ನನ್ನೆಲ್ಲಾ ಬೇಸರವ ತಣಿಸಿ
ಮೊಗದಿ ನಗುವ ಅರಳಿಸುವ
ಕೋಪ,ತಾಪವ ಕ್ಷಣವೇ ಮರೆಸುವ
ನನ್ನೆಲ್ಲಾ ಸಂತಸಕ್ಕೆ ನೀನೇ ಕಾರಣ♥️-
ಮುಂದಿನ ದಿನಗಳಲ್ಲಿ ತಂದೆ ತಾಯಿಗೆ
"ಗೌರವ" ತರುವ ಮಗನಾಗಿ..,
ಮನೆ ಮನಗಳಿಗೆ ಬೆಳಕು ತರುವ "ದೀಪ"ವಾಗಿ..,
ಜೀವನಪೂರ್ತಿ ಉಜ್ವಲವಾಗಿ ಬೆಳಗುತಿರು ಕಂದ...🧡
😘ಹ್ಯಾಪಿ ಹುಟ್ದಬ್ಬ ಚಿಕ್ಕು😘-
ಅಂಗಾಲ ತೊಳೆದು
ಸೆರಗಿನಿಂದೊರೆಸಿ,
ಪದಗಳ ಪುಷ್ಪಗಳ
ನಿನ್ನ ಪಾದಕರ್ಪಿಸುವೆ,
ಹಿಡಿದ ಕೈಯಾ ಸಡಿಲಿಸದೆ
ಬಿಗಿ ಮಾಡಿ ,ಬರಿದಾದ
ಬಾಳಲ್ಲಿ ಬೊಗಸೆ ಪ್ರೀತಿಯ
ಬಯಸಿ ,
ಬೇರೆಲ್ಲೂ ಕಾಣದಷ್ಟು
ಪ್ರೀತಿಯ
ನಿನಗಾಗೆ
ಹೊತ್ತು ತರುವೆ,
ಮನೆಯ ಮಗನಾಗಿ
ಈ ಮನದ ಬೆಳಕಾಗಿ
ನನ್ನೆತ್ತವರ ಬೇರೆಂದು
ಭಾವಿಸದೆ,
ಜೊತೆ ಹುಟ್ಟಿದವರಿಗೆ
ನಾ ತಾಯ ಸ್ಥಾನದಲ್ಲಿದ್ಧರೆ
ನೀ ತಂದೆ ಸ್ಥಾನದಿ
ನನ್ನ ಮನ ಸೇರು ಬಾರೋ
ನನ್ನಪ್ಪನ ಅಳಿಮಯ್ಯ...!!-
ಅತ್ತೆ....ಅತ್ತೆ....ನನ್ನತ್ತೆ,,,
ನನ್ನ ದಡ್ಡ ಅಂತಾಳ್ ನೋಡತ್ತೆ
ಇವಳು ಹೇಳ್ದಂಗೆ ಕೇಳ್ತೀನತ್ತೆ
ಎಲ್ಲ ಕೆಲಸಾನು ಮಾಡ್ತಿನತ್ತೆ
ಆದ್ರು ಸುಮ್ನೆ ಬೈತಾಳೆ ನೋಡತ್ತೆ..!!
ಅವಳು ಕೇಳಿದ್ದೆಲ್ಲ ಕೊಡುಸ್ತೀನತ್ತೆ
ಹಸಿವಾದ್ರೆ ಬಾಯ್ಗಿಟ್ಟು ತಿನ್ನುಸ್ತೀನತ್ತೆ
ಶೆಕೆ ಆದ್ರೆ ಗಾಳಿ ನಾನೇ ಬೀಸ್ತೀನತ್ತೆ
ಚಳಿ ಆದ್ರೆ ರಗ್ಗು ಹೊದ್ದುಸ್ತೀನತ್ತೆ..!!
ಬೆಳೆಗ್ಗೆ ಸಂಜೆ ಕಸನೂ ಗುಡುಸ್ತೀನತ್ತೆ
ತಪ್ಪದೇ ನೆಲನೂ ಸಹ ವರುಸ್ತೀನತ್ತೆ
ದಿನಾ ಪಾತ್ರೆನು ನಾನೇ ತೊಳಿತೀನತ್ತೆ
ವಾರಪೂರ್ತಿ ಬಟ್ಟೆನು ಒಗೀತೀನತ್ತೆ..!!
ಅವಳು ಮಲ್ಗೊತನಕ ನಾ ಮಲ್ಗಲ್ಲತ್ತೆ
ಅವಳು ಏಳೋ ಮುಂಚೆ ಎದ್ದಿರ್ತೀನತ್ತೆ
ಕಾಫೀನು ನಾನೇ ಮಾಡಿಕೊಡ್ತೀನತ್ತೆ
ಬೆಡ್ ಶೀಟ್ ನು ನಾನೇ ಮಡುಚ್ತೀನತ್ತೆ..!!
ಅತ್ತೆ....ಅತ್ತೆ....ನನ್ನತ್ತೆ,,,
ನನ್ನ ದಡ್ಡ ಅಂತಾಳ್ ನೋಡತ್ತೆ
ನಾನು ಏನ್ಮಾಡ್ಲಿ ನೀನೇ ಹೇಳತ್ತೆ
ಅಯ್ಯೋ..ನೀನು ಹಂಗೆ ಅಂತೀಯ ಹೋಗತ್ತೆ..!! ಹರೀಶ್ ಎಸ್ ಎಂ-
ಮಾವನೆಂದರೆ
ಅಳಿಯನಿಗೆ
ಪಂಚಪ್ರಾಣ...
ಮಾವನಲ್ಲವೇ
ವರದಕ್ಷಿಣೆಯಾಗಿ
ಕೊಟ್ಟದ್ದು ಒಡವೆ, ಹಣ...-
ನನ್ನಕ್ಕನ ಮಡಿಲು ತುಂಬಿದ ನನ್ನ ಅಳಿಯ,
ನನ್ನರಮನೆಯಲ್ಲಿ ನನಗೆ ಪುಟ್ಟ ಗೆಳೆಯ,
ಜೊತೆಲಿದ್ದರೆ ತಿಳಿಯದು ನನಗೆ ಸಮಯ,
ನೀನಿರುವ ಮನೆ ಸದಾ ಆನಂದ ನಿಲಯ,
ನೀ ಭುವಿಗಿಳಿದ ಈ ದಿನ
ಮನೆಯೊಳಗೆಲ್ಲಾ ಸಂತಸಮಯ,
ನಿನಗಿದೋ ನನ್ನಿಂದ ಶುಭಾಶಯ...
"🎂💐ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು💐🎂"
-
ಡುಂಡಿರಾಜರ ಹನಿಗವನ
ನಗಿಸುವುದು ನಗೆಗವನ..
ಹೆಂಡ್ತಿ ಮುಂದೆ ಹೇಳಿ
ನಗಬೇಡಿ,
ನಿಮ್ಮದಾಗಬಹುದು
ಅಲ್ಲೇ ಹವನ...
ಇವತ್ ನಮ್ ಬದಿಗೆ
ಅಳಿಯನ ಅಮಾಸಿ ನಾ...-
ಅಳಿಯನೆಂದರೆ
ಮಾವನಿಗೆ
ಪಂಚಪ್ರಾಣ...
ಅಳಿಯನಿಗೇ
ಕೊಟ್ಟದ್ದಲ್ಲವೆ
ವರದಕ್ಷಿಣೆಯ ಹಣ...-