QUOTES ON #ಕುರುಡು

#ಕುರುಡು quotes

Trending | Latest
26 APR 2020 AT 21:55

ಪ್ರೀತಿ ಕೂಡ ಕುರುಡಾಗಬಹುದು ಸ್ವಾರ್ಥದ ಮುಂದೆ...

-


24 MAY 2019 AT 23:02

ಯಾರಿಲ್ಲದಿದ್ದರೂ ಬದುಕುವುದ
ಕಲಿಯಬೇಕಿದೆ ಈ ಕುರುಡು ಪ್ರಪಂಚದಲ್ಲಿ!

-


10 AUG 2019 AT 9:49

2D
ಇಬ್ಬರಿಗೂ ಸೇರಿ ಕಣ್ಣು ಎರಡು
ಅತ್ತ-ಇತ್ತ ನೋಡದಿರು
ಮತ್ತೆ ಮತ್ತೇ 'ಒತ್ತಿ' ಹೇಳುವೆ
ನಮ್ಮಿಬ್ಬರ ಬಿಟ್ಟು ಜಗವೆಲ್ಲ ಕುರುಡು

-


1 MAY 2020 AT 7:27

ಮೇಲಿರಿವವನು ಕುರುಡ,ಕಿವುಡನಲ್ಲ
ಎಲ್ಲ ಕೆಟ್ಟ ಕರ್ಮಗಳ,ಒಳ್ಳೆ ಧರ್ಮಗಳ
ಕಣ್ಣು ಮಿಟುಕಿಸದೆ ನೋಡುತ್ತಿರುವ
ಮನದ ಮೂಲೆಯ ಸಣ್ಣ ಪಿಸುಮಾತನ್ನು
ಸ್ಪಷ್ಟವಾಗಿ ಆಲಿಸುತ್ತಿರುವ

-


20 SEP 2020 AT 18:06

ಜಗವೇ ಕುರುಡಿ ಎಂದು
ಜರಿಯುತ್ತಿದ್ದರು, ಅವಳ
ಅಂತರಂಗದಲ್ಲೊಂದು
ಸೊಡರು ಸದಾ ಜ್ವಲಿಸುತ್ತಿತ್ತು !

-


29 SEP 2020 AT 16:30

ನಿನ್ನ ನೆನಪುಗಳು
ಅಜ್ಜಿ ಹೇಳುತ್ತಿದ್ದ
ಕುರುಡು ಚಿತ್ತೆ ಮಳೆ!

ಕಾಲ ನೋಡಿ ಬರುವುದಿಲ್ಲ
ಬಂದರೆ ನಿಲ್ಲುವುದಿಲ್ಲ..
ಆಗೊಮ್ಮೆ ಈಗೊಮ್ಮೆ ನಿಂತು
ಗಂಟೆಗೊಮ್ಮೆ ಧೋ
ಎಂದು ಸುರಿಯುತ್ತದೆ...

-



ಕಣ್ಣಿದ್ದೂ ಕುರುಡಾಗಿದೆ ಜಗವು
ಮತ್ತೊಂದೆಡೆ ಕಣ್ಣಿಲ್ಲದೆ ಕೊರಗುತಿದೆ
ಜಗವ ನೋಡದ ಮನವು..

-


5 JUN 2020 AT 8:05

ಕಣ್ಣು ಕರುಡಾದರು ನಮ್ಮ ಜಗವನ್ನು ಗುರುತಿಸಬಹುದು. ಆಂತರ್ಯ ಕುರುಡಾದರೆ ಯಾವುದನ್ನು ಗುರುತಿಸಲಾಗದು.

-


25 OCT 2019 AT 10:03

ಕರ ಮುಗಿದು ಬೇಡಿದರೂ
ವರ ನೀಡಲಿಲ್ಲ,
ಕಿರಿದಾಗಿ ಬಾಗಿದರೂ
ಕೃಪೆ ತೋರಲಿಲ್ಲ,
ಅರಿವಿನರಮನೆಯೊಳಗಿಂದು
ಮನವು ಕುರುಡಾಯಿತಲ್ಲ..

-


5 DEC 2019 AT 22:07

ಪ್ರತಿಬಾರಿ
ಉರಿದಾಗಲೂ
ಕರಗಿ ಹೋದದ್ದು
ಬರೀ ಮೇಣವಲ್ಲ!!
ನ್ಯಾಯದ ಮೇಲಿದ್ದ
ಪ್ರತಿಯೊಬ್ಬನ ಭರವಸೆ;
ಸುಟ್ಟು ಹೋದದ್ದು
ಮನುಷ್ಯರೆಲ್ಲರೂ
ಮನುಷ್ಯತ್ವವುಳ್ಳವರೆಂಬ
ನಂಬಿಕೆ!!!

-