*

-



*ಹಾಯ್ಕು*
ಬಿಸಿಲು ಈಗ
ತಣ್ಣಗಾಯ್ತು; ಖುಷಿಯೋ
ಭೂಮಿ ಬದುಕು
ಮೊದಲ ಮಳೆ
ತಣಿಸಿತು;ಧರೆಯು
ಸಮೃದ್ಧ ತಾಣ
ಸುಮವರಳಿ
ದುಂಬಿ ದಂಡು; ಭ್ರಮಿಸಿ
ಜೇನು ಹೀರಿತು
ಬಿರಿದ ನೆಲ
ಮೈದುಂಬಿ; ಹಸಿರುಟ್ಟ
ದಿನ ಹಬ್ಬವು
ಬಿಸಿಲ ಭಯ
ಇನ್ನಿಲ್ಲ; ಭೂತಾಯಿಗೆ
ಮಳೆಯೊಸಗೆ
ಖಗಮೃಗಕೆ
ಬಾಯಾರಿಕೆ ಇನ್ನಿಲ್ಲ
ಸಂತೃಪ್ತ ಭಾವ

೧೨೨೭ಪಿಎಂ೧೯೦೫೨೦೨೪
*ಅಮು ಭಾವಜೀವಿ ಮುಸ್ಟೂರು*

-



*ಸಂಜೆ ಹಾಯ್ಕುಗಳು*

ಮುಸ್ಸಂಜೆ ರಂಗು
ಅವಳ ಕೆನ್ನೆ ಮೇಲೆ
ಪ್ರೀತಿಯ ಸಹಿ
ಇರುಳ ದೀಪ
ಅವಳ ಕಣ್ಣ ಜ್ಯೋತಿ
ಬಾಳ ಹಾದಿಗೆ
ಬೆಳ್ಳಿ ಬೆಳಕು
ಅವಳ ನಗೆ ಚೆಲ್ವು
ಒಲವು ಕವಿ
ಕೈ ಹಿಡಿದಾಗ
ಕೋಲ್ಮಿಂಚಿನ ಸಂಚಾರ
ಮುಂಗಾರು ಸಿರಿ
ನದಿಯ ಸುಳಿ
ಅವಳ ಕೆನ್ನೆಯ ಗುಳಿ
ಭ್ರಮಿಸೋ ಪ್ರೇಮಿ
೦೬೦೯ಪಿಎಂ೧೩೦೫೨೦೨೪
*ಅಮು ಭಾವಜೀವಿ ಮುಸ್ಟೂರು*

-



ಎದೆಯ ನೋವುಗಳಿಗೆ
ಸಾಂತ್ವನ ಹೇಳಬೇಕಿದೆ
ಬದುಕಿನ ಸಂಕಷ್ಟಗಳಿಗೆ
ಪರಿಹಾರ ಹುಡುಕಬೇಕಿದೆ
ಕನಸುಗಳು ಒತ್ತಾಸೆಗೆ
ನನಸಾಗಿಸುವ ದಾರಿ ತೋರಬೇಕಿದೆ
ಪುಟ್ಟ ಹೃದಯದ ಭಾವನೆಗಳಿಗೆ
ಸ್ಪಂದನೆಯ ಸ್ಥಳವಕಾಶ ಬೇಕಿದೆ
ಸಂಗಾತಿ ನೀ ಬಂದ ಗಳಿಗೆ
ನನ್ನೆಲ್ಲ ಬಯಕೆಗಳಿಗೆ ಭರವಸೆ ಸಿಕ್ಕಿದೆ

೦೪೫೪ಎಎಂ೧೬೦೪೨೦೨೪
*ಅಮು ಭಾವಜೀವಿ ಮುಸ್ಟೂರು*

-



ಒಡಲ ಚೇತನವೇ ನೀ ಉಸಿರಾಗು
ಬಾಳ ಬೀಳಿನಲಿ ನೀ ಹಸಿರಾಗು
ಎದೆಯ ಗೂಡಿಗೆ ತಲೆಯಿಟ್ಟು ಮಲಗು
ಪ್ರೀತಿಯ ಹಂಬಲದಲ್ಲಿ ನೀ ಮಗುವಾಗು

೦೧೩೧ಪಿಎಂ೧೫೦೨೨೦೨೪
*ಅಮು ಭಾವಜೀವಿ ಮುಸ್ಟೂರು*

-


Fetching ಅಪ್ಪಾಜಿ ಎ ಮುಸ್ಟೂರು Quotes