........
-
ಜನರು ಪ್ರಶ್ನಿಸುವುದನ್ನಷ್ಟೇ
ಇಷ್ಟ ಪಡುತ್ತಾರೆ...;
ಉತ್ತರಿಸಬೇಕಾದ
ಪ್ರಮೇಯ ಬಂದಾಗ
ಎಲ್ಲರೂ ಮೂಗರೆ...!!!!-
ಕೈ ಬಳೆಯ ಸದ್ದು
ಕಾಲ್ಗೆಜ್ಜೆ ಗಿಲಕಿಗಳು
ನಿನ್ನದೇ ಹೆಸರು ಗುನುಗುತ್ತವೆ...!!!
ಅದಕೆಂದೇ
ಕಳಚಿಟ್ಟು ಬಿಟ್ಟೆ...;
ಈ ಎದೆ ಬಡಿತಕ್ಕೆ
ನನ್ನಲ್ಲಿ ಪರ್ಯಾಯವಿಲ್ಲ!!!-
ನಗಬೇಕು ಬೆರೆಯಬೇಕು
ನೋವುಗಳ ಮರೆಯಬೇಕು..!
ಸಾಂತ್ವನದ ನಿರೀಕ್ಷೆ
ಗಾಯದ ಮೇಲೆ
ಉಪ್ಪನ್ನಷ್ಟೇ ಸವರುತ್ತವೆ ಶಿವನ್ಯ!!!
ಎಲ್ಲದಕ್ಕೂ ಅವಲಂಬಿಸುವುದು
ಮೂರ್ಖತನವಷ್ಟೆ......???-
ಅಂದವಿರದ ಬದುಕಿಗೊಂದು
ಅರೆ ಬರೆ ಬಣ್ಣ ತುಂಬಿ
ಕೈ ಚೆಲ್ಲಿದ್ದು ಅವಳ ತಪ್ಪೆನ್ನಲೆ..?
ಹೂವೆಂದು ನಂಬಿದ್ದೆ...;
ನಂಬಿಕೆಯೆ ಮುಳ್ಳಾಗಿ
ಕೈ ಗೀರಿಸಿಕೊಂಡದ್ದು ನನ್ನ ತಪ್ಪೆನ್ನಲೆ...?
ಈಡೇರದ ಕನಸುಗಳು
ಇರುಳ ದಾರಿಯಲ್ಲಿ ಅತ್ತು ಕೂರುತ್ತವೆ
ಯಾರ ದೂರಲಿ ಹೇಳು...?
ಹಾಳು ಹೃದಯ ಪ್ರತಿಬಾರಿ
ಸುಳ್ಳನ್ನೇ ನಂಬುತ್ತದೆ
ಮತ್ತೆ ಸೋಲುತ್ತದೆ.........!!!-
ಕಲ್ಲಾದವರು.....!!!
***
ಕಣ್ಣೀರಂಟಿಸಿಕೊಳ್ಳುವ
ಸೆರಗ ತುದಿಗಷ್ಟೇ
ಅವಳ ನೋವಿನ
ಪರಿಚಯವಿದ್ದದ್ದು...;
ಇಲ್ಲಿ ಅಹಲ್ಯೆಯರು
ಬಹಳಷ್ಟಿದ್ದಾರೆ!!
ಶ್ರೀರಾಮನ ನಿರೀಕ್ಷೆ ಇಲ್ಲವಷ್ಟೆ..!!!-
ಮುಫ್ತಿಗೆ ಹರಾಜಿದೆ
ಈ ನಗು,ಖುಷಿ, ನೆಮ್ಮದಿ,
ಲೆಕ್ಕವಿರದಷ್ಟು ಪ್ರೀತಿ,ಕಾಳಜಿ..;
ಕೇವಲ ನಿನಗಷ್ಟೆ..!!-
ಆಡಿಕೊಳ್ಳುವವರು
ಕೇಳುವುದನ್ನೂ ರೂಢಿಸಿಕೊಳ್ಳಿ..;
ಚುಚ್ಚುವ ಮುಳ್ಳುಗಳಿಗೆ
ನೋವಿನ ಭಯ
ಶೋಭೆತರುವುದಿಲ್ಲ.......!!!-