Savita pujar   (ಸವಿತಾ ನರೇಶ್ ಕಾಮತ್(ಅಹನಿ))
784 Followers · 256 Following

read more
Joined 24 August 2018


read more
Joined 24 August 2018
9 AUG 2021 AT 22:58

ಭಕ್ತಿಯ ಬಲದೆದುರು ಭಗವಂತನೂ ಸೋಲುವನು
ಧರ್ಮದ ನಿಷ್ಠೆಯೆದುರು ತಪಸ್ವಿಗಳು ತಲೆಬಾಗುವರು
ಪ್ರೀತಿಯ ಪರಿಪಕ್ವತೆಗೆ ಸೃಷ್ಟಿಯೂ ಸಂಭ್ರಮಿಸುವುದು
ಭಕ್ತಿ ,ಪ್ರೀತಿ,ಧರ್ಮದ ಪ್ರಸಾದಕ್ಕಾಗಿ ಪರಶಿವನ
ಪಾದಗಳಲಿ ಮನಸುಮವನರ್ಪಿಸೋಣ
ಪವಿತ್ರ ಶ್ರಾವಣ ಮಾಸದಿ ಶಿವಸ್ಮರಣೆಯಲ್ಲಿ
ಹೃದಯದ ಕತ್ತಲೆಗೆ ಕಿರುದೀಪವಾದರೂ ಉರಿಸೋಣ.

-


12 JUN 2021 AT 11:50

ಸೃಷ್ಟಿಕರ್ತನ ಟಂಕಸಾಲೆಯಲ್ಲಿ‌
ಪ್ರತಿನಾಣ್ಯಕ್ಕೂ ಅದರದೇ ಬೆಲೆಯಿದೆ.
ಯಾರಿಗೆ ಯಾವ ಕೌಶಲ್ಯದ ಅಗತ್ಯವಿದೆಯೋ
ಅದನ್ನರಿತೇ ಭೂಮಿಗೆ ತಂದಿರುವನವನು.
ವೈಶಿಷ್ಟ್ಯತೆಯೇ ಈ ಸೃಷ್ಟಿಯ ಅತ್ಯಂತ ಸುಂದರ ವಿಷಯ.ಅದನ್ನರಿತು ಹೋಲಿಕೆ ಮಾಡಿಕೊಂಡು ಕೀಳರಿಮೆಯಲ್ಲಿ ಕಾಲ ಕಳೆಯುವುದಾಗಲಿ,ಇನ್ನೊಬ್ಬರಿಗೆ ಅವಹೇಳನ‌ ಮಾಡುವುದಾಗಲಿ ಮೌಡ್ಯತೆಯ ಕೆಲಸವಲ್ಲದೆ ಮತ್ತೇನೂ ಅಲ್ಲ.

-


10 MAY 2021 AT 16:30

ನಮ್ಮ ತಟ್ಟೆಗೆ ಬಿದ್ದ ಅನ್ನವನ್ನು ನಾವೇ ತಿನ್ನಬೇಕು.ಸಾಕಾಯಿತೆಂದು ಮತ್ತೊಬ್ಬರ ತಟ್ಟೆಗೆ ಹಾಕುವುದಾಗಲಿ,ಬೇಕೆಂದು ಮತ್ತೊಬ್ಬರ ತಟ್ಟೆಯಿಂದ ತೆಗೆದುಕೊಳ್ಳುವುದಾಗಲಿ ಒಳ್ಳೆಯದಲ್ಲ.

ಬದುಕು ಹಾಗೇಯೆ ನಮಗೆ ಬಂದ ಕಷ್ಟ-ಸುಖಗಳನ್ನು ನಾವೇ ಉಣ್ಣಬೇಕು,ಎಷ್ಟೇ ಹತ್ತಿರದವರಾದರೂ ನಮ್ಮ ನೋವನ್ನಾಗಲಿ ನಲಿವನ್ನಾಗಲಿ ಅವರು ತಗೆದುಕೊಳ್ಳಲಾರರು.ಅವರವರವ ಹೊಟ್ಟೆಯ ಭಾರ ಅವರವರಿಗೆ.ಅವರವರ ಕರ್ಮದ ಭಾರ ಕೂಡ ಅವರವರಿಗೆ.ಅಪೇಕ್ಷೆಗಳಿಂದ ಅಂತರ ಕಾಯ್ದುಕೊಂಡಷ್ಟು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.

-


3 MAY 2021 AT 19:23

ಸಾವಿರ ಸಡಗರ-ಸಂಭ್ರಮಗಳನ್ನು ಸಲೀಸಾಗಿ
ನಿರರ್ಥಕತೆಯ ನೀರಿಗೆಸೆದು ನನ್ನದೇ ಗೆಲುವೆಂದು ನರ್ತಿಸುವುದು ಸಾವಿನ‌ ಸೂತಕ.

-


11 MAR 2021 AT 2:00

ಒಲವಿನೊಳಸುಳಿಯನರಿಯದೆ
ಒಲಿದೊಲವಿಗೆ ಈಜಿ ಅನಂತದಮ್ಯದೊಲವ
ದಡಸೇರಲು ಬಲವಾಗಿ ನಿಲ್ಲಬೇಕಿರುವುದು
ಮಾತ್ರ ಮತ್ತದೇ‌ ಒಲವು

-


18 FEB 2021 AT 23:25

ನಿಮ್ಮ ಪ್ರೀತಿ ತುಂಬಿದ ಕೋಪದ ಮಾತು
ಭಾವಗಳೇರಿಳಿತಗಳಲ್ಲಿ ಸಮವಾಗಿ ಸೋತು
ಕಷ್ಟ ಸುಖಗಳೆನ್ನುದಿರಿಸಿ ಜೊತೆಯಾಗಿ ಬೆರೆತು
ಒಲವಗಡಲಿನಾಳವನು ಒಂದಾಗಿ ಅರಿತು
ಹಳತಾಗದ ಪ್ರೀತಿಗೆ ಪ್ರತಿದಿನವೂ ಹೊಸತು
ನಿತ್ಯನಗುವಿನ ಶುಭವಾಗಲಿ,
ನಿಮ್ಮೊಲವು ನಮಗೆಲ್ಲ ನೆರಳಗಾಲಿ.

-


17 FEB 2021 AT 15:57

ಅವನೆದೆಯಲ್ಲಿ ತಲೆಯಿಟ್ಟು ಅತ್ತಾಗಲೇ
ಕಣ್ಣೀರಿಗೂ ಸಾರ್ಥಕತೆಯ ಮುಕ್ತಿ
ನೋವುಗಳಾಗುವುವು ನಾಳೆಗಳ ಶಕ್ತಿ

-


17 FEB 2021 AT 15:46

ಮುನಿಸಿನ ಮಹಾಶಿಖರವನ್ನು ಮುತ್ತಿನಂತ ಮಾತುಗಳ ಮಳೆಯಲ್ಲೆ ನಿರಾಯಸವಾಗಿ ನೆಲಸಮಗೊಳಿಸಬಲ್ಲ ನಿಸ್ಸೀಮನವನು

-


16 FEB 2021 AT 21:16

ತಿಳಿನೀಲಿಬಾನಂಗಳದಿ
ಬೆಳದಿಂಗಳಿನರಸನ
ಕಚಗುಳಿಯಾಟಕೆ ನಾಚುತ್ತ
ತಂಗಾಳಿ ಮುಗುಳುನಗೆ ಬೀರುತ್ತಿತ್ತು.

ಮುಸ್ಸಂಜೆಯ ರಂಗೆಲ್ಲ
ಕಡಲಲೆಗಳ ಸಂಗದಲ್ಲಿ
ಮೌನ ಸಂಭಾಷಣೆಗಿಳಿದು ಕರಗುತ್ತಿತ್ತು.

ದೂರದೂರಿನ ಗೆಳಯನ ನೆನೆದಿಲ್ಲಿ
ಸಖಿಯೊಬ್ಬಳೆದೆಯಲ್ಲುದಿಸವ ಸವಿಭಾವ
ಕವಿತೆಯ ಸಾಲೊಳಗೆ ಸೇರುತ್ತಿತ್ತು
(ಸ್ಪೂರ್ತಿ: ತಿಳಿ ಮುಗಿಲ ತೊಟ್ಟಿಲಲಿ)

-


23 JAN 2021 AT 14:42

ಸರ್ವಶಕ್ತ ಪ್ರೀತಿಯಲ್ಲೂ ಪ್ರತಿಕೂಲ
ಪರಿಣಾಮವಿದೆಯನ್ನುವುದು ಕಹಿಸತ್ಯ
ಒಲವಿತ್ತ ಹೃದಯವೇ ಛಲ ಸಾಧಿಸಲು
ನಿಂತರೆ ಕಣ್ಣೀರಲ್ಲೇ ಮನದೂಡಬೇಕು ನಿತ್ಯ

-


Fetching Savita pujar Quotes