BABU BN   (ಅಕ್ಷೀಣಯಾನ(ಬಾಬು))
12 Followers · 21 Following

ಕುವೆಂಪು ರವರನ್ನು ಪ್ರೀತಿಸುತ್ತೇನೆ ಆದರೆ ತೇಜಸ್ವಿಯವರನ್ನು ಅನುಸರಿಸುತ್ತೇನೆ.
Joined 21 April 2020


ಕುವೆಂಪು ರವರನ್ನು ಪ್ರೀತಿಸುತ್ತೇನೆ ಆದರೆ ತೇಜಸ್ವಿಯವರನ್ನು ಅನುಸರಿಸುತ್ತೇನೆ.
Joined 21 April 2020
13 JUN 2024 AT 20:45

ಪದಗಳ‌ ಪುರದೊಳಗೆ
ಪುಳಕಗಳ ಸಂತೆ!!
ಕಳ ಕಳೆಯ ಹೂಗಳಲ್ಲೂ
ಶುರವಾದಂತಿದೆ ಚಿಂತೆ!!

ಪರವಶದ ಪರಿವು
ಪ್ರೇಕ್ಷಕನು ಆ ಪರಶಿವನು!!

ಪಾರಿಜಾತದ ಅಮಲು
ಸಿರಿ ಧಾನ್ಯದ ತೆನೆಯಂತವಳು
ವಿವರಣೆಯ ಹೊಸ್ತಿಲು ಅವಳು
ವರ್ಣನೆಯ ಪರ್ವವೂ ಸಾಲದು!!

ತುಂತುರು ಹನಿಗಳ ತೋರಣದ
ಕುಂಚದ ಚಹರೆಯ ಚಂದ್ರಮಳು
ಕಬ್ಬಿಗನ ಎದೆಯಲು ಮಬ್ಬು
ಮದರಂಗಿಯಾ ಮೊಗದ
ಪಧುಮಳು ನನ್ನವಳು.
-ಅಕ್ಷೀಣಯಾನ

-


26 JUN 2022 AT 20:08

ಆಕಸ್ಮಿಕ ಅವಳ ಅರವಳಿಕೆಯ ಬಂಧ!!
ಕನಸುಗಳ ಹೊರುವ ಅಸಾಧಾರಣ
ಅಸ್ಮಿತೆಯವಳು!!
ಪರಾಮರ್ಶೆಗಳ ಗೋಜು ಏಕೆ
ಅನಿರೀಕ್ಷಿತ ಅನುಕರಣೆಯ ಪರ್ವ ಅವಳು!!
ಮಾರು ಹೋಗಿರುವೆ ಅವಳ
ಅನುರಾಗದ ಆವರಣಕ್ಕೆ!!
ಸಕಲವು ತಿರಸ್ಕೃತ-ಎದುರುಮನೆಯವಳ
ಮನುಸ್ಮೃತಿ ವಿಶ್ವಾಸಕ್ಕೆ!!
-ಅಕ್ಷೀಣಯಾನ

-


21 JUN 2022 AT 22:16

ಮಲೆನಾಡ ಸೀಮೆಯ
ಮನದರಸಿ ಮಲ್ಲೆಯವಳು!!
ಮನದ ಮೈತ್ರಿಯ ಸರದಿಯ
ಮುಂಗಾಲಲಿ ಮೆಟ್ಟಿಹಳು!!
ಮೆಟ್ಟಿಲುಗಳ ಕಟ್ಟಲು ಅವಳ ಮನಕೆ
ನೆನಪೆಂಬ ಇಟ್ಟಿಗೆಯ ಹೊತ್ತಿಹೆನು!!
ನಸುನಗೆಯಲೆ‌ ಮನವ
ಕಟ್ಟಿಗೆ ಇಲ್ಲದೆ ಸುಟ್ಟಿಹಳು!!
ಮುಂಗಾರಿನ ಸ್ವಾತಿ ಮಳೆಯ ತುಂತುರಿನವಳೆ-ಎದುರುಮನೆಯವಳು!!

-


21 JUN 2022 AT 22:06

ನಗು ನಗುವಾಗೆ ಇರಬೇಕು
ನೋವಾಗಬಾರದು!!
ಮಾತು ಮನ ಮುಟ್ಟುವಂತಿರಬೇಕು
ಮನಸ್ಸ ಚುಚ್ಚುವಂತಿರಬಾರದು!!
ಪದೇ ಪದೇ ಅದೇ ಮಾತು ಮರುಕಳಿಸಬಾರದು
ಮನಸ್ಸು ಮೌನಕ್ಕೆ ಜಾರಿ ಹೋಗುವುದು!!
ಮುಖದ ಭಾವದ ಮೇರೆಗೆ
ಮನದ ಭಾವವ ಎಂದೂ ವಿಂಗಡಿಸಬಾರದು!!.

-


17 JUN 2022 AT 22:14

ಸ್ವರದಲ್ಲಿ ಶೃತಿ ಸೇರಿದರೆ ಸ ರಿ ಗ ಮ ಪ
ಮನದ ಏರಿಳಿತಗಳೆ ತಾಳ ಮೇಳ ತಪನ
ಬಳುಕು ತೆನೆಗಳ ಬಿಂಕದಾ ತಂದಾನ
ಮದ್ದಳೆ ಶಬ್ದದ ಮೋಹದ ಮೌನ
ಅರೆ ಗಳಿಗಿಯಲ್ಲೆ ಮರುಕಳಿಸುವ ಕವನ
ಕುಂಚವು ಹೆದರುವ ಕಂಚಿನಾ ನಗೆ
ಕಬ್ಬಿಗನು ಮರುಳಾಗುವ-ಎದುರುಮನೆಯವಳ
ಮೋಹದಾ ನಸುಗೆಂಪಿನ ಮೊಗ ನನ್ನ ಮನದ ನೊಗ.

-


16 JUN 2022 AT 21:38

ಹೆಸರಿಲ್ಲದೆ ಉಸಿರೊಳಗೆ
ಹೊಸೆದಿರುವ ತಾವರೆಯವಳು,
ಸಾಗರ ತೀರದ ಹುಣ್ಣಿಮೆ
ಚಂದ್ರನ ತಿಳಿ ಬೆಳದಿಂಗಳವಳು,
ಕಿರುತೆರೆಗೆ ತರಲಾಗದ
ಮನದ ಚಾವಣಿಯ ತೀರವಳು,
ಬರೆದ ಬರವಣಿಗೆಯ
ಅಳಿಸಲೂ ಆಗದ ಭಾವಚಿತ್ರವ
ಬಳಸಲೂ ಆಗದ-ಎದುರುಮನೆಯವಳವಳು

-


6 JUN 2022 AT 22:28

ಕಾಲ್ಪನಿಕವಾದರು ಅವಳೊಂದು ಹಣತೆ
ಬೇಡವೆಂದರು ಮನ ಅನುಸರಿಸುತ್ತಿದೆ ಅವಳ ನಡತೆ!!
ಕಾಲೂರಿದೆ ಕನಸೊಂದು ಅವಳ ಮುಗುಳುನಗೆಗೆ
ಕಾಡ್ಗಿಚ್ಚಂತೆ ಗಸ್ತು ಸುತ್ತಿದೆ ನೋಟ ಮನದೊಳಗೆ!!
ಬಾರದ ನಿದ್ದೆಯು ಬರಸೆಳೆದಿದೆ ಕಣ್ಣ ಒಳಗೊಳಗೆ
ಕವಿತೆಯ ಸಾಲ ಸುರಿಯಲು- ಎದುರು ಮನೆಯವಳ
ಗೆಜ್ಜೆಯ ಹೆಜ್ಜೆಯ ಹಾದಿಗೆ!!!
-ಅಕ್ಷೀಣಯಾನ

-


26 APR 2022 AT 23:33

ಶೃಗಂರಿಸಿದರುಸಾಲದು
ಸಾವಿರ ಸುಗಂಧ ಪುಷ್ಪವ!!
ಸಂಹರಿಸುವಂತಿದೆ ಸಾಲು ಸಾಲು
ಹಸಿರ ತೆನೆಯ ನೋಡಿ
ನನ್ನವಳ ಅಂದಾವ!!

ದುಂಡಗಿನ ಕಣ್ಣಿನ ದಾಳಿ,
ಮನದೊಳಗೆ ಎಬ್ಬಿಸಿದೆ
ಬಿರುಗಾಳಿ!!
ಕಣ್ ರೆಪ್ಪೆಯ ಕಾಡಿಗೆ
ಮನವ ಅರಳಿಸಿದೆ,
ನನ್ನೊಳಗಿನ ಕಬ್ಬಿಗನ
ಉರುಳಿಸಿದೆ!!

ನನ್ನೊಳಗಿನ ಪದಗಳ
ಪಾಡು ಗೋಳಾಡಿವೆ,
ಬರೆದೊಡಣೆ ಸಾಲುಗಳು
ಕಣ್ಣೊಟಕೆ ನಾಚಿನಿಂತಿವೆ!!
ಬಟ್ಟಲು ಮೊಗವು ಮನದೊಳಗೆ
ಭಟ್ಟಿ ಇಳಿಸಿದೆ,
ಬವಣೆಗಳು ಕೂಡ ನಿಬ್ಬೆರಗು
ಇವಳ ನಗುವೆ ನನಗೆ ಬದುಕಾಗಿದೆ!!
-ಅಕ್ಷೀಣಯಾನ(ಬಾಬು)

-


10 FEB 2022 AT 20:31

ಪದಗಳ‌ ಪುರದೊಳಗೆ
ಪುಳಕಗಳ ಸಂತೆ!!
ಕಳ ಕಳೆಯ ಹೂಗಳಲ್ಲೂ
ಶುರವಾದಂತಿದೆ ಚಿಂತೆ!!

ಪರವಶದ ಪರಿವು
ಪ್ರೇಕ್ಷಕನು ಆ ಪರಶಿವನು!!

ಪಾರಿಜಾತದ ಅಮಲು
ಸಿರಿ ಧಾನ್ಯದ ತೆನೆಯಂತವಳು
ವಿವರಣೆಯ ಹೊಸ್ತಿಲು ಅವಳು
ವರ್ಣನೆಯ ಪರ್ವವೂ ಸಾಲದು!!

ಮುನ್ನುಡಿಯ ಲೇಖನದ ಬಣ್ಣದಾ ಶಾಯಿಗೆ
ಚಂದ್ರನಾ ಮುರಿದು ಲೇಖನಿಗೆ ತುಂಬಲೆನಿಸಿದೆ!!

ತುಂತುರು ಹನಿಗಳ ತೋರಣದ ಕುಂಚದ
ಚಹರೆಯ ಚಂದ್ರಮಳು
ಕಬ್ಬಿಗನ ಎದೆಯಲು ಮಬ್ಬು
ಮದರಂಗಿಯಾ ಮೊಗದ ಪಧುಮಳಿವಳು.
-ಅಕ್ಷೀಣಯಾನ— % &

-


6 FEB 2022 AT 20:07

ತರ್ಕಕ್ಕೆ ಸಿಗದ ವಾದಗಳು!!
ತಾರಕಕ್ಕೆರಿದ ಸಂಧರ್ಭಗಳು!!
ತಾಳ್ಮೆಯ ತುಳಿಯಲೆತ್ನಿಸುವ ಮಾತುಗಳು!!
ಸಿಕ್ಕರೂ ಸಿಗಲಿಲ್ಲ ಎಂಬಂತಾಗಿಹ ಮೌನ!!
ಮರುಕಳಿಸಿದೆ ಮತ್ತದೆ ಹಳೆಯ ಗಾನ!!
ಮುಗ್ಗರಿಸಿದೆ ಮನಸ್ಸು ಹೊಸ ದಾರಿಯಲೂ
ಹಳೆಯದೇ ಗಾಯದ ಹೊಸ ಕಂಬನಿಯಲಿ!!.
-ಅಕ್ಷೀಣಯಾನ— % &

-


Fetching BABU BN Quotes