Chinni Madesh   (Chinni Madesh)
142 Followers · 20 Following

Joined 12 July 2020


Joined 12 July 2020
19 FEB 2022 AT 14:04

ನಾನು ಯಾವುದೋ
ನಡುರಾತ್ರಿಯ ಪಹರದಲ್ಲಿ
ನಿನ್ನ ಮನೆಯ ಮುಂದೆ
ಹಾದು ಹೋಗುವ ಅಸ್ಪಷ್ಟ
ನೆರಳಿನಂಥ ಪಥಿಕ!

-


14 FEB 2022 AT 7:32

ಒಂದು ತಬ್ಬುಗೆ,
ಎಣಿಸಲಾಗದೆ ಮರೆತ ಮುತ್ತು,
ಏನನ್ನೋ ಹೇಳಲು ಹೋಗಿ
ಸುಮ್ಮನೆ ತಡವರಿಸಿದ ಪಿಸುಮಾತು,
ಢವಗುಟ್ಟುವ ಎದೆ, ಬೆವೆತ ಅಂಗೈ...

ಪ್ರೀತಿಯೆಂದರೆ ಬರಿಯ ಭಾವನೆಗಳಲ್ಲವೇ?

-


2 FEB 2022 AT 9:48

ನೋವು ನಲಿವನ್ನು ಮಸೆದು
ಪ್ರೀತಿ ಗಂಟನ್ನು ಒಸೆದು
ಪರಬ್ರಹ್ಮ ಬೆಸೆದಿರುವ
ಮಧುರಾತಿ ಮಧುರ ದಾಂಪತ್ಯ
ಜೀವನದ ರಥವೇರಿ ಹೊರಟಿರುವ
ಜೋಡಿ ಜೀವಗಳಿಗೆ....

'Happy Wedding Anniversary'

-


18 AUG 2020 AT 14:52

ಅಹೋರಾತ್ರಿ ಅಬ್ಬರಿಸಿ
ನಿದ್ದೆಗೆಡಿಸಿದ ನಿನ್ನ ನೆನಪುಗಳು
ನೋಡಿಲ್ಲಿ ಅದೆಷ್ಟು
ಸುಖನಿದ್ರೆ ಅನುಭವಿಸುತಿವೆ.

ಗದರಿಸಿ ಗಡಿದಾಟಿಸುವ
'ಹುಂಬತನ'ಕ್ಕೂ ನಿನ್ನ
ನೆನಪುಗಳು ಮರುಳು
ಮಾಡಿದೆಯೇನೊ!
ಬೊಬ್ಬಿರಿದು ಬೊಬ್ಬೆಯಿಟ್ಟರೂ
ಯಾಕೊ ಸುಮ್ಮನಿದೆ..

-


15 JAN 2022 AT 12:37

ಎಲ್ಲಾನೂ ನಾವೇನೆ
ತಿನ್ಕೊಂಡ್ರೆ ಆಯ್ತದ!

ಮೇಲೊಬ್ಬ ಬದ್ಕವ್ನೆ
ಸಾವನ್ನೋದ್ ಬಿಡ್ತಾದ!

-


15 JAN 2022 AT 8:43

ವರುಷದ ಮೊದಲ ಹಬ್ಬ
ಸಂಕ್ರಾಂತಿಯ ಶುಭಾಶಯಗಳು..

ಸಂಕ್ರಮಣದ ಸಂಭ್ರಮ
ಸದಾಕಾಲ ಜೊತೆಗಿರಲಿ...

-


30 OCT 2021 AT 8:51

ಹಾಕಿದ್ರೆ ಕೋಟು
ಆಗ್ತಿದ್ರು ಸೂಟು
ಯಾವುದಿಲ್ಲ ಕೆಟ್ಟ ಘಾಟು
ಲೈಫು ಫುಲ್ ನೀಟು
ಕಟ್ಟೋಕಾಗಲ್ಲ ರೇಟು
ಅಪ್ಪು ಸೂಪರ್ ಗ್ರೇಟು

ಪುನೀತ ಅಸ್ತಂಗತ...

-


27 OCT 2021 AT 9:53

ನೆನಪಿನಾ ಬುತ್ತಿಯಲಿ
ನಿನ್ನದೇ ನೆನಪುಗಳು
ಒಲವಿನಾ ಕವಿತೆಯಲಿ
ನಿನ್ನವೇ ಸಾಲುಗಳು
ಬಣ್ಣಗಳು ಬೆಳಕುಗಳು
ಒಳಗೊಳಗೆ ಝೇಂಕಾರಗಳು
ಮೊಗೆದರೂ ಮುಗಿಯದ
ನಲುಮೆಗಳು..
ಆ ಮೊಗದ ಕುಡಿನೋಟಕೆ
ನಾ ಆಹುತಿ
ಹೂ ನಗುವ ತುಂಬಿಕೊಂಡ
ಪದ್ಮಾವತಿ!!

-


12 SEP 2021 AT 9:18

ಆ ಮೋಡ
ಆ ತಾರೆ
ಈ ಚುಮು ಚುಮು ಚಳಿ
ಈ ಷರತ್ತಿನ ಚಂದಿರ...

ಪ್ರೇಮ ಈಗಲ್ಲದಿದ್ದರೆ ಇನ್ನು ಯಾವಾಗ..!

-


9 SEP 2021 AT 7:45

ಗೌರಿ ಹಬ್ಬದ ಶುಭಾಶಯಗಳು

-


Fetching Chinni Madesh Quotes