Umesh Sandur   (ಉಮೇಶ್ ಸಂಡೂರು)
638 Followers · 583 Following

read more
Joined 26 January 2018


read more
Joined 26 January 2018
11 MAY AT 12:31

ಜಾರಿರಲು ಮನವು
ನನ್ನನ್ನೇ ಕೋರಿ..
ನೀನೇಕೆ ನಟಿಸಿರುವೆ
ಮರೆತಂತೆ ನನ್ನನ್ನು
ಸೇರುವ ದಾರಿ..

-


11 MAY AT 12:24

ಮಾತೆಯೆಂದರೆ ಕಾಳಜಿಯ ಒರತೆ,
ಎಂದಿಗೂ ಆಗದು ಒಲವಿನ ಕೊರತೆ..

ಮಾತೆಯೆಂದರೆ ಆಸರೆಯ ಲತೆ,
ಎಂದೂ ಆರದ ಭರವಸೆಯ ಹಣತೆ..

ಮಾತೆಯೆಂದರೆ ಕಣ್ಣಿಗೆ ಕಾಣುವ ದೇವತೆ,
ಕಾಣದ ಆ ದೇವರಿಗೂ ಅವಳೆಂದರೆ ಮಮತೆ..

-


27 JAN AT 11:37

ಓ ನನ್ನ ಕೂಸೇ,
ನನದೊಂದೇ ಆಸೆ,
ನೀನೆಂದು ನಗುತ ಇರಬೇಕು..

ಓ ನನ್ನ ಕೂಸೇ,
ನೀ ನನ್ನ ಕನಸೆ,
ನೀನೆಂದು ಗೆಲುವಾಗಿ ಬರಬೇಕು..

ಓ ನನ್ನ ಕೂಸೇ,
ನೀ ನನ್ನ ಮನಸೆ,
ನಿನ್ನಿಂದ ಬದುಕು ಅರಳಬೇಕು..

-


22 JAN AT 17:46

ಅವನೊಂದು ಅಂದದ ಗುಡಿ,
ಅವಳಲ್ಲಿ ಪೂಜಿಸಲ್ಪಡುವ ದೇವಿ..

ಅವಳೊಂದು ಚೆಂದದ ನುಡಿ,
ಅವನಲ್ಲಿ ರಚಿಸಿಲ್ಪಡುವ ಕವಿ..

-


15 JAN AT 18:42

I might not talk to you often,
But you will be remembered every now and then.
In the life many People may walk in,
You will always be remained as Beloved One..

-


3 JAN AT 11:21

ನನ್ನನ್ನೇ ಹೋಲುವ ಗೊಂಬೆಯವಳು,
ನನ್ನ ಹೋಲಿಕೆಗೆ ಮೀರಿದವಳು..

ಎಲ್ಲವನ್ನು ಅನುಕರಿಸುವಳು,
ನನ್ನ ಕನವರಿಕೆಗೆ ಸ್ವಂತವಾದವಳು..

ಇಂಪಾದ ಕವಿತೆಯವಳು,
ಸದಾ ತಂಪೆರೆಯುವ ಮಳೆಯಾದವಳು..

ಕಣ್ಮನ ಸೆಳೆಯುವ ಚಿತ್ರವವಳು,
ಎಲ್ಲರ ಪ್ರೀತಿಗೆ ಪಾತ್ರಳಾದವಳು..

ಎಲ್ಲಿಯೂ ಸಿಗದ ಸಂತೋಷವವಳು,
ನಮ್ಮಿಬ್ಬರ ಬಾಳಲ್ಲಿ ನಗು ತಂದವಳು..

-


3 JAN AT 9:55

ಕಂಡಾಗ ಬದುಕಲ್ಲಿ ಉತ್ಸಾಹದ ಕೊರತೆ,
ದೊರೆಯುವುದು ಅವಳಿಂದ ಪ್ರೋತ್ಸಾಹದ ಒರತೆ..

ಬರೆಯುವಾಗ ಅವಳ ನೆನೆದು ಕವಿತೆ,
ಕಲ್ಪಿಸಿಕೊಂಡ ಸಾಲುಗಳನ್ನೇ ನಾನು ಮರೆತೆ..

ಬರೆಯಬೇಕಿದೆ ನಾನು ನನ್ನ ಚರಿತೆ,
ಅದು ಬರೀ ಅವಳ ಮತ್ತು ಅವಳ ಪ್ರೀತಿಯ ಕುರಿತೆ..

-


23 DEC 2024 AT 22:21

ಅವಳ ಪ್ರೀತಿಯ ಬಲೆಯಲ್ಲಿ
ಬಿದ್ದದ್ದೂ ಅವನೇ..
ಗೆದ್ದದ್ದೂ ಅವನೇ..

-


23 DEC 2024 AT 22:16

ಅವಳೆಂದರೆ ಬಿಟ್ಟಿರಲಾರದಷ್ಟು ಒಲವು,
ಅವಳೊಂದಿಗಿದ್ದರೆ ದುಪ್ಪಟ್ಟು ಬಲವು..

ಅವಳೆಂದರೆ ತುಂಬಾ ಸೊಗಸು
ಅವಳೊಟ್ಟಿಗೆ ಚೆಂದ ಕೊಂಚ ಮುನಿಸು..

ಅವಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು,
ಅವಳಿಂದ ಒಮ್ಮೊಮ್ಮೆ ಹಿಡಿಯುವುದು ಹುಚ್ಚು..

ಅವಳೆಂದರೆ ಮುಗಿಯದ ಆನಂದ,
ಅವಳಿಂದ ಈ ಬದುಕು ಚೆಂದ..

-


14 NOV 2024 AT 9:47

ತಿಳಿ ಹುಣ್ಣಿಮೇಯಲ್ಲಿ
ಚಂದ್ರನ ಬೆಳದಿಂಗಳಲ್ಲಿ
ಕನಸೊಂದ ಕಟ್ಟಿ
ನಿನಗೆಂದು ನಾ ಕಾದು ಕುಳಿತಿರುವೆ..

ತವರನ್ನು ಬದಿಗಿಟ್ಟು
ಆಸೆಗಳ ಸೀರೆಯನುಟ್ಟು
ಬಂದು ಬಿಡು ನೀ
ನಿನಗೆಂದೇ ಮನದಲ್ಲಿ ಮನೆ ಮಾಡಿರುವೆ..

-


Fetching Umesh Sandur Quotes