ಎದುರಾಳಿ ಎದುರು
ಬೀದಿಗಿಳಿದು ಜೋರಾಗಿ ಕೂಗಾಡುತ
ಹೋರಾಟ ಮಾಡಬೇಕೆಂದ್ದಿಲ್ಲ
ಮನಸ್ಸಿನಾಳದಲ್ಲಿ ನಾಟುವಂತೆ ಮಾತನಾಡಿ
ಕೋಲಾಹಲ ಎಬ್ಬಿಸಿದರೆ ತಪ್ಪಿಲ್ಲ!-
ಹಾರಾಡೊರೆಲ್ಲ ಎದೆ ಇರಿಯೊಕ್ಕಾಗೊಲ್ಲ
ಇರಿಬೇಕು ಅನ್ನೋನು ಹೆದರಲ್ಲ
ನುಗ್ಗೊ ಧೈರ್ಯ ಇದ್ರೆ ಬಕೀಟ್ ಹಿಡಿಯೋದೇಕೆ
ನಾನು ಇಲ್ಲ ನೀನು ಅಂತ ನಿಂತ್ರೆ ಸಾಕೆ
ನಕ್ಕನ್ ನಾವ್ ಗೊತ್ತಲ್ಲ
ಹಳೆ ಏಟು ಎಲ್ಲ ಎದೆಗೆ ನೆನಪಿದೆಯಲ್ಲ!-
ನೀ ಪುಟದೇಳುವ ಹೊಡೆತಕ್ಕೆ
ಎದುರಾಳಿಗಳು ಪದರುಗುಟ್ಟುಬೇಕು
ಹಾಗೇ ಮುನ್ನುಗ್ಗಿ ಬಿಗು..!-
ನನ್ನನು ನಾನು ಅರಿತು ಕೊಂಡಾಗಲೆಲ್ಲ
ನನ್ನತನವನ್ನು ನಾನೇ ಹೆಚ್ಚು ಪ್ರೀತಿಸುತ್ತಿದ್ದೆ..-
ಎಲ್ಲವೂ ನಿನ್ನ ವಿರುದ್ಧವಿದೆ ಎಂದು ಕೊರಗಬೇಡ
ತಿಳಿದಿರು ನೀರಿಗೆ ವಿರುದ್ಧ ದಿಕ್ಕಿನಲ್ಲಿ ಚಲಿಸಿದಾಗ ಮಾತ್ರ ಈಜಿ ದಡ ಸೇರಲು ಸಾಧ್ಯ
-
ಕಷ್ಟಕ್ಕೆ ಅಂಜಿ ಕೂರಬಾರದು
ಎದುರಾಳಿಯಾಗಿ ನಿಲ್ಲಬೇಕು..
ಆಗ ಕಷ್ಟಗಳೇ ಹೆದರಿ
ಓಡುತ್ತದೆ.
ಇಲ್ಲವಾದಲ್ಲಿ ಬದುಕು ಬರಿದಾಗುತ್ತದೆ.-
ವ್ಯಕ್ತಿಯನ್ನು ದ್ವೇಷಿಸಬೇಡ!
ವ್ಯಕ್ತಿಯ ವ್ಯಕ್ತಿತ್ವದ ಕೆಟ್ಟ ಗುಣಗಳನ್ನು ದೋಷಿಸು,-
ನಿಮಗೆ ವ್ಯಕ್ತಿ ಎಷ್ಟೇ ಹತ್ತಿರವಾದರೂ,
ಅವರಲ್ಲಿ ನಿಮ್ಮ ರಹಸ್ಯ ಮತ್ತು ಎದುರಾಳಿಗಳ ಬಗ್ಗೆ ಹೇಳಿಕೊಳ್ಳುವುದು ಸರಿಯಲ್ಲ.
ಸಮಯ ನಿಂತ ನೀರಲ್ಲ.
ಒಮ್ಮೆ ನಿಮ್ಮ ಒಳಿತಿನ ಜನರಿಗೆ
ನಿಮ್ಮ ಮೇಲೆ ಕಾರಣವಿಲ್ಲದೆಯೂ ಅಸಮಾಧಾನವಾದಲ್ಲಿ;
ನಿಮ್ಮ ಬಗ್ಗೆ ಎಲ್ಲವನ್ನೂ ತಿಳಿದ ಅವರು;
ನಿಮ್ಮ ಮೇಲೆ ಸುಲಭವಾಗಿ ಅಪವಾದ ಹೇರುವರು.
ಹಾಗೆಯೇ ನಿಮ್ಮ ಎದುರಾಳಿಗಳ ಜೊತೆಗೂಡಿ
ನಿಮ್ಮ ಅಸ್ತಿತ್ವದ ಮೇಲೆಯೇ ಕಲ್ಲು ಹೊಡೆಯುವರು.
ಜೀವನದುದ್ದಕ್ಕೂ ಕಿಡಿಗೇಡಿಗಳ ನಂಟು ಬೇಡ.
ಎದುರಾಳಿಗಳು ದೂರವಿರಲಿ, ಒಡನಾಡಿಗಳು ಜೊತೆಯಿರಲಿ....-