ಬರಿ ವಾರ್ತೆ ಕೇಳಿಹೆವು,ನೋಡಿಲ್ಲವೀತನಕ
ಬಿರಿದ ಕಮಲದಿ ಮತ್ತೆ ಕಮಲದುತ್ಪತ್ತಿ!
ತರುಣಿ! ಕಂಡೆವಿದೀಗ,ತವ ಮುಖದ ಕಮಲದೊಳು
ಎರಡು ಕಂಗಳ ಕಮಲ,! ಸೌಂದರ್ಯ ತೃಪ್ತಿ.
_______________ಪದ್ಯಾಣ_________________
ಕಮಲೇ ಕಮಲೋತ್ಪತ್ತಿಃ,ಶ್ರೂಯತೇ ನ ಚ ದೃಶ್ಯತೇ
ಬಾಲೇ! ತವ ಮುಖಾಂಭೋಜೇ ದೃಷ್ಟಮಿಂದೀವರಂದ್ವಯಮ್
_______________ಕಾಳಿದಾಸನ ಸಮಸ್ಯಾಪೂರ್ತಿ____________
-
Padyana Govinda Bhat
(ಪದ್ಯಾಣ)
181 Followers · 116 Following
Joined 16 July 2018
13 JAN 2023 AT 19:34
14 JUN 2022 AT 23:42
ಜೀವವಿಲ್ಲಿ ಕೆಲವರ ಹೃದಯದಲ್ಲಿರುತ್ತದೆ
ಉಳಿದಂತೆ ಕೆಲವರ ಕೈಯ್ಯಲ್ಲಿರುತ್ತದೆ 😀-
25 JAN 2022 AT 22:43
ಭಾಷೆಯು ಸೋತೊರಗುವುದು
ನಾಲಿಗೆಯು ಬಡಬಡಿಸುವುದು
ಸ್ವರಗಳೆಲ್ಲ ಅಡಗಿ ಬಿಡುವುದು
ಭಾವನೆಯು ಚಿಗುರಿ ತೊನೆವುದು.-
23 JAN 2022 AT 21:01
ಎದೆಗೂಡ ಮೀರಿ ಹರಿಯಲಿ
ಜಗದಗಲದಲ್ಲಿ ತುಳುಕಲಿ
ಚರಾಚರವನೊಳಗೊಳಲಿ
ಗಾಢ ಬಂಧ ಬೆಸೆದುಕೊಳಲಿ.-
22 JAN 2022 AT 23:30
ಪ್ರೀತಿಯೆಂಬುದೇ ಚಮತ್ಕಾರದೊಂದು ಬಂಧನ!
ನೋವು,ಹತಾಶೆಗಳ ಕೊಡದ ಹಿತಕರ ಬಂಧನ.
ಮನಸು-ಹೃದಯಗಳ ದೃಢತೆಯಲಿ ಬೆಸೆವ ಬಂಧನ.-
19 JAN 2022 AT 23:31
ಸ್ವಾರ್ಥಕ್ಕೆ ಬಳಸದೆ ಉದಾರತೆಯನ್ನೆ ಮೆರೆಯಿತು.
ದೋಚಿದಷ್ಟನ್ನೂ ಊರಗಲ ತಿರುಗಿ ಹರಡಿತು.
ಮಹನೀಯರ ಗುಣವೇ ಹಾಗೆ..
ಎಲ್ಲೋ ಮೂಲೆಯ ಸತ್ವವನ್ನು ಜಗದ ಮುಖಕ್ಕೆ ಪರಿಚಯಿಸಿ
ತಾವು ಅಜ್ಞಾತರಾಗಿಯೇ ಉಳಿದುಬಡುತ್ತಾರೆ.-