shivarjaras snehasinchana  
664 Followers · 149 Following

read more
Joined 15 June 2019


read more
Joined 15 June 2019

ಅವಳು ಕೊಟ್ಟ
ಉಡುಗೊರೆಗಳೇನು
ಉಳಿದಿಲ್ಲ..
ನೋವಿನಿಂದಾದ ಸಿಹಿ ನೆನಪುಗಳು
ಏನೊಂದು ಮಾಸಿಲ್ಲ..
ಅವಳೋ ಹಾಗೆ, ಹೀಗೆ..
ಬಂದು ಹೋಗೋ
ಜಾಯಮಾನದವಳಲ್ಲ..
ಅಂದು,ಇಂದು, ಮುಂದು,
ಎಂದೆಂದೂ ನನ್ನೊಂದಿಗೆ ಬಂದವಳು..
ಸಿಹಿ ಕಹಿಯ ನೆನಪಿನಲ್ಲೇ ಉಳಿದವಳು
ಅವಳು ನನ್ನವಳು... ನನ್ನವಳು.. ನನ್ನವಳು..

-



ತಾಪವ ತಾಳದೇ..
ತಾಳ್ಮೆಯ ಕಳೆದುಕೊಳ್ಳದೆ..
ಸ್ಪರ್ಧೆಯೊಡ್ದುವ ಮದನಿಕೆ..
ತುಟಿಯಂಚಲಿ ಬರೆದಳು..
ಭಾವದ ಕಾವ್ಯಕನ್ನಿಕೆ...

-



ನನ್ನ ನೀವೇದನೆ
ಅವಳಿಗೆ ತಿಳಿದರಿಲಿಕ್ಕಿಲ್ಲ..
ಆ ವೇದನೆ ಇನ್ನೂ
ಮುಗಿದಂತೆ ಅವಳಿಗೆ ಅನ್ನಿಸಿಲ್ಲ..
ಮುಗಿಯದ ಆ ಬರಹಕ್ಕೆ
ಒಮ್ಮೆಯಾದರು ಬೀರು...
ಆ ನಿನ್ನ ಕಿರು ನಗೆಯ..
ಆ ನಗೆಯ ನೋಟಕೆ ಸದಾ ಕಾದು ಕುಳಿತ...
ಸೀದಾ ಸಾದಾ ಪ್ರೇಕ್ಷಕ ಮಾತ್ರ..

-



ಗೊತ್ತೇಯಿರದ ಕೆಲವುಗಳಿಗೆ..
ಹಲವುಗಳನ್ನು ಹತ್ತಿಕ್ಕುವ ಭರದಲ್ಲಿ..
ಭಾವನೆಗಳ ಕಗ್ಗೊಲೆಯಾದಾಗ..
ಕೊಂದೆನೆನ್ನುವವರ..
ಕೊಂಗು ಲೇಪಿತ ಸಿಹಿಯ..
ಸವಿಯಲೋಲ್ಲದು ಮನ..
ಸವಿದರು ತೃಪ್ತಿಸದು ಆ ತನ..

-



ಮತ್ತೊಮ್ಮೆ
ಮೌನಿಯಾಗುವಾಸೆ ನಿನ್ನೊಂದಿಗೆ...
ನಿನ್ನ ರಕ್ಕಸದ ಅಲೆಗಳ ನರ್ತನದೊಂದಿಗೆ..
ನನ್ನೇ ಮರೆಯುವಂತೆ..
ಮಾಡಿದ ಮರೆವಂತೆ❤️
ನಿನ್ನೊಂದಿಗೆ ನಾ...
ಎಂದೆಂದು ಇರುವಂತೆ..
ನಿನ್ನಂದಕೆ ಪದ ಗೀಚುವ
ಪ್ರಾಣದ ಪ್ರಸಂಗಕೆ ❤️

-



ಧಣಿದ ಹೃದಯಕ್ಕೊಂದು..
ನಿಲುಗಡೆಯ ನಿಲ್ದಾಣವೊಂದರ..
ಜರೂರಿ ವಿಶ್ರಾಂತಿಬೇಕಿದೆ..
ಹಳೆಯದಾದರೂ..
ಹೊಸತು ಎನ್ನಿಸುವ ಮಟ್ಟಿಗಾದರೂ
ನಮ್ಮನ್ನು ನಾವು ಮರೆಯಲು..

-



ಜಗದಗಲದ ಭೋಗವನ್ನೆಲ್ಲಾ..
ಬಗೆದು ತ್ಯಾಗಿಯಾಗೋ ಬಯಕೆ..
ನನ್ನೀ ಚಿತ್ತಕೆ ನಿನ್ನ ಚಿತ್ರವ ನೆನೆಯುತಾ..
ಆ ನೆನಪುಗಳ ಮೆಲಕು ಹಾಕುತಾ..

-


12 DEC 2023 AT 21:34

ಕೊರಗೊಂದು ಹಾಗೆ ಉಳಿದಿದೆ ಗೆಳತಿ..
ನೀ ಹೋದ ನಂತರ..
ಮಮ್ಮಲ ಮರುಗುತಿದೆ ಹೃದಯ..
ಕೇವಲ ನಿನ್ನ ಕಾರಣಕ್ಕೆ ಮಾತ್ರ..
ಒಮ್ಮೆಯಾದರು ಪ್ರವಹಿಸು..
ನೆನಪಿನ ದೀಪಗಳ ಹೊತ್ತಿಸುವಂತೆ..
ನಿನ್ನ ನೆನಪುಗಳಿಗೆ..
ನಾನೊಬ್ಬ ಹ(ಗೆ)ಳೆಯ..
ಇಂತಿ ಹೇಗೆ ಬಿಂಬಸಲಿ ಎಂದು ತೋಚದೆ..
ನಿನಗಾಗಿ ಕೂತವ..
ನಿನ್ನವ.. ನಾ ನಿನ್ನವ..

-


1 DEC 2023 AT 7:24

ತುರ್ತು ಪರಿಸ್ಥಿತಿಯ
ಕೆಲ ನಿರ್ಧಾರಗಳು..
ಅವಸರದಲ್ಲಾಗುವ ಅಪಾಯಗಳಿಗೆ..
ಅಡಿಪಾಯವಿದ್ದಂತೆ..
ಎಚ್ಚರವಹಿಸಿ ಯೋಚಿಸಬೇಕು..
ಇಲ್ಲವಾದರೆ ಭವಿಷ್ಯತ್ತಿನಲ್ಲಿ..
ಮಾರಕವಾಗಿ ಪರಿಣಮಿಸಬಹುದು..

-


29 NOV 2023 AT 8:55

ಉನ್ಮಾದದ ಉಯಿಲಲ್ಲೇ..
ಶುರುವಾಯಿತೊಂದು ಗದ್ಯ..
ನಡು ನಡುವೆ ಓದುತಿರೇ..
ಬರೆದಾಯಿತು ಮನದೊಳಗೊಂದು ಪದ್ಯ..

-


Fetching shivarjaras snehasinchana Quotes