ಬಿ. ಜಿ. ಬಿ  
324 Followers · 76 Following

read more
Joined 24 December 2019


read more
Joined 24 December 2019
30 APR AT 23:05

ಮತ್ತೊಂದು ತಿಂಗಳು
ಬದುಕ ಬಂಡಿಯ ದೂಡಲು
ಬವಣಿಸುವ ಕ್ಷಣ..
ಕಂಡ ಬಣ್ಣಬಣ್ಣದ ಕನಸುಗಳ
ಈಡೇರಿಸಿಕೊಳ್ಳಲು
ಮನಸ್ಸಿಲ್ಲದಿದ್ದರೂ ವ್ಯಾಮೋಹವಿಲ್ಲದಿದ್ದರೂ
ಹಣಕ್ಕಾಗಿ ಕಾಯುವ ದಿನ..

-


30 APR AT 22:59

ನನಸಾಗದ ಕನಸುಗಳ ಹೊತ್ತು...
ಮತ್ತೆ ಕನಸ ಕಾಣುತ ಹೊರಟೆ
ಬುದ್ಧಿವಂತರ ಸಂತೆಯ ನಡುವೆ...

-


28 APR AT 17:01

ಕಷ್ಟವೋ ಸುಖವೋ
ಅದರೆಡೆಗೆ ನಾವು ಹೋಗಬೇಕು,
ವಿಶ್ರಾಂತಿಯಿಲ್ಲದೆ ಸಾಗುವುದ ಕಲಿಯಬೇಕು..
ಆಗ ಮಾತ್ರ ಯಶಸ್ಸಿನ ಗರಿ ಸಿಗುತ್ತದೆ...

-


28 APR AT 8:21

ಮನಸಿನಲಿ ಅಲ್ಲೋಲ-ಕಲ್ಲೋಲ..
ಇಟ್ಟ ಭರವಸೆ, ಕೊಟ್ಟ ಮಾತುಗಳು
ಎದುರಾಗಿ ಮನದಲಿ ಪೀಕಲಾಟ..

ಇರಲಿ ಹಾಯಾಗಿ ಮರೆಯಾಗಿ ನನ್ನಿಂದ,
ಬಯಸುವೆನೆಂದು ಅವಳಿಗಾಗಿ ಆನಂದ..

-


27 APR AT 12:35

ಹೌದು...
ಆದರೆ ಆ ಯೋಚನೆಗೆ ತಕ್ಕುದಾದ ಹಾದಿಯಲ್ಲಿ
ಸಾಗಬೇಕು..
ಯೋಚನೆಯೊಂದು ಸಾಗುವ ದಾರಿ ಮತ್ತೊಂದು
ಎಂದಾದರೆ ಅದರ ಫಲಾಫಲ ವಿಫಲವಾಗುತ್ತದೆ..

-


27 APR AT 12:26

ಬೇರೆಯವರಿಂದ 'ಗೌರವ'ವನ್ನು
ಅಪೇಕ್ಷಿಸುವ ಮೊದಲು,
ಕೊಡುವುದನ್ನು ಕಲಿಯಿರಿ.

-


15 APR AT 21:53

ನೀನೇಬೇಕೆಂದು ಹಠ ಹಿಡಿಯುವಂತೆ ಬದಲಾಯಿಸಿ...
ನನಗೆ 'ಹಠ'ವಾಗದು ಎಂದು ದೂರ ಸರಿಯುವುದು ಸರಿಯೇ...!??

-


14 APR AT 22:57

ಅವಳ ಕಂಗಳ ಬೆಳಕಾಗ ಬೇಕಿದ್ದ ಅವನು
ಎಲ್ಲವ ಮರೆತು
ಕತ್ತಲೆಗೆ ನೂಕಿ ಮಜ ನೋಡುತಿಹನು..

-


8 FEB AT 14:58

ದೇವರನ್ನು ನಂಬಿ ಬದುಕುವವಗೆ..

ಬುದ್ಧಿವಂತರು ಎನಿಸಿಕೊಂಡವರು
ಆಡಿಸುವ ಆಟ ಲೆಕ್ಕಕ್ಕಿಲ್ಲ...

-


8 FEB AT 14:53

ನಿಯತ್ತು ನಿಯತ್ತು ಅಂತ
ನಾವ್ ಜೀವ ಸವೆಸುವುದು ಸುಮ್ನೆ..

ಈ ಬಣ್ಣದ ಲೋಕದಲ್ಲಿ
ಇನ್ಯಾರೋ ನಾಲ್ಕು ಬಣ್ಣದ ಮಾತು ಆಡಿದ್ರು ಅಂದ್ರೆ..
ನಮ್ಮ ನಿಯತ್ತಿಗೆ ನಯಾ ಪೈಸೆ ಬೆಲೆ ಇರಲ್ಲ..

-


Fetching ಬಿ. ಜಿ. ಬಿ Quotes