....
-
#suji_love #suji_... read more
ಅಕ್ಷಯ ತದಿಗೆ
ಪವಿತ್ರವಿದು ವೈಶಾಖ ಶುದ್ಧ ಪಕ್ಷದ ಈ ತದಿಗೆ
ನಾಂದಿಯಾಗಿತ್ತು ಮಹಾಭಾರತದ ಬರವಣಿಗೆಗೆ
ಸೂರ್ಯ ಚಂದ್ರರು ಇಂದು ಗರಿಷ್ಠತಮ ಕಾಂತಿಗೆ
ಶ್ರೇಷ್ಠವೆನ್ನುವರು ಲೋಹ ಚಿನ್ನ ಬೆಳ್ಳಿ ಖರೀದಿಗೆ
ಇಂದೇ ಆಗಿತ್ತು ಪರಶುರಾಮರ ಜನನ
ಕೃಷ್ಣನನುಜ ಬಲರಾಮನ ಜನ್ಮ ದಿನ
ಪಾಂಡವರಿಗೆ ಅಕ್ಷಯ ಪಾತ್ರೆಯ ಕೊಡುಗೆ
ಆತ್ಮಸಖ ಮುರಾರಿಯ ಅನುಗ್ರಹ ಕುಚೇಲನಿಗೆ
ಸ್ವರ್ಗದಿಂದ ಈ ಪುಣ್ಯ ದಿನ ಗಂಗಾವತರಣ
ಕುಬೇರನು ಮಾಡುವೆನಿಂದು ಲಕ್ಷ್ಮೀ ಆರಾಧನ
ಮಾಡಬೇಕು ಇಂದು ಪಶು ಸೇವೆ ಅನ್ನ ವಿದ್ಯಾದಾನ
ದುಶ್ಚಟಗಳ ತ್ಯಜಿಸಿ ಲೌಕಿಕ ಪಾರಮಾರ್ಥಿಕ ಸಾಧನ
ಮಾಡುವರಿಂದು ಸೌಭಾಗ್ಯ ಗೌರಿ ಉಪಾಸನ
ಶಕ್ತ್ಯಾನುಸಾರ ಸುವಾಸಿನಿ ಆರಾಧನ
ಬೇಸಿಗೆ ಧಗೆಗೆ ಪಾನಕದ ಸಮಾರಾಧನ
ಸಮರ್ಪಣೆ ಮಾವಿನ ಹಣ್ಣಿನ ಬಾಗಿನ
-
ವಿಶ್ವ ಭೂಮಿ ದಿನದ ಶುಭಾಶಯಗಳು
ಸ್ವರಾಕ್ಷರಗಳಲ್ಲಿ ಭೂಮಿ ತಾಯಿಗೆ ನಮನ.
ಅವನಿಯ ಅಳಲು
ಅವನಿ ಇವಳು ಜಗವ ಪೊರೆವ ಜಗದ್ಧಾತ್ರಿ
ಆಶ್ರಯ ನೀಡಿ ಸಲಹುತಿಹ ಸುಂದರ ಧರಿತ್ರಿ
ಇಳೆ ಇವಳೇ ಉಟ್ಟಿಹಳು ಹಸಿರು ವನರಾಶಿಯ ಪತ್ತಲ
ಈ ಪೃಥ್ವಿಗೆ ನದಿ ಝರಿಗಳೇ ಶೋಭಿಸುವ ಕೊರಳ ಮಾಲ
ಉತ್ತು ಬಿತ್ತಿದರೆ ನೆಲವ ಕೊಡುವಳು ಧಾನ್ಯದ ಸಿರಿ
ಊಟವಿತ್ತು ಸಲಹುವವಳು ತಾಯಿ ಅನ್ನಪೂರ್ಣೇಶ್ವರಿ
ಋತುಮಾನಕ್ಕೆ ಬದಲಾಗುವ ಸೊಗದ ಸೊಬಗ ಐಸಿರಿ
ಎಲ್ಲ ನನಗೆ ಬೇಕೆನ್ನುವ ದುರುಳ ಮಾನವನ ಸ್ವಾರ್ಥ
ಏನಾದರೂ ಆಗದವನಿಗೆ ಪ್ರಕೃತಿ ಮಹತ್ವದ ಅರ್ಥ
ಐಶ್ವರ್ಯದ ಹುಚ್ಚಿನಲಿ ಸಂಭವಿಸಿದವೆಷ್ಟೋ ಅನರ್ಥ
ಒಕ್ಕಲುತನ ಮಾಡಲು ಭೂಮಿ ಇಲ್ಲ ಬರೀ ನಗರೀಕರಣ
ಓಗೊಡಲು ಜೀವರಾಶಿ ಇಲ್ಲದಂತೆ ಕೈಗಾರೀಕರಣ
ಔದ್ಯೋಗೀಕರಣ ಹೆಸರಿನಲ್ಲಿ ಕಾಡುಗಳ ವಿನಾಶ
ಅಂತ್ಯ ಸಮೀಪಿಸುತ್ತಿದೆ ಖಚಿತ ಮನುಕುಲದ ಸರ್ವನಾಶ
-
ಒಸಗೆ
ಕಾರಿರುಳ ತಿಮಿರದಲಿ
ಕಂಗಾಲಾಗಿ ತೊಳಲಿರುವೆ
ದುಃಖಗಳ ಚಕ್ರವ್ಯೂಹದಲಿ
ಗೊಂದಲದಿ ಬಳಲಿರುವೆ
ವೇದನೆಗಳ ಭುಗಿಲಿನಲಿ
ಬೇಯುತ್ತಾ ಕನಲಿರುವೆ
ಸಾಂಗತ್ಯದ ಭರವಸೆಯಲಿ
ಬರಬಾರದೆ ನನ್ನೊಲವೆ
-
ಟಿಟ್ಟಿಭವುಲಿಯುತಿರ
ಲಟ್ಟುತಲಿ ಕತ್ತಲೆಯ
ಹುಟ್ಟುತಿಹ ಮೂಡಣದಿ ದಿನಕರನಿವ
ಕಟ್ಟುತಲಿ ಹೊಸದಿನವ
ಮೆಟ್ಟುತಲಿ ಜಡತೆ ಬುವಿ
ಬಟ್ಟಲಲಿ ಹೊಂಗಿರಣ ತುಂಬುತಲಿಹ
ಶುಭೋದಯ
ಟಿಟ್ಟಿಭ = ೧ ಜಾತಿಯ ಹಕ್ಕಿ
-
ಬಿರುಬೇಸಿಗೆಯ ಬದುಕಿನಲಿ
ತಂಬೆಲರಾಗಿ ನೀ ಬಂದಾಗ
ಮುಂದೇನೆಂದು ಕಾಣದಾಗಿರಲು
ದಾರಿದೀವಿಗೆಯಾಗಿ ನಿಂದಾಗ
ನಿನ್ನೊಲವ ತುಂತುರಿನ
ಸಿಂಚನದಿ ನಾ ಮಿಂದಾಗ-
ಗುರುತು ಮೂಡಿಸುತ್ತವೆ
ಬಾಳಹಾದಿಗುಂಟ
ಇಟ್ಟಹೆಜ್ಜೆಗಳು
ಸಮಯ ನಿರ್ಧರಿಸುತ್ತದೆ
ಅವುಗಳನ್ನು
ಉಳಿಸುವುದು ಬೇಡವೋ ಎಂದು
-