ಮನದ ಕಡಲ ಕಡೆದು ನೋಡು
ಬದುಕು ಎಷ್ಟು ಸುಂದರ !
ಬಂದಿದ್ದು ಬರಲಿ ಕಾದು ನೋಡು
ಭರವಸೆಯ ಬೆಳಕಿದೆ ಮಾಡು ನೀ ಸ್ವೀಕಾರ... !!-
❤️
ಕನ್ನಡ ಬರಹ...
ಮನದಾಳದ ಮನದಿಚ್ಚೆಯಂತೆ ✍🏻ಈ ಬರಹಕೆ ಈಗತಾನೆ ಹೆಜ್ಜೆ 👣 ಹಾಕುತ್ತಿರುವೆ.. ಬರಹ ನನಗೆ ಸ... read more
ದಿಕ್ಕಿಲ್ಲದ ಹೃದಯಕ್ಕೆ ಹೆತ್ತವಳೇ ಆಸರೆ
ಹೆತ್ತವಳಿಲ್ಲದ ಜೀವನಕ್ಕೆ ದೇವರೇ ಆಸರೆ...
ಹೆತ್ತವಳೊಂದಿಗೆ ಇರಬೇಕೆಂಬ ಇತ್ತೊಂದು ಆಸೆ
ಅವಳಿಲ್ಲದ ಈ ಜೀವನಕ್ಕೆ ಭಗವಂತನೊಬ್ಬನೇ ಭರವಸೆ...-
ಕೈ ತುಂಬಾ ಹಸಿರು ಬಳೆ ತೊಟ್ಟು
ಕೆಂಪು ಕುಂಕುಮವನ್ನಿಟ್ಟು
ಕಣ್ಕಪ್ಪು ಬೈತಲೆಯನ್ನಿಟ್ಟು
ಇಳಕಲ್ ಸೀರೆಯನ್ನುಟ್ಟು
ಮನೆಯ ಜ್ಯೋತಿಯಾಗಿ
ನನಗೆ ಜೊತೆಯಾಗಿ
ಕಾಲ್ಗೆಜ್ಜೆ ತೊಟ್ಟು ಬಲಗಾಲಿಟ್ಟು
ಬಾರೆ ನೀ ನನ್-ಮನೆಗೆ
ಅಮ್ಮನಾಗಿ ನನ್ನ ಬಾಳಿಗೆ
ಕಣ್ಣಿಟ್ಟು ಕಾಪಾಡುವೆ ಕೊನೆವರೆಗೆ...-
ಕಲಿಕೆಯಲ್ಲಿರಲಿ ನಿಮ್ಮ ಪಯಣ
ಮಾಡದಿರಿ ಕಾಲ ಹರಣ
ಕೆಲವರಿಗೆ ಅವಶ್ಯಕ ಗುಣ
ಹಲವರಿಗೆ ಅನಿವಾರ್ಯ ಹಣ
ಸಂಪಾದಿಸಿ ಸ್ನೇಹಿತರ ಗಣ
ಕಲೆಹಾಕಿ ನೆನಪುಗಳ ಹೂರಣ
ಅದ್ಹಾಗೆ ಬರುವುದು ಒಂದಿನ ಮರಣ
ಎಲ್ಲರಿಗೂ ಇದೇ ಅಂತಿಮ ನಿಲ್ದಾಣ...-
ಭಾವನೆಗಳನ್ನು ಬದಿಗಿಟ್ಟಿದ್ದರೆ ಬಹುಷ್ಹಃ
ಮಾತು ಮರೆಯಾಗುತ್ತಿರಲಿಲ್ಲವೇನೋ.. ? 😟
ಅಂದು ಮರೆಮಾಚದಿರುವ ಭಾವನೆಗಳೇ
ಇಂದು ಎಲ್ಲವನ್ನೂ ದೂರವಾಗಿಸಿವೆ... 😟
ದಯಮಾಡಿ ಮನ್ನಣೆಯಿಟ್ಟು ಮನ್ನಿಸು🙏
-
ಕನ್ನಡ ನಿಘಂಟನ್ನೇ ಹೊತ್ತು ತಂದರು ಪದಗಳಲ್ಲಿ ಪೊಣಿಸಲಾಗದ, ವರ್ಣಿಸಲಾಗದವಳನ್ನು ನೆನೆಯಲು ವರ್ಷದ ಒಂದು ದಿನ ಸಾಕೇ..?
...
-
ಹೇ ಹುಡುಗಿ
ಹೋಗದಿರು ನೀ ನನ್ನಿಂದ ದೂರಾಗಿ,
ಇರಲಾರೆ ನಾ ನಿನ್ನ ಹೊರತಾಗಿ..
ನನ್ನೊಡನೆ ಇರು ನೀ ನನ್ನ ಗೆಳತಿಯಾಗಿ,
ನೋವು ನಲಿವಿನಲಿ ಜೊತೆಯಾಗಿ..!
ಬಂದುಬಿಡು ನನ್ನ ಎದೆಗೂಡೊಳಗೆ,
ಬಿಟ್ಟಿರಲಾರೆ ನಿನ್ನ ಅರೆಘಳಿಗೆ..!
ಬಡಿತವಾಗಿರುವೆ ನನ್ನೆದೆಯಲ್ಲಿ,
ಬದುಕಾಗಿರುವೆ ನನ್ನ ಬಾಳಲ್ಲಿ..!
ಹೋಗದಿರು ನೀ ನನ್ನಿಂದ ದೂರಾಗಿ,
ಇರಲಾರೆ ನಾ ನಿನ್ನ ಹೊರತಾಗಿ..!
-
Before you leave me,
Remember ours past days,
Understand present days,
Think about ours future dream days...
-