QUOTES ON #ಅ

#ಅ quotes

Trending | Latest
16 JUN 2020 AT 19:02

ಅಕ್ಷರ ಕಲಿಸುವ ವಿದ್ಯಾಮಾತೆಯು ಅಮ್ಮ
ಆವಿರ್ಭವಿಸಿದೆ ಜ್ಞಾನದ ಸಾಗರ ನೋಡಮ್ಮ
ಇನಿದರೊಳಗಿನ ಕಂಪುತಂಪಿನ ದೈವವು ನೀನಮ್ಮ
ಈರ್ಷೆಯಿಲ್ಲದೆ ಸಕಲ ಸಿದ್ಧಿಯ ಕರುಣಿಸಮ್ಮ.!!

ಉಜ್ಜೀವಿಸಲು ಭರವಸೆಯ ಬೆಳಕ ತೋರುವ ದೈವ
ಊಹಾಪೋಹಕೆ ದಾರಿ ತೋರದ ಬಾಳ ವೈಭವ
ಋಜುತ್ವ ಗುಣವನು ಸದಾ ಕಾಲಕೂ ಬೆಳೆಸುವ ಜೀವ
ಎರಕವ ನೀಡಿ ವಾತ್ಸಲ್ಯವ ಮೆರೆವ ಅದ್ವಿತೀಯ ಭಾವ!

ಏಳಿಗೆ ಬಯಸುತ ಶುಭವನು ಕೋರುವ ದಾರಿ.!
ಐಕ್ಯತೆ ಮಂತ್ರವ ಜಪಿಸಿ ಭಾವನಾತ್ಮಕತೆಯ ಸಾರಿ
ಒಲವಿನ ಕೊಂಡಿಯ ಬೆಸೆದು ನಲಿಯುವ ಈ ಪರಿ
ಓಜಸ್ವಿಯಂತೆ ಮೆರೆದು ಬದುಕುವ ಕಲೆಗೆ ಸರಿ.!

ಔಚಿತ್ಯದೊಳು ಬಾಳಿನ ಅರ್ಥವ ತಿಳಿಸುವ ಸುಮ
ಅಂದಣದ ಮೆರವಣಿಗೆಯಲಿ ಮಿಂಚುಸಿದ ರಮ
ಅಂತಃಕರಣದೊಲುಮೆಯಲಿ ಜೀಕುವ ಸಂಭ್ರಮ
ಅಕ್ಷರ ಜಾತ್ರೆಯ ಕಲಿಸಿದ ಗುರುವಿಗೆ ಪ್ರಣಾಮ.!!!

-


10 JAN 2019 AT 8:14

(ಅ)
ಅವ್ವನ ಅಂತರಂಗದ ಅಂತರಾತ್ಮ
ಅನುದಿನವೂ ಅವತರಿಸಿ
ಅಕ್ಕರೆಯ ಅತುಳ ಆನಂದವನ್ನು
ಅರ್ಪಿಸುತ್ತಿತ್ತು ಅಳುವ ಹಸುಳೆಗೆ.

-



ಋ- ಋಷಿಯಂತೆ ತಪ
ಗೈಯುತ್ತಿರುವೆ ನಾ
ಹೃದಯ ಕದ್ದ ನಿನ್ನ,
ನನ್ನ ಸ್ವಂತವಾಗಿಸುವ
ವರ ಬೇಡಲು.

-


4 AUG 2020 AT 17:13

ಈ-ಈಕೆ
ಗೊತ್ತಿಲ್ಲದೆ ನಗುವಾಕೆ
ಹತ್ತಿರಕೆ ಹೋದರೆ
ಕೈ ಕಾಲು ಮುರಿವಾಕೆ

-


21 MAR 2019 AT 23:48

ಅಂತರಂಗದಲ್ಲಿ ಅವಿತ ಅವ್ಯಕ್ತ ಅನುಭವಗಳನ್ನು
ಅಕ್ಷರಗಳಲಿ ಅಲಂಕರಿಸಿ ಅಭಿವ್ಯಕ್ತಿಗೊಳಿಸುವ ಅಪೂರ್ವ ಅನುಭೂತಿ

-


4 AUG 2020 AT 11:57

ಆ-ಆಕೆ
ನನ್ನ ಮನದಾಕೆ
ನಗುವಲ್ಲೇ
ಸೆಳೆಯುತ್ತಾಳೆ
ಸುಮಕೆ.

-


4 AUG 2020 AT 17:07

ಇ-ಇವನು
ಕಾಡುತಿಹನು ನಿದ್ದೆ ಕದ್ದು
ಕನಸಲಿ ಮತ್ತೆ ಮತ್ತೆ ಬಂದು..

-


4 AUG 2020 AT 15:48

ಉ- ಉಂಡು
ಮಲಗು
ಬೇಗ
ಕನವರಿಕೆಯ
ಸೊಗ..

-



'ಕಲೆಗೊಂದು ಬೆಳಕು ಬೆಂಗಳೂರು' 10.0
ನಿಮ್ಮ ವೇದಿಕೆ ನಿಮ್ಮ ಕಲೆಗಾಗಿ.

ಇವತ್ತು ನಾನು ವಾಚಿಸಿದ ನನ್ನ ಕವನ -

ನಾ ಕಂಡಂತೆ ನಮ್ಮ ಕನ್ನಡನುಡಿ

-


4 AUG 2020 AT 13:14

ಆ_ಆಕೆ
ಕೆಣಕುತಿಹಳು
ಮನದ ಬಯಕೆಯ ಆ ಒಂದು
ಸುಂದರ ನಗುವಿನಲಿ.

-