ನೆಂಟರಿರುವವರು ನಗನಾಣ್ಯದ ವ್ಯಾಮೋಹಕ್ಕೆ
ನಾಟಕೀಯರಂಗದ ಪಾತ್ರಗಳಿವು ಸ್ವಾರ್ಥದ ದಾಹಕ್ಕೆ.!-
ತೇವಗೊಂಡಾಗ ಮಾತ್ರ ಮರಳು ಪಾದಕ್ಕೆ ಅಂಟುವುದು,
ಅವಶ್ಯಕತೆ ಇದ್ದಾಗ ಮಾತ್ರ ಒಬ್ಬರಿಗಿನ್ನೊಬ್ಬರ ನೆನಪಾಗುವುದು,
ಇದನ್ನು ತಪ್ಪೆಂದುಕೊಳ್ಳುವುದು ದೊಡ್ಡ ತಪ್ಪು,
ಇದು ತಪ್ಪಲ್ಲಾ ಮಾನವನ ಸಹಜ ಗುಣ ಸ್ವಭಾವ.
-
ಅವನ ಹರಿದಬದುಕನ್ನು
ಮುಚ್ಚಲು ಬಿಡುತ್ತಿಲ್ಲ
ಮಾತಿನ ಸೂಜಿಗಳು
ಕೆಲವೊಮ್ಮೆ ಅವಶ್ಯಕತೆಗಳು
ಸೂಜಿಗೆ ಸಾಥ್ ಕೊಡುತ್ತವೆ!-
ಎಲ್ಲರಿಗೂ ನಾವು ಒಳ್ಳೆಯವರಾಗಲು ಸಾಧ್ಯವಿಲ್ಲ.
ಆದ್ದರಿಂದ ಸುಮ್ಮನೆ ಎಲ್ಲರನ್ನೂ 'ಪ್ಲೀಸ್ '
ಮಾಡುವ ಅವಶ್ಯಕತೆ ಇಲ್ಲ,!-
ಸಹಾಯ ಹಸ್ತ ನೂರು ಸಲ. ಕಾಡಿದ್ದು, ಬೇಡಿದ್ದು ಎಷ್ಟು ಸಲ.
ಕೆಲಸವಾಯಿತಲ್ಲ ನೀವೇಕೆ ಇನ್ನು ,ನನ್ನ ಬೆನ್ನಷ್ಟೇ ಈಗ.
ಕೃತಜ್ಞತೆಯೋ,ದೇಶಾವರಿಯೋ..ಅನ್ವೇಷಣೆ ನನ್ನ ಪಾಲಿಗೆ.-
ಉಪ್ಪು ರುಚಿಗೆ ತಕ್ಕಂತೆ ಇದ್ದರೆ
ಸಾಂಬಾರು ಚೆಂದ
ಮಾತು ಅವಶ್ಯಕತೆಗೆ ತಕ್ಕಂತೆ ಆಡಿದರೆ
ಸಂಬಂಧಗಳು ಅಂದ-
ಬೇಡವೆಂದು ಯಾರನ್ನು
ದೂಷಿಸಬೇಡಿ ಏಕೆಂದರೆ
ಒಂದಲ್ಲ ಒಂದು ದಿನ
ಅವರ ಅವಶ್ಯಕತೆ
ಬಂದೇ ಬರುವುದು.-
ಕತ್ತಲಿದ್ದಾಗ ಮಾತ್ರ ಬೆಳಕಿನ ಬೆಲೆ ಗೊತ್ತಾಗುವುದು ಇಲ್ಲದಿದ್ದರೆ ಬೆಳಕಿನ ಅರಿವು ನಮಗಿರುವುದಿಲ್ಲ
ಹಾಗೆಯೇ ಅವಶ್ಯಕತೆ ಇದ್ದಾಗ ನಮ್ಮನ್ನು ನೆನಪಿಸುವರು ಅಗತ್ಯವಿಲ್ಲದಿದ್ದಾಗ ನಮಗೂ ಬೆಲೆ ಇಲ್ಲ ಇದುವೇ ಬದುಕು.-
ಆಸೆ ಮನುಷ್ಯನನ್ನ ಬದುಕಿಸುತ್ತೆ,
ಇಷ್ಟ ಮನುಷ್ಯನನ್ನ ಏನು ಬೇಕಾದರೂ ಮಾಡಿಸುತ್ತೆ,
ಅವಶ್ಯಕತೆ ಮನುಷ್ಯನಿಗೆ ಎಲ್ಲವೂ ಕಲಿಸುತ್ತೆ.-